ಪಿಎಂ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ವಸ್ತುನಿಷ್ಠತೆಯ ಕೊರತೆ, ವಸಾಹತುಶಾಹಿ ಮನಸ್ಥಿತಿಯಿಂದ ಕೂಡಿದೆ: ಭಾರತ

ಈ ಚಲನಚಿತ್ರ ಅಥವಾ ಸಾಕ್ಷ್ಯಚಿತ್ರವು ಈ ನಿರೂಪಣೆಯನ್ನು ಮತ್ತೆ ಪ್ರಚಾರ ಮಾಡುತ್ತಿರುವ ಸಂಸ್ಥೆ ಮತ್ತು ವ್ಯಕ್ತಿಗಳ ಪ್ರತಿಬಿಂಬವಾಗಿದೆ. ಇದರ ಉದ್ದೇಶ ಮತ್ತು ಅದರ ಹಿಂದಿನ ಕಾರ್ಯಸೂಚಿಯ ಬಗ್ಗೆ ಅಚ್ಚರಿಯಾಗುತ್ತದೆ. ನಾವು ಇಂಥದ್ದನ್ನು ಗೌರವಿಸಲಾಗುವುದಿಲ್ಲ ಎಂದು ದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ

ಪಿಎಂ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ವಸ್ತುನಿಷ್ಠತೆಯ ಕೊರತೆ, ವಸಾಹತುಶಾಹಿ ಮನಸ್ಥಿತಿಯಿಂದ ಕೂಡಿದೆ: ಭಾರತ
ಇನ್ನು ಚೊಚ್ಚಲ ಅಂಡರ್​-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತೀಯ ಮಹಿಳಾ ಕ್ರೀಡಾಪಟುಗಳು ಉತ್ತಮ ಆಟವಾಡಿದ್ದಾರೆ. ಅವರ ಯಶಸ್ಸು ಮುಂದಿನ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ. ವಿಜೇತ ತಂಡದ ಮುಂದಿನ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 19, 2023 | 8:41 PM

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು 2002ರ ಗುಜರಾತ್ ಗಲಭೆಗಳ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು (BBC Documentary) ಸರ್ಕಾರ ಗುರುವಾರ ಬಲವಾಗಿ ಖಂಡಿಸಿದೆ, ಇದು “ಅಪಪ್ರಚಾರದ ನಿರೂಪಣೆಗಾಗಿ ವಿನ್ಯಾಸಗೊಳಿಸಲಾದ ಸಂಗತಿ. ಇದಕ್ಕೆ ಪ್ರತಿಕ್ರಿಯಿಸಿ ಗೌರವ ಕೊಡಬಾರದು ಎಂದು ಸರ್ಕಾರ ಹೇಳಿದೆ. “ಇದನ್ನು ಭಾರತದಲ್ಲಿ ಪ್ರದರ್ಶಿಸಲಾಗಿಲ್ಲ ಎಂಬುದನ್ನು ಗಮನಿಸಿ. ಹಾಗಾಗಿ, ನಾನು ಅದರ ಬಗ್ಗೆ ಕೇಳಿದ ಮತ್ತು ನನ್ನ ಸಹೋದ್ಯೋಗಿಗಳು ನೋಡಿದ ಸನ್ನಿವೇಶ ಬಗ್ಗೆ ಮಾತ್ರ ನಾನು ಕಾಮೆಂಟ್ ಮಾಡಲಿದ್ದೇನೆ. ಇದು ನಿರ್ದಿಷ್ಟ ಅಪಖ್ಯಾತಿಗೊಳಗಾದ ನಿರೂಪಣೆಯನ್ನು ತಳ್ಳಲು ವಿನ್ಯಾಸಗೊಳಿಸಲಾದ ಅಪಪ್ರಚಾರ ವಸ್ತು ಎಂದು ನಾವು ಭಾವಿಸುತ್ತೇವೆ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಪಕ್ಷಪಾತ, ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಹೇಳಿದ್ದಾರೆ.

ಈ ಚಲನಚಿತ್ರ ಅಥವಾ ಸಾಕ್ಷ್ಯಚಿತ್ರವು ಈ ನಿರೂಪಣೆಯನ್ನು ಮತ್ತೆ ಪ್ರಚಾರ ಮಾಡುತ್ತಿರುವ ಸಂಸ್ಥೆ ಮತ್ತು ವ್ಯಕ್ತಿಗಳ ಪ್ರತಿಬಿಂಬವಾಗಿದೆ. ಇದರ ಉದ್ದೇಶ ಮತ್ತು ಅದರ ಹಿಂದಿನ ಕಾರ್ಯಸೂಚಿಯ ಬಗ್ಗೆ ಅಚ್ಚರಿಯಾಗುತ್ತದೆ. ನಾವು ಇಂಥದ್ದನ್ನು ಗೌರವಿಸಲಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

ಬಿಬಿಸಿಯ ಎರಡು ಭಾಗಗಳ ಸರಣಿಯಲ್ಲಿ ” India: The Modi Question ” ಎಂಬ ಸರಣಿಯು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಸರಣಿ ವಿವರಣಕಾರರು ಇದನ್ನು “ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ಉದ್ವಿಗ್ನತೆಯನ್ನು ನೋಡಿ, ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ 2002 ರ ಗಲಭೆಗಳಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Khammam ತೆಲಂಗಾಣ: ಖಮ್ಮಂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 248.9 ಕೋಟಿ ರೂ ಅನುದಾನ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ಸರಣಿಯ ಕುರಿತು ಬ್ರಿಟಿಷ್ ಸಂಸತ್ತಿನಲ್ಲಿ ಪಾಕಿಸ್ತಾನ ಮೂಲದ ಸಂಸದರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುಕೆ ಪ್ರಧಾನಿ ರಿಷಿ ಸುನಕ್, ಪ್ರಧಾನಿ ಮೋದಿಯವರ ಪಾತ್ರವನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಈ ಬಗ್ಗೆ ಯುಕೆ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಮತ್ತು ಅದು ಬದಲಾಗಿಲ್ಲ. ಸಹಜವಾಗಿ, ಶೋಷಣೆಯನ್ನು ಎಲ್ಲಿಯಾದರೂ ನಾವು ಸಹಿಸುವುದಿಲ್ಲ ಆದರೆ ಗೌರವಾನ್ವಿತ ಸಜ್ಜನರನ್ನು ಚಿತ್ರಿಸಿದ್ದನ್ನು ನಾನು ಒಪ್ಪುವುದಿಲ್ಲ ಸುನಕ್ ಹೇಳಿದ್ದಾರೆ. ಫೆಬ್ರವರಿ 2002 ರಲ್ಲಿ ಗಲಭೆ ಭುಗಿಲೆದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪಿಎಂ ಮೋದಿ ಅವರು ಯಾವುದೇ ತಪ್ಪು ಎಸಗಿದ್ದಾರೆ ಎಂಬುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಗಲಭೆಯ ಒಂದು ದಶಕದ ನಂತರ ವಿಶೇಷ ತನಿಖಾ ತಂಡವು ವರದಿಯಲ್ಲಿ ಪ್ರಧಾನಿ ಮೋದಿಯನ್ನು ದೋಷಮುಕ್ತಗೊಳಿಸಿದೆ. ಕಳೆದ ವರ್ಷ ಜೂನ್‌ನಲ್ಲಿ, ಸುಪ್ರೀಂಕೋರ್ಟ್ ಪಿಎಂ ಮೋದಿಗೆ ಖುಲಾಸೆಯಅನ್ನು ಬೆಂಬಲಿಸಿತ್ತು. 2013ರಲ್ಲಿ, ಸ್ಥಳೀಯ ನ್ಯಾಯಾಲಯವು ಗಲಭೆಯ ಸಮಯದಲ್ಲಿ ನಡೆದ ಅತಿದೊಡ್ಡ ಹತ್ಯಾಕಾಂಡದಲ್ಲಿ ಯಾವುದೇ ಪಾತ್ರವನ್ನು ತೆರವುಗೊಳಿಸಿದಾಗ,”ಸತ್ಯಮೇವ ಜಯತೇ ಎಂದು ಮೋದಿ ಪೋಸ್ಟ್ ಮಾಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ