AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate: ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

Gold Silver Price: ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಹೊರಟಿದ್ದರೆ ಇಂದು ದರ ಎಷ್ಟಿರಬಹುದು ಎಂಬುದಕ್ಕೆ ಸಂಪೂರ್ಣ ಮಾಹಿತಿ ಇಲ್ಲಿದೆ.

Gold Rate: ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
shruti hegde
|

Updated on:Feb 11, 2021 | 5:07 PM

Share

 ಬೆಂಗಳೂರು: ಚಿನ್ನದ ಬೆಲೆ ಇಂದು ಸ್ವಲ್ಪ ಮಟ್ಟದ ಏರಿಕೆ ಕಂಡಿದೆ. ವಾಸ್ತವವಾಗಿ ವರ್ಷದ ಅವಧಿಯಲ್ಲಿ ನಗರದಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ₹44,750, ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ₹48,810. ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಚಿನ್ನದ ಮೌಲ್ಯದಲ್ಲಿ ಹೆಚ್ಚಳವಾದರೂ ಚಿನ್ನದ ಮೇಲಿನ ಆಸೆ ಎಂದಿಗೂ ಕಡಿಮೆಯಾಗಲ್ಲ. ನೀವು ಚಿನ್ನಕ್ಕೆಂದು ಕೂಡಿಟ್ಟ ಹಣದಲ್ಲಿ ಇಂದಿನ ಚಿನ್ನದ ದರಕ್ಕೆ ಸರಿ ಹೊಂದಬಹುದೇ ಎಂದು ತಿಳಿಯಲು ಒಮ್ಮೆ ಚಿನ್ನದ ಬೆಲೆಯನ್ನು ಕಣ್ಣುಹಾಯಿಸಿ.

ದಿನಗಳು ಸಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಕಾಣುತ್ತವೆ. ನಿನ್ನೆ 22 ಕ್ಯಾರೆಟ್​ ಚಿನ್ನದ ಬೆಲೆ 4,465 ರೂ ಇದ್ದ ದರ ಇದೀಗ 4,475 ಏರಿಕೆಯಾಗಿದೆ. ಅಂದರೆ 10 ರೂಪಾಯಿ ಏರಿಕೆ ಕಂಡಿದೆ. ಕಳೆದ ವರ್ಷ ಆಗಸ್ಟ್​ 7ರಂದು 10ಗ್ರಾಂಗೆ 56,191 ರೂ ಗರಿಷ್ಠಮಟ್ಟ ತಲುಪಿದ ನಂತರದಲ್ಲಿ ಇದೀಗ 44,750 ರೂ.ಗೆ ತಲುಪಿದೆ. ಅಂದರೆ ಇಳಿಮುಖಕ್ಕೆ ತಿರುಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್: ಗ್ರಾಂ       22 ಕ್ರಾರೆಟ್ ಚಿನ್ನ (ಇಂದು)        22 ಕ್ಯಾರೆಟ್ ಚಿನ್ನ (ನಿನ್ನೆ)   

1 ಗ್ರಾಂ            ₹4,475                                          ₹4,465 8ಗ್ರಾಂ            ₹35,800                                       ₹35,720 10 ಗ್ರಾಂ         ₹44,750                                        ₹44,650 100ಗ್ರಾಂ        ₹4,47,500                                   ₹4,46,500

24 ಕ್ಯಾರೆಟ್ ಚಿನ್ನದ ಬೆಲೆ: ಗ್ರಾಂ         ಇಂದು                   ನಿನ್ನೆ

1ಗ್ರಾಂ         ₹4,881                    ₹4,871 8ಗ್ರಾಂ        ₹39,048                 ₹38,968 10ಗ್ರಾಂ      ₹48,600                 ₹48,810 100ಗ್ರಾಂ    ₹4,88,100             ₹4,87,100

ಬೆಳ್ಳಿ ದರ: 

ಮನೆಗಳಲ್ಲಿ ಪೂಜೆ ಪುನಸ್ಕಾರಗಳಿಗೆಂದು ಹಾಗೂ ದೇವರ ಮನೆಗೆ ಹೆಚ್ಚು ಬೆಳ್ಳಿಯನ್ನು ಕೊಂಡುಕೊಳ್ಳುತ್ತೇವೆ. ಹಾಗಾದರೆ ಎಷ್ಟಿರಬಹುದು ಬೆಳ್ಳಿಯ ದರ ಎಂಬುದನ್ನು ನೋಡುವುದಾದರೆ,

ಗ್ರಾಂ      ಬೆಳ್ಳಿ ದರ (ಇಂದು)                   ಬೆಳ್ಳಿ ದರ(ನಿನ್ನೆ)

1ಗ್ರಾಂ        ₹69.20                                     ₹69.20 8ಗ್ರಾಂ        ₹553.60                                 ₹553.60 10ಗ್ರಾಂ      ₹692                                      ₹692 100 ಗ್ರಾಂ   ₹6,920                                 ₹6,920 1 ಕೆ.ಜಿ         ₹69,200                            ₹69,900

ಇದನ್ನೂ ಓದಿ:  Gold Rate Today: ಇಂದು ಬೆಂಗಳೂರಿನಲ್ಲಿ ಚಿನ್ನದ ದರ 

Published On - 8:35 am, Thu, 11 February 21