ಬೆಂಗಳೂರು: ಸತತವಾಗಿ 3ನೇ ದಿನವೂ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ ಇಂದು ಪ್ರತಿ ಲೀಟರ್ಗೆ ತಲಾ 32 ಪೈಸೆ ಏರಿಕೆ ಮಾಡಲಾಗಿದೆ. ಏರಿಕೆ ಮಾಡಿದ ಬಳಿಕ ಬೆಲೆ ₹90.78 ಹೆಚ್ಚಳವಾಗಿದೆ. ಹಾಗೂ ಡೀಸೆಲ್ ಬೆಲೆ ಲೀಟರ್ಗೆ ₹82.72 ಏರಿಕೆಯಾಗಿದೆ. ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರುತ್ತಲೇ ಇದೆ. ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿನ ಸಂಕಷ್ಟದ ನಂತರದಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ಬೆಲೆ ಏರಿಕೆ ಮಟ್ಟವನ್ನು ಕಾಣುತ್ತಲೇ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 90ರ ಗಡಿ ದಾಟಿದ್ದರೂ ತೈಲ ಉತ್ಪನ್ನಗಳ ಅಬಕಾರಿ ಶುಲ್ಕ ಕಡಿತದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ; ಸೆಸ್ ವಾಪಸ್ ತೆಗೆಯುವುದಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯ ಸಭೆಗೆ ನಿನ್ನೆ ತಿಳಿಸಿದ್ದಾರೆ.
ಇಂಧನ ಬೆಲೆ ಏರಿಕೆಗೆ ಜಾಗತಿಕವಾಗಿ ತೈಲ ಬೆಲೆ ಏರಿಕೆ ಒಂದಾದರೆ, ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ತೆರಿಗೆಯಿಂದ ಇಂಧನ ಬೆಲೆ ಏರಿಕೆಯಾಗುವುದೂ ಒಂದು ಕಾರಣವಾಗಿದೆ. ಎರಡು ವಾರಗಳ ಹಿಂದೆಯಿಂದ ದೇಶದಲ್ಲಿ ಇಂಧನ ಬೆಲೆ ಏರಿಕೆಯತ್ತ ಮುಖಮಾಡಲು ಪ್ರಾರಂಭಿಸಿತು. ಕಳೆದ 15 ದಿನಗಳಲ್ಲಿ ಪೆಟ್ರೋಲ್, ಡೀಸಲ್ ಬೆಲೆ 2ರಿಂದ 3 ರೂ. ಏರಿಕೆಯಾಗಿದೆ.
Explainer: ಭಾರತದಲ್ಲಿ ಪೆಟ್ರೋಲ್ ಬೆಲೆ ಏರುತ್ತಲೇ ಇದೆ! ಯಾಕೆ?
ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಲಾಕ್ಡೌನ್ ಪರಿಣಾಮವಾಗಿ ತೈಲ ಬೆಲೆ ಏರಿಕೆ ಪರಿಣಾಮ ಬಳಕೆದಾರರ ಮೇಲೆ ಆಗಿರಲಿಲ್ಲ. ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸವಾದ್ದರಿಂದ ಇಂಧನ ದರ ಇಳಿಕೆಯಾಗಿತ್ತು. ಜಾಗತಿಕವಾಗಿ ಸುಧಾರಿಸಿಕೊಂಡ ಬಳಿಕ ಇಂಧನ ಬೆಲೆ ಹೆಚ್ಚುತ್ತಿದೆ.
Petrol & diesel prices per litre — Rs 87.85 & Rs 78.03 in Delhi, Rs 94.36 & Rs 84.94 in Mumbai, Rs 89.16 & Rs 81.61 in Kolkata and Rs 90.18 & Rs 83.18 in Chennai. pic.twitter.com/GD0g3L1yc1
— ANI (@ANI) February 11, 2021
ವಿವಿಧ ನಗರಗಳಲ್ಲಿ ಪೆಟ್ರೋಲ್ ಬೆಲೆಯ ಮಾಹಿತಿ
ಪ್ರಸ್ತುತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ, ನಾಲ್ಕು ಮೆಟ್ರೋ ನಗರಗಳಾದ ದೆಹಲಿಯಲ್ಲಿ ₹87.85 ಮತ್ತು ಡೀಸೆಲ್ ಬೆಲೆ ₹78.03, ಚೆನ್ನೈನಲ್ಲಿ ₹90.18 ಮತ್ತು ಡೀಸೆಲ್ ₹83.18, ಕೊಲ್ಕತ್ತದಲ್ಲಿ ₹89.16 ಮತ್ತು ಡೀಸೆಲ್ ₹81.61 ಹಾಗೂ ಮುಂಬೈನಲ್ಲಿ ಪೆಟ್ರೋಲ್ ದರ ₹94.36 ಹಾಗೂ 84.94 ದರವಿದೆ ಎಂದು ಎಎನ್ಐ ವರದಿ ಮಾಡಿದೆ.
Published On - 10:20 am, Thu, 11 February 21