ರಾಜಧಾನಿಯಲ್ಲಿ ನಿರ್ಮಾಣವಾಗಲಿದೆ ಗಗನಚುಂಬಿ ಕಟ್ಟಡ, ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ
ಬೆಂಗಳೂರು: ಒಂದು ಅಲ್ಲಿ, ಮತ್ತೊಂದು ಅದೆಲ್ಲೋ.. ಪ್ರಮಾಣಪತ್ರ ಬೇಕಂದ್ರೆ ಒಂದ್ಕಡೆ, ದಾಖಲೆಗಳು ಬೇಕಂದ್ರೆ ಒಂದ್ಕಡೆ, ಸರ್ಕಾರಿ ಕಚೇರಿಗಳಿಗೆ ಅಲೆದೂ ಅಲೆದೂ ಅರ್ಧ ಜೀವನ ಕಳೆದುಹೋಗುತ್ತೆ ಅನ್ಕೊಳ್ತಾರೆ. ಯಾಕಂದ್ರೆ, ರಾಜಧಾನಿಯಲ್ಲಿ ಒಂದೊಂದು ದಿಕ್ಕಿನಲ್ಲಿ ಒಂದೊಂದು ಸರ್ಕಾರಿ ಕಟ್ಟಡಗಳಿವೆ, ಕಚೇರಿಗಳಿವೆ. ಬಹುತೇಕ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಇವೆ. ತಿಂಗಳಿಗೆ ಒಂದೊಂದು ಕಟ್ಟಡಕ್ಕೆ ಸರ್ಕಾರ ಲಕ್ಷ ಲಕ್ಷ ಬಾಡಿಗೆ ಕಟ್ಟುತ್ತೆ. ಹೀಗಾಗಿ ಬಾಡಿಗೆ ಬಿಲ್ಡಿಂಗ್‌ಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಪ್ಲ್ಯಾನ್ ಮಾಡಲಾಗಿದೆ. ಆನಂದ್ ರಾವ್ ಸರ್ಕಲ್ ಬಳಿ 25 […]

ಬೆಂಗಳೂರು: ಒಂದು ಅಲ್ಲಿ, ಮತ್ತೊಂದು ಅದೆಲ್ಲೋ.. ಪ್ರಮಾಣಪತ್ರ ಬೇಕಂದ್ರೆ ಒಂದ್ಕಡೆ, ದಾಖಲೆಗಳು ಬೇಕಂದ್ರೆ ಒಂದ್ಕಡೆ, ಸರ್ಕಾರಿ ಕಚೇರಿಗಳಿಗೆ ಅಲೆದೂ ಅಲೆದೂ ಅರ್ಧ ಜೀವನ ಕಳೆದುಹೋಗುತ್ತೆ ಅನ್ಕೊಳ್ತಾರೆ. ಯಾಕಂದ್ರೆ, ರಾಜಧಾನಿಯಲ್ಲಿ ಒಂದೊಂದು ದಿಕ್ಕಿನಲ್ಲಿ ಒಂದೊಂದು ಸರ್ಕಾರಿ ಕಟ್ಟಡಗಳಿವೆ, ಕಚೇರಿಗಳಿವೆ. ಬಹುತೇಕ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಇವೆ. ತಿಂಗಳಿಗೆ ಒಂದೊಂದು ಕಟ್ಟಡಕ್ಕೆ ಸರ್ಕಾರ ಲಕ್ಷ ಲಕ್ಷ ಬಾಡಿಗೆ ಕಟ್ಟುತ್ತೆ. ಹೀಗಾಗಿ ಬಾಡಿಗೆ ಬಿಲ್ಡಿಂಗ್‌ಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಪ್ಲ್ಯಾನ್ ಮಾಡಲಾಗಿದೆ. ಆನಂದ್ ರಾವ್ ಸರ್ಕಲ್ ಬಳಿ 25 ಮಹಡಿಗಳ ಟ್ವಿನ್ ಟವರ್ ನಿರ್ಮಿಸಲು ಪ್ರಸ್ತಾವನೆಯನ್ನು ಸಿದ್ದಪಡಿಪಡಿಸಲಾಗಿದೆ.
ಗಗನಚುಂಬಿ ಸರ್ಕಾರಿ ಕಟ್ಟಡ! ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮವು ಟ್ವಿನ್ ಟವರ್ ಕಟ್ಟಡದ ಪ್ರಸ್ತಾವನೆಯನ್ನ ಸಿದ್ದಪಡಿಸಿದೆ. ಪ್ರಸ್ತುತ ಸಿದ್ದಪಡಿಸಿರುವ ಪ್ರಸ್ತಾವನೆಯಲ್ಲಿ ಕಟ್ಟಡ ನಿರ್ಮಾಣವಾಗುವ ವ್ಯಾಪ್ತಿ 2.5ರ ಫ್ಲೋರ್ ಏರಿಯಾ ರೇಶಿಯೋದಲ್ಲಿದೆ. ಆದ್ರೆ ಇದೇ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಳು ಎಫ್ಎಆರ್ 4.0 ಅನುಪಾತದಲ್ಲಿದೆ. ಹೀಗಾಗಿ, ಅದೇ ಮಾದರಿಯಲ್ಲಿ ಟ್ವಿನ್ ಟವರ್ ನಿರ್ಮಿಸಬೇಕಿದೆ.
ಇದ್ರಿಂದ, ಪ್ರಸ್ತಾವನೆಯನ್ನು ಮರುವಿನ್ಯಾಸಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಇನ್ನು ಟ್ವಿನ್ ಟವರ್ ಪ್ರಸ್ತಾವನೆ ಕಾರ್ಯರೂಪಕ್ಕೆ ಬರಲು ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಯ ಸಹಮತ ಬೇಕಾಗಿದೆ. ಅಲ್ಲದೇ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಸಚಿವ ಸಂಪುಟದ ಅನುಮೋದನೆ ಕೂಡಾ ಪಡೆಯಬೇಕಿದೆ.
ಒಟ್ನಲ್ಲಿ ಟ್ವಿನ್ ಟವರ್ ನಿರ್ಮಾಣವಾದ್ರೆ ರಾಜಧಾನಿಯಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಬರಲಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಹಕಾರಿಯಾಗಲಿದ್ದು, ಸರ್ಕಾರಕ್ಕೂ ಬಾಡಿಗೆ ಹಣ ಉಳಿಯಲಿದೆ. ಆದಷ್ಟು ಬೇಗ ಟ್ವಿನ್ ಟವರ್ ನಿರ್ಮಾಣ ಆಗಲಿ ಅನ್ನೋದೆ ಎಲ್ಲರ ಆಶಯ.




