JNUನಲ್ಲಿ ಪ್ರಧಾನಿ ಮೋದಿ ಕುರಿತ ವಿವಾದಿತ ಸಾಕ್ಷ್ಯಚಿತ್ರ ವೀಕ್ಷಿಸುವ ವೇಳೆ ವಿದ್ಯುತ್ ಕಡಿತ, ಕಲ್ಲು ತೂರಾಟ

TV9kannada Web Team

TV9kannada Web Team | Edited By: Ramesh B Jawalagera

Updated on: Jan 25, 2023 | 2:24 PM

ಪ್ರಧಾನಿ ನರೇಂದ್ರ ಮೋದಿ ಕುರಿತ ವಿವಾದಿ ಬಿಬಿಸಿಯ ಸಾಕ್ಷ್ಯಚಿತ್ರ ವೀಕ್ಷಣೆ ಸಂದರ್ಭದಲ್ಲಿ ಪವರ್ ಕಟ್ ಮಾಡಿದ್ದರಿಂದ ವಿದ್ಯಾರ್ಥಿಗಳು ಕಲ್ಲು ತೂರಿ ಗಲಾಟೆ ಮಾಡಿದ್ದಾರೆ.

JNUನಲ್ಲಿ ಪ್ರಧಾನಿ ಮೋದಿ ಕುರಿತ ವಿವಾದಿತ ಸಾಕ್ಷ್ಯಚಿತ್ರ ವೀಕ್ಷಿಸುವ ವೇಳೆ ವಿದ್ಯುತ್ ಕಡಿತ, ಕಲ್ಲು ತೂರಾಟ
JNUನಲ್ಲಿ ಮೋದಿ ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದವರ ಮೇಲೆ ಕಲ್ಲು ತೂರಾಟ

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಬಿಬಿಸಿ ಸಂಸ್ಥೆಯ ಪ್ರಧಾನಿ ಮೋದಿ (Narendra Modi) ಕುರಿತ ಸಾಕ್ಷ್ಯಚಿತ್ರವನ್ನು(BBC Documentary) ದೆಹಲಿಯ ಜೆಎನ್​ಯುನಲ್ಲಿ (JNU) ಪ್ರದರ್ಶನ ಮಾಡಲಾಗಿದೆ. ಈ ವೇಳೆ ವಿದ್ಯುತ್ ಕಡಿತವಾಗಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಲ್ಲು ತೂರಿ ಗಲಾಟೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅನುಮತಿ ನಿರಾಕರಣೆ ಮಧ್ಯೆಯೂ ಡಾಕ್ಯುಮೆಂಟರಿ ವೀಕ್ಷಣೆಗೆ ಮುಂದಾಗಿದ್ದಾರೆ. ಇದರಿಂದ ಆಡಳಿತ ಮಂಡಳಿ ಪವರ್ ಕಟ್ ಮಾಡಿದೆ. ಇದರಿಂದ ಕುಪಿತಗೊಂಡು ಕಲ್ಲು ತೂರಿ ಗಲಾಟೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪಿಎಂ ಮೋದಿ ಕುರಿತ ಬಿಬಿಸಿ ವಿಮರ್ಶಾತ್ಮಕ ಸಾಕ್ಷ್ಯಚಿತ್ರ: ಟ್ವಿಟರ್, ಯೂಟ್ಯೂಬ್‌ ಪ್ರಸಾರಕ್ಕೆ ಕೇಂದ್ರ ನಿರ್ಬಂಧ

BBC ಸಾಕ್ಷ್ಯಚಿತ್ರ ಪ್ರದರ್ಶನವನ್ನು JNUSU ನಡೆಸಲು ಸಾಧ್ಯವಾಗಿಲ್ಲದಿದ್ದರಿಂದ ಕಲ್ಲು ತೂರಾಟದ ನಾಟಕ ನಡೆದಿದೆ. ಆದಾಗ್ಯೂ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ರಾಷ್ಟ್ರೀಯ ಅಧ್ಯಕ್ಷ ಎನ್ ಸಾಯಿ ಬಾಲಾಜಿ ಹೇಳಿದ್ದಾರೆ.

ಕೇಂದ್ರವು ದೇಶದಾದ್ಯಂತ ಸಾಕ್ಷ್ಯಚಿತ್ರವನ್ನು ನಿಷೇಧಿಸಿರುವ ಸಮಯದಲ್ಲಿ ಹೈದ್ರಾಬಾದ್ ವಿವಿ ಕ್ಯಾಂಪಸ್ ನಲ್ಲಿ ಇಂದು(ಜನವರಿ 24) ಸಾಕ್ಷ್ಯಚಿತ್ರ ಪ್ರದರ್ಶಿಸಲಾಗಿದೆ. ಇದರ ಬೆನ್ನಲ್ಲೇ ಇಂದು (ಮಂಗಳವಾರ) ರಾತ್ರಿ ತನ್ನ ಕಚೇರಿಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ (ಜೆಎನ್ ಯುಎಸ್ ಯು) ತಿಳಿಸಿತ್ತು. ಈ ಸಂಬಂಧ ಸೋಮವಾರ ಭಿತ್ತಿಪತ್ರ ಹಂಚಲಾಗಿತ್ತು. ಅದರಂತೆ ರಾತ್ರಿ JNUನಲ್ಲಿ ಪ್ರಧಾನಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗಿದ್ದು, ವೀಕ್ಷಣೆ ಮಾಡುತ್ತಿದ್ದವರ ಮೇಲೆ ಗುಂಪೊಂದು ಕಲ್ಲು ತೂರಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಂ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ವಸ್ತುನಿಷ್ಠತೆಯ ಕೊರತೆ, ವಸಾಹತುಶಾಹಿ ಮನಸ್ಥಿತಿಯಿಂದ ಕೂಡಿದೆ: ಭಾರತ

ಈಗಾಗಲೇ ತೀವ್ರ ವಿವಾದಕ್ಕೀಡಾರುವ BBCಯ “India: The Modi Question” ಸಾಕ್ಷ್ಯಚಿತ್ರ ಪ್ರಸಾರವನ್ನು ಕೇಂದ್ರ ಸರ್ಕಾರ ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ನಿರ್ಬಂಧಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತದ ನಾಯಕರು ಮತ್ತು ಸಮಾಜದ ಒಂದು ವರ್ಗದಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಅದಾಗ್ಯೂ ಈ ವಿವಾದಿತ ಸಾಕ್ಷ್ಯಚಿತ್ರ ಇನ್ನೂ ಅನೇಕ ಡಾರ್ಕ್ ವೆಬ್‌ಸೈಟ್‌ಗಳಲ್ಲಿ ಇದು ಅಸ್ತಿತ್ವದಲ್ಲಿದ್ದು, ಪ್ರೇಕ್ಷಕರಿಗೆ ದೊರೆಯುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada