AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಗೆ ಸೇರಲು ಬಿಬಿಎಂಪಿಯ ಕೆಲ ಸದಸ್ಯರು ಪ್ಲ್ಯಾನ್, ಯಾರೆಲ್ಲಾ ಗೊತ್ತಾ?

[lazy-load-videos-and-sticky-control id=”6yLge7Xme4c”] ಬೆಂಗಳೂರು: ಬಿಜೆಪಿ ಸೇರ್ಪಡೆಗೆ ಕೆಲ ಬಿಬಿಎಂಪಿ ಸದಸ್ಯರು ಮುಂದಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಕಾರ್ಪೊರೇಟರ್‌ಗಳು ಇಂತಹದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 10 ಕ್ಕೆ ಹಾಲಿ ಕಾರ್ಪೋರೇಟರ್ಸ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿದ್ದು. ಮುಂಬರುವ ಎಲೆಕ್ಷನ್ ವೇಳೆಗೆ ಬಿಜೆಪಿಗೆ ಸೇರಲು ಕಾರ್ಪೋರೇಟರ್​ಗಳು ಮುಂದಾಗಿದ್ದಾರೆ. ಇದರಲ್ಲಿ ಬಿಜೆಪಿಗೆ ಸೇರ್ಪಡೆ ಆಗುವವರ ಪಟ್ಟಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್​ಗಳು ಮುಂಚೂಣಿಯಲ್ಲಿದ್ದಾರೆ. ಸದ್ಯ ಲಗ್ಗೆರೆ ವಾರ್ಡ್​ನ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ಎನ್ .ಸ್ವಾಮಿ, ಬಿಟಿಎಂ‌ ಲೇಔಟ್ ಕಾರ್ಪೋರೇಟರ್ ಕೆ. ದೇವದಾಸ್, ಮಾರತ್ ಹಳ್ಳಿ ವಾರ್ಡ್​ನ ಪಕ್ಷೇತರ […]

ಬಿಜೆಪಿಗೆ ಸೇರಲು ಬಿಬಿಎಂಪಿಯ ಕೆಲ ಸದಸ್ಯರು ಪ್ಲ್ಯಾನ್, ಯಾರೆಲ್ಲಾ ಗೊತ್ತಾ?
ಬಿಬಿಎಂಪಿ
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Aug 28, 2020 | 12:34 PM

Share

[lazy-load-videos-and-sticky-control id=”6yLge7Xme4c”]

ಬೆಂಗಳೂರು: ಬಿಜೆಪಿ ಸೇರ್ಪಡೆಗೆ ಕೆಲ ಬಿಬಿಎಂಪಿ ಸದಸ್ಯರು ಮುಂದಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಕಾರ್ಪೊರೇಟರ್‌ಗಳು ಇಂತಹದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಸೆಪ್ಟೆಂಬರ್ 10 ಕ್ಕೆ ಹಾಲಿ ಕಾರ್ಪೋರೇಟರ್ಸ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿದ್ದು. ಮುಂಬರುವ ಎಲೆಕ್ಷನ್ ವೇಳೆಗೆ ಬಿಜೆಪಿಗೆ ಸೇರಲು ಕಾರ್ಪೋರೇಟರ್​ಗಳು ಮುಂದಾಗಿದ್ದಾರೆ. ಇದರಲ್ಲಿ ಬಿಜೆಪಿಗೆ ಸೇರ್ಪಡೆ ಆಗುವವರ ಪಟ್ಟಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್​ಗಳು ಮುಂಚೂಣಿಯಲ್ಲಿದ್ದಾರೆ.

ಸದ್ಯ ಲಗ್ಗೆರೆ ವಾರ್ಡ್​ನ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ಎನ್ .ಸ್ವಾಮಿ, ಬಿಟಿಎಂ‌ ಲೇಔಟ್ ಕಾರ್ಪೋರೇಟರ್ ಕೆ. ದೇವದಾಸ್, ಮಾರತ್ ಹಳ್ಳಿ ವಾರ್ಡ್​ನ ಪಕ್ಷೇತರ ಕಾರ್ಪೋರೇಟರ್ ಎನ್.ರಮೇಶ್, ಕೋನೇನ್ ಅಗ್ರಹಾರ ವಾರ್ಡ್ ಕಾರ್ಪೋರೇಟರ್ ಎಂ.ಚಂದ್ರಪ್ಪ ರೆಡ್ಡಿ ಬಿಜೆಪಿಗೆ ಸೇರಲಿದ್ದು ಕಾಂಗ್ರೆಸ್​ನ ಕೆಲ ಕಾರ್ಪೋರೇಟರ್​ಗಳು ಬಿಜೆಪಿಗೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಲು ಪ್ಲಾನ್ ಮಾಡಿದ್ದಾರೆ. ಆದರೆ ಇದಕ್ಕೆ ಬಿಜೆಪಿಯಲ್ಲೇ ಅಪಸ್ವರ ವ್ಯಕ್ತವಾಗಿದೆ.

ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ,‌ ಕೈ ಅಭ್ಯರ್ಥಿ ಎದುರು ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ಟಿಕೆಟ್ ಪಡೆಯಲು ಆಕಾಂಕ್ಷಿಗಳಾಗಿದ್ದು, ಕೈ ಕಾರ್ಪೋರೇಟರ್ಸ್ ಬಿಜೆಪಿಗೆ ಬಂದರೆ ಟಿಕೆಟ್ ತಪ್ಪುವ ಆತಂಕ ಕೂಡ ಶುರುವಾಗಿದೆ.

Published On - 8:00 am, Fri, 28 August 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.