ರಾಯಚೂರು: ಜಿಲ್ಲೆಯ ಪೆಟ್ರೋಲ್ ಬಂಕ್ನಲ್ಲಿ ಭಾರಿ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಡೀಸೆಲ್ ಬದಲು ನೀರು ತುಂಬಿ ಹಣ ಪಡೆದಿದ್ದಾರೆ ಎಂದು ವಂಚನೆಗೆ ಒಳಗಾದ ವ್ಯಕ್ತಿ ಆರೋಪ ಮಾಡಿದ್ದಾರೆ.
ಜಿಲ್ಲೆಯ ಮಸ್ಕಿ ಪಟ್ಟಣದ ಕನಕ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಇಂತಹದೊಂದು ಅಚಾತುರ್ಯ ಘಟನೆ ನಡೆದಿದೆ ಎನ್ನಲಾಗಿದೆ. ಇಂದು ಬೆಳಗ್ಗೆ ಚಾಲಕ 10,000 ರೂಪಾಯಿ ಕೊಟ್ಟು ತನ್ನ ಟ್ರ್ಯಾಕ್ಟರ್ಗೆ ಟ್ಯಾಂಕ್ ಫುಲ್ ಡೀಸೆಲ್ ತುಂಬಿಸಿದ್ದಾನೆ. ಆದ್ರೆ ಆತನಿಗೆ ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದಾಗ ಶಾಕ್ ಕಾದಿತ್ತು. ಅದೇ ನಂದ್ರೆ ಟ್ರಾಕ್ಟರ್ ಸ್ಟಾರ್ಟ್ ಆಗದೇ ಇರೋದು.
ಹೌದು ಚಾಲಕ 10,000 ರೂಪಾಯಿ ಕೊಟ್ಟು ತನ್ನ ಟ್ರಾಕ್ಟರ್ನ ಡೀಸೆಲ್ ಟ್ಯಾಂಕ್ ಫುಲ್ ಮಾಡಿಸಿದ್ದ. ಆದರೆ ಬಂಕ್ ಸಿಬ್ಬಂದಿ ಡೀಸೆಲ್ ಬದಲಿಗೆ ನೀರು ತುಂಬಿ ಹಣ ಪಡೆದಿದ್ದಾರಂತೆ! ಹೀಗಾಗಿ ರೊಚ್ಚಿಗೆದ್ದ ಚಾಲಕ ಪೆಟ್ರೋಲ್ ಬಂಕ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪೆಟ್ರೋಲ್ ಬಂಕ್ ಮುಂದೆ ಚಾಲಕರು ಜಮಾಯಿಸಿದ್ದಾರೆ. ಬಂಕ್ ಬಂದ್ ಮಾಡುವಂತೆ ಆಗ್ರಹಿಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.
RTE ದುರ್ಬಳಕೆ: ಖಾಸಗಿ ಶಾಲೆಗಳಿಂದ ಸರ್ಕಾರಕ್ಕೆ ಮೋಸ.. YouTube ನಲ್ಲಿ ವಂಚನೆ ಬಹಿರಂಗ!