Petrol Price: ಸತತವಾಗಿ 4ನೇ ದಿನವೂ ಏರಿದ ಪೆಟ್ರೋಲ್ ದರ

| Updated By: Digi Tech Desk

Updated on: Feb 17, 2021 | 8:56 AM

Petrol Diesel Rate: ಸತತವಾಗಿ ನಾಲ್ಕನೇ ದಿನವೂ ಪೆಟ್ರೋಲ್​ ಮತ್ತು ಡೀಸೆಲ್​ ದರದಲ್ಲಿ ಏರಿಕೆ ಕಂಡಿದ್ದು, ಇಂದು ಪೆಟ್ರೋಲ್​ ಮತ್ತೆ 38 ಪೈಸೆ ಏರಿಕೆ ಕಂಡಿದೆ. ಪ್ರಸ್ತುತದಲ್ಲಿ ಬೆಂಳೂರಿನಲ್ಲಿ ಪ್ರಸ್ತುತ ಪೆಟ್ರೋಲ್​ ದರ ಪ್ರತಿ ಲೀಟರ್​.ಗೆ 91.09 ರೂ ಹಾಗೂ ಡೀಸೆಲ್ 83.09 ರೂ ಇದೆ. 

Petrol Price: ಸತತವಾಗಿ 4ನೇ ದಿನವೂ ಏರಿದ ಪೆಟ್ರೋಲ್ ದರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸತತವಾಗಿ 4ನೇ ದಿನವೂ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಇದೀಗ ಪೆಟ್ರೋಲ್​ ಬೆಲೆ ₹89.44 ಹಾಗೂ ಡೀಸೆಲ್​ ಬೆಲೆ ₹81.96 ಆಗಿದೆ. ಹಾಗೆಯೇ ಭಾರತದ ವಿವಿಧ ನಗರಗಳಲ್ಲಿ ತೈಲದ ಬೆಲೆ ಏರಿಕೆ ಕಂಡುಬರುತ್ತಿದೆ. ಕಳೆದ 43 ದಿನಗಳಿಂದ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯ ಏರಿಕೆ ಕಂಡು ಬರುತ್ತಿದೆ. ಕಳೆದ 4 ದಿನಗಳಿಂದ ಸತತವಾಗಿ ಏರಿಕೆಯ ಮಟ್ಟವನ್ನು ತಲುಪಿದೆ. ಇಂದು ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 38 ಪೈಸೆ ಏರಿಕೆ ಕಂಡಿದೆ. ಹಾಗೂ ಬೆಂಳೂರಿನಲ್ಲಿ ಪ್ರಸ್ತುತ ಪೆಟ್ರೋಲ್​ ದರ ಪ್ರತಿ ಲೀಟರ್​.ಗೆ 91.09 ರೂ ಹಾಗೂ ಡೀಸೆಲ್ 83.09 ರೂ ಇದೆ. 

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯಿಂದಾಗಿ ಅದೆಷ್ಟೋ ಪ್ರತಿಭಟನೆಗಳು ನಡೆಯುತ್ತಿದ್ದರೂ, ಯಾವುದನ್ನೂ ಲೆಕ್ಕಿಸದೇ ಕೇಂದ್ರ ಸರ್ಕಾರ ಬೆಲೆಯನ್ನು ಏರಿಸುತ್ತಲೇ ಇದೆ. ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿನ ಸಂಕಷ್ಟದ ನಂತರದಲ್ಲಿ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ.

ಇಂಧನ ಬೆಲೆ ಏರಿಕೆಗೆ ಜಾಗತಿಕವಾಗಿ ತೈಲ ಬೆಲೆ ಏರಿಕೆ ಒಂದಾದರೆ, ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ತೆರಿಗೆಯಿಂದ ಇಂಧನ ಬೆಲೆ ಏರಿಕೆಯಾಗುವುದೂ ಒಂದು ಕಾರಣವಾಗಿದೆ. ಎರಡು ವಾರಗಳ ಹಿಂದೆಯಿಂದ ದೇಶದಲ್ಲಿ ಇಂಧನ ಬೆಲೆ ಏರಿಕೆಯತ್ತ ಮುಖಮಾಡಲು ಪ್ರಾರಂಭಿಸಿತು. ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಲಾಕ್​ಡೌನ್​ ಪರಿಣಾಮವಾಗಿ ತೈಲ ಬೆಲೆ ಏರಿಕೆ ಪರಿಣಾಮ ಬಳಕೆದಾರರ ಮೇಲೆ ಆಗಿರಲಿಲ್ಲ. ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸವಾದ್ದರಿಂದ ಇಂಧನ ದರ ಇಳಿಕೆಯಾಗಿತ್ತು. ಜಾಗತಿಕವಾಗಿ ಸುಧಾರಿಸಿಕೊಂಡ ಬಳಿಕ ಇಂಧನ ಬೆಲೆ ಹೆಚ್ಚುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಕಚ್ಚಾ ತೈಲಗಳಿಂದ ಸಿದ್ಧವಾಗುತ್ತೆ. ಪೆಟ್ರೋಲ್ ಬೆಲೆ ಡೀಸೆಲ್ ಬೆಲೆಗಿಂತ ದುಬಾರಿ ಏಕೆ ಎಂಬ ಗೊಂದಲ‌ ಮೂಡಬಹುದು. ಈ ನಿಟ್ಟಿನಲ್ಲಿ ಹಲವಾರು ಕಾರಣಗಳಿವೆ. ಸಂಸ್ಕರಣಾ ವೆಚ್ಚಗಳು, ತೆರಿಗೆ, ಬೇಡಿಕೆ ಹೀಗೆ ಅನೇಕ ಕಾರಣಗಳಿಂದ ಡೀಸೆಲ್ ಬೆಲೆ ಕಡಿಮೆ ಇರುತ್ತದೆ. ಈ ಗೊಂದಲಕ್ಕೆ ಮುಖ್ಯ ಕಾರಣವೆಂದರೆ ಸಂಸ್ಕರಣಾ ವೆಚ್ಚ. ಕಚ್ಚಾ ತೈಲದ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಕಚ್ಚಾ ತೈಲವನ್ನು ವಿಭಿನ್ನ ಘಟಕವನ್ನಾಗಿ ಬೇರ್ಪಡಿಸಲಾಗುತ್ತದೆ. ನಂತರದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಈ ಕುರಿತಂತೆ, ಪೆಟ್ರೋಲ್ ತಯಾರಿಸಲು ಅಧಿಕ ವೆಚ್ಚವಾಗುವುದು. ಡೀಸೆಲ್ ತಯಾರಿಕೆಯಲ್ಲಿ ಪೆಟ್ರೋಲ್​ಗೆ ವೆಚ್ಚವಾದಷ್ಟು ಮೌಲ್ಯ ಖರ್ಚಿಗೆ ಬರುವುದಿಲ್ಲ ಎಂಬುದು ಮುಖ್ಯ ಕಾರಣಗಳಲ್ಲಿ ಒಂದು.ಡೀಸೆಲ್ ಗುಣಮಟ್ಟವನ್ನು ಗಮನಿಸಿದಾ, ಡೀಸೆಲ್, ಪೆಟ್ರೋಲ್​ಗಿಂತ ಸ್ವಲ್ಪ ಭಾರ. ಪೆಟ್ರೋಲ್ ಅನ್ನು ಹೆಚ್ಚು ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಹಾಗಾಗಿ ಪೆಟ್ರೋಲ್​ ದರ ಹೆಚ್ಚಿರಲು ಪ್ರಮುಖ ಕಾರಣಗಳಲ್ಲಿ ಇದೂ ಒಂದು.

ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್​ ಬೆಲೆಯ ಮಾಹಿತಿ
ಪ್ರಸ್ತುತದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ, ನಾಲ್ಕು ಮೆಟ್ರೋ ನಗರಗಳಾದ ದೆಹಲಿಯಲ್ಲಿ ₹89.44 ಮತ್ತು ಡೀಸೆಲ್ ಬೆಲೆ ₹81.96, ಚೆನ್ನೈನಲ್ಲಿ ₹90.55 ಮತ್ತು ಡೀಸೆಲ್ ₹83.58, ಕೊಲ್ಕತ್ತದಲ್ಲಿ ₹90.44 ಮತ್ತು ಡೀಸೆಲ್ ₹83.58 ಹಾಗೂ ಮುಂಬೈನಲ್ಲಿ ಪೆಟ್ರೋಲ್​ ದರ  ₹96.08 ಹಾಗೂ  ಡೀಸೆಲ್ ₹86.48.

ನಗರ                ಪೆಟ್ರೋಲ್​      ಡೀಸೆಲ್ 

ಪಾಟ್ನಾ            ₹9055                 ₹83.58

ಭಾಪಾಲ್         ₹96.08                 ₹86.48

ಜೈಪುರ                 ₹94.55                   ₹86.55

ನೋಯ್ಡಾ           ₹86.58                    ₹78.62

ಲಕ್ನೊ                   ₹86.99                   ₹78.75

ಇದನ್ನೂ ಓದಿ: Petrol Price: ಇಂದು ಪೆಟ್ರೋಲ್ ​32 ಪೈಸೆ ಏರಿಕೆ; ಆದರೆ ಸೆಸ್​ ವಾಪಸ್​ ತೆಗೆಯುವುದಿಲ್ಲ ಎಂದ ಸರ್ಕಾರ

Published On - 9:45 am, Fri, 12 February 21