ಪ್ರತಿ ವರ್ಷದಂತೆ ಈ ವರ್ಷವೂ ಅಜ್ಮೀರ್ ದರ್ಗಾಕ್ಕೆ ‘ಚಾದರ್’ ಹಸ್ತಾಂತರಿಸಿದ ಪ್ರಧಾನಿ ಮೋದಿ

| Updated By: ರಮೇಶ್ ಬಿ. ಜವಳಗೇರಾ

Updated on: Jan 25, 2023 | 12:12 AM

ರಾಜಸ್ಥಾನದ ಅಜ್ಮೀರ್​ನಲ್ಲಿರುವ ಪವಿತ್ರ ಸೂಫಿ ದರ್ಗಾವಾಗಿರುವ ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 'ಚಾದರ್' ಹಸ್ತಾಂತರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಅಜ್ಮೀರ್ ದರ್ಗಾಕ್ಕೆ ಚಾದರ್ ಹಸ್ತಾಂತರಿಸಿದ ಪ್ರಧಾನಿ ಮೋದಿ
ಅಜ್ಮೀರ್ ದರ್ಗಾಕ್ಕೆ 'ಚಾದರ್' ಹಸ್ತಾಂತರಿಸಿದ ಪ್ರಧಾನಿ ಮೋದಿ
Follow us on

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ (Ajmer Sharif Dargah)ಅರ್ಪಿಸಲೆಂದು ಇಂದು (ಜನವರಿ 24) ಚಾದರವನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನು ಪ್ರಧಾನಿ ಮೋದಿ ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮೋದಿ ಅವರು ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಚಾದರ್ ಹಸ್ತಾಂತರಿಸುತ್ತಿರುವುದು ಇದು 9ನೇ ಬಾರಿಯಾಗಿದೆ.

ಇದನ್ನೂ ಓದಿ: JNUನಲ್ಲಿ ಪ್ರಧಾನಿ ಮೋದಿ ಕುರಿತ ವಿವಾದಿತ ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದವರ ಮೇಲೆ ಕಲ್ಲು ತೂರಾಟ

ಅಜ್ಮೀರ್ ಷರೀಫ್ ದರ್ಗಾವು ರಾಜಸ್ಥಾನದ ಅಜ್ಮೀರ್​ನಲ್ಲಿರುವ ಪವಿತ್ರ ಸೂಫಿ ದರ್ಗಾವಾಗಿದೆ. ಉರ್ಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಜ್ಮೀರ್ ಷರೀಫ್ ದರ್ಗಾ ಪ್ರತಿ ವರ್ಷ ಚಾದರವನ್ನು ಕಳುಹಿಸಿ ಕೊಡುತ್ತಾರೆ. ಅದರಂತೆ ಈ ವರ್ಷವೂ ಸಹ ಚಾದರ್ ಕಳುಹಿಸಿಕೊಟ್ಟರು. ಈ ಬಗ್ಗೆ ಮೋದಿ ಟ್ವೀಟ್ ಮಾಡಿದ್ದು, ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರ್ಸ್‍ನಲ್ಲಿ ಅಜ್ಮೀರ್ ಷರೀಫ್ ದರ್ಗಾಕ್ಕೆ ಚಾದರ್‍ವನ್ನು ಅರ್ಪಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.


ಗರೀಬ್ ನವಾಜ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ಅವರ 811 ನೇ ಉರ್ಸ್-ಎ-ಮುಬಾರಕ್ ರಾಜಸ್ಥಾನದ ಅಜ್ಮೀರ್ ಷರೀಫ್‌ನಲ್ಲಿ ಪ್ರಾರಂಭವಾಗಿದೆ. ಉರ್ಸ್ ಮೂಲತಃ ಅರೇಬಿಕ್ ಪದ. ಸರಳವಾಗಿ ಹೇಳುವುದಾದರೆ, ಸೂಫಿ ಸಂತರ ಪುಣ್ಯತಿಥಿಯಂದು ನಡೆಸಲಾಗುವ ಜಾತ್ರೆಯನ್ನು ಉರ್ಸ್ ಎಂದು ಕರೆಯಲಾಗುತ್ತದೆ.

ಉರ್ಸ್ ವಾಸ್ತವವಾಗಿ ಕೋಮು ಸೌಹಾರ್ದತೆ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ನೀಡುತ್ತದೆ ಎಂದು ಪರಿಗಣಿಸಲಾಗಿದೆ. ಇದೊಂದು ರೀತಿಯಲ್ಲಿ ರಾಷ್ಟ್ರೀಯ ಏಕತೆಗೆ ನಿದರ್ಶನ. ಉರ್ಸ್ ಸಮಯದಲ್ಲಿ ಲಕ್ಷಾಂತರ ಜನ ಅಜ್ಮೀರ್​ಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಚಾದರ್ ಮತ್ತು ಅಖೀದತ್ ಹೂವುಗಳನ್ನು ಅರ್ಪಿಸುತ್ತಾರೆ.

ಇನ್ನು ಇದೇ ಅಜ್ಮೀರ್​ಗೆ ಕಲ್ಯಾಣ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ದಂಪತಿ ಸಹ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 12:12 am, Wed, 25 January 23