Horoscope Today 18 April: ಈ ರಾಶಿಯವರು ತೊಂದರೆಯನ್ನು ತೆಗೆದುಕೊಳ್ಳಲು ಇಚ್ಛಿಸುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ, ಶುಕ್ರವಾರದಂದು ಮೂಲದ ಸಂಪತ್ತಿನ ಕಡೆ ಗಮನ, ಉದ್ಯಮದ ವಿಸ್ತಾರ, ಮಕ್ಕಳಿಗೆ ಅನುಕೂಲತೆಯ ನಿರ್ಮಾಣ ಇವು ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ :ಶುಕ್ರ, ತಿಥಿ : ಪಂಚಮೀ, ನಿತ್ಯನಕ್ಷತ್ರ: ಮೂಲಾ, ಯೋಗ : ಪರಿಘ, ಕರಣ : ತೈತಿಲ, ಸೂರ್ಯೋದಯ – 06:18 am, ಸೂರ್ಯಾಸ್ತ 06: 45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:59 – 12:32, ಯಮಘಂಡ ಕಾಲ 15:39 – 17:12, ಗುಳಿಕ ಕಾಲ 07:52-09:25
ಮೇಷ ರಾಶಿ: ಉತ್ಸಾಹದ ಮಾತುಗಳು ನಿಮ್ಮನ್ನು ಪ್ರೇರಿಸುವುದು ನಿಜ. ಆದರೆ ಅದು ಸರಿಯಾದ ಕಡೆ ಇರಲಿ. ತಂತ್ರಗಾರಿಕೆಯಲ್ಲಿ ವೈಷಮ್ಯ ತಲೆದೋರುವುದು. ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆದರೆ ನಿಮ್ಮ ಆರೋಗ್ಯವನ್ನೂ ನೀವು ಉಳಿಸಿಕೊಳ್ಳಬೇಕಾಗುವುದು. ನಿಮ್ಮ ವಿಶ್ಲೇಷಣಾ ಶಕ್ತಿ ಇಂದಿನ ಪ್ರಮುಖ ಆಸ್ತಿಯಾಗಲಿದೆ. ಹಣದ ವ್ಯವಹಾರಗಳಲ್ಲಿ ನಿಖರತೆ ಅಗತ್ಯ. ವಿಶೇಷವಾಗಿ ಬಾಕಿ ಇರುವ ವಿಚಾರದ ಕಡೆ ಗಮನ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಗುಣಮಟ್ಟವು ಮೇಲಧಿಕಾರಿಗಳ ಗಮನ ಸೆಳೆಯಲಿದೆ. ನಿಮ್ಮ ಸಂಗಾತಿಯೊಂದಿಗೆ ಕಲಹಕ್ಕೆ ಕಾರಣವಿಲ್ಲದಂತೆ ಮಾತನಾಡಿ. ಉದ್ಯೋಗಿಗಳಿಗೆ ಇಂದು ಹೆಚ್ಚಿನ ಕೆಲಸದ ಹೊರೆ ಬರಬಹುದು. ಹಿರಿಯರ ಸಹಕಾರದಿಂದ ಸಮಯಕ್ಕೆ ಸರಿಯಾಗಿ ಮಾರ್ಗವು ತೆರೆಯುವುದು. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಮಕ್ಕಳ ಜೊತೆ ಸಂತೋಷದಿಂದ ಕಳೆಯುವುದು ಅವರಿಗೂ ಖುಷಿಯಾಗುವುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡುವಿರಿ.
ವೃಷಭ ರಾಶಿ: ಮಕ್ಕಳ ಪ್ರಗತಿಯಿಂದ ಸಂತೋಷ. ಕಲಿಕೆಗೆ ಮತ್ತಷ್ಟು ಸಹಾಯ. ಇಂದು ನಿಮ್ಮ ಬಲವಾದ ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಯಾವ ಸಮಸ್ಯೆಯನ್ನಾದರೂ ಎದುರಿಸಲು ನೀವು ಸಿದ್ಧರಿದ್ದೀರಿ. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಜೊತೆಗೆ ಸಮಯ ಕಳೆಯುವುದು ನಿಜವಾದ ಸಂತೋಷ ನೀಡುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರಮವನ್ನು ಗುರುತಿಸಲಾಗುವುದು. ಅನಾರೋಗ್ಯದಿಂದ ಅವಕಾಶ ವಂಚಿತರಾಗುವಿರಿ. ಸಲಹೆ ಪಡೆಯದೆ ಇಂದು ಹಣಕಾಸಿನ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಂದು ನೀವು ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರೆ ಉನ್ನತ ಸ್ಥಾನಕ್ಕೆ ಹೋಗುವ ಕನಸು ನನಸಾಗುವುದು. ಸದುಪಯೋಗ ಆಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ.
ಮಿಥುನ ರಾಶಿ: ಯಾರ ಮನವೊಲಿಸಿ ಮಾಡುವ ಕಾರ್ಯವು ಪೂರ್ಣ ಫಲಕೊಡುವುದು. ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳವನ್ನು ಹುಡುಕುವಿರಿ. ನಿಮ್ಮ ಮಗುವಿನ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಆಧ್ಯಾತ್ಮಿಕ ಚಟುವಟಿಕೆಗಳು ಉತ್ತಮ. ಭೂಮಿಯ ವಿಸ್ತರಣೆಯ ಬಗ್ಗೆ ಯೋಚಿಸುವಿರಿ. ಹಣಕಾಸಿನ ತೊಂದರೆಗಳು ತುರ್ತು ಖರ್ಚುಗಳಿಂದ ಉಂಟಾಗಬಹುದು. ಮನೆಯ ಕೆಲಸಗಳು ಕೆಲವೊಂದು ತಲೆನೋವಿಗೆ ಕಾರಣವಾಗಲಿದೆ. ಇಂದು ನಿಮ್ಮನೈಜ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ. ಸಂಗಾತಿಯ ಜೊತೆ ಅದ್ಭುತ ಕ್ಷಣಗಳನ್ನು ಕಳೆಯುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದು. ನಾಯಕರು ತಮ್ಮ ಬಗ್ಗೆ ಒಳ್ಳಯ ಸುದ್ದಿಯನ್ನು ಕೇಳುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.
ಕರ್ಕಾಟಕ ರಾಶಿ: ನಿಮ್ಮ ಅಸತ್ಯದ ಮಾತು ಎಲ್ಲರಿಗೂ ಗೊತ್ತಾಗುವುದು. ಯಾರನ್ನೂ ಅವಲಂಬಿಸಬೇಕು ಅನ್ನಿಸದು. ನೀವು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆದೆ. ಆಧ್ಯಾತ್ಮಿಕ ಚಿಂತನೆ ನಿಮ್ಮ ಶಾಂತಮಯವಾಗಿ ಆರಂಭಿಸಲು ಮಾಡುತ್ತದೆ. ಬಹಳ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಪ್ರತಿಫಲದ ಅಪೇಕ್ಷೆ ಇಲ್ಲದೇ ಮಾಡಿದ ಸಹಾಯದಿಂದ ತೃಪ್ತಿ. ಅನವಶ್ಯಕ ವ್ಯವಹಾರಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಕೆಲಸದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇಂದು ಒಳ್ಳೆಯ ಸಮಯ. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಯಾವುದನ್ನೂ ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಇರದು. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.
ಸಿಂಹ ರಾಶಿ: ನಾಯಕರು ಸಮಾರಂಭಗಳಿಗೆ ಭೇಟಿ ನೀಡುವರು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವಿರಿ. ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹಂತಹಂತವಾದ ಬೆಳವಣಿಗೆಯಿಂದ ಸಂತಸ. ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇತರರ ಮಾತಿಗೆ ಒಳಗಾಗಬೇಡಿ, ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ. ದೂರದ ಸಂಬಂಧಿಗಳು ಸಂಪರ್ಕಿಸಿ ಸಂಭ್ರಮ ತರಬಹುದು. ವ್ಯಾಪಾರದ ಗುತ್ತಿಗೆಗಳಲ್ಲಿ ನಿಖತೆ ಅಗತ್ಯ. ಇಂದು ಸಂಗಾತಿಯು ನಿಮ್ಮನ್ನು ಖುಷಿಪಡಿಸಲು ಏನು ಬೇಕಾದರೂ ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ದಾರಿ ಮಾಡಿಕೊಡುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಬಹುದು. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು. ಕಛೇರಿಯ ಕಿರಿಕಿರಿಯಿಂದ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು.
ಕನ್ಯಾ ರಾಶಿ: ಆದಾಯದ ಮೂಲವನ್ನು ಬಹಿರಂಗಪಡಿಸಬೇಕಾಗುವುದು. ಪ್ರಸ್ತುತ ಪಡಿಸುವುದು ನಿಮ್ಮ ಕೈಯಲ್ಲಿದೆ. ಖರೀದಿಯ ವ್ಯವಹಾರವನ್ನು ಗೌಪ್ಯವಾಗಿ ಮಾಡುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ಇಂದು ನಿಮ್ಮ ಆಂತರಿಕ ಶಕ್ತಿ ಹೆಚ್ಚು ಸ್ಪಷ್ಟವಾಗಿ ತೋರಬಹುದು. ಆರ್ಥಿಕ ವಿಷಯಗಳಲ್ಲಿ ಬುದ್ಧಿವಂತಿಕೆ ಬಳಸಿ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಹಮತದಿಂದ ಕೆಲಸ ಮಾಡಿದರೆ ಶಾಂತಿಯುತ ವಾತಾವರಣ ಸಿಗುತ್ತದೆ. ಉದ್ಯೋಗದಲ್ಲಿ ಹೆಚ್ಚು ಶ್ರಮ ನೀಡಿದರೆ ನಿರೀಕ್ಷಿತ ಫಲ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಿ, ಸಂಬಂಧ ಮತ್ತಷ್ಟು ಗಾಢವಾಗುತ್ತದೆ. ಗೌಪ್ಯ ವಿಷಯಗಳನ್ನು ನಿಮ್ಮ ಸಂಗಾತಿಯಿಂದ ಹಂಚಿಕೊಳ್ಳುವಿರಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.
ತುಲಾ ರಾಶಿ: ಕಳೆದುಕೊಂಡ ವಸ್ತು ಅನ್ಯರ ಮೂಲಕ ಪ್ರಾಪ್ತವಾಗಲಿದೆ. ನಿಮ್ಮ ಸಂತೋಷವನ್ನು ಕಹಿಯಾದ ಮಾತುಗಳು ಕಸಿದುಕೊಳ್ಳಬಹುದು. ವಾಹನದ ಖರೀಗೆ ಸಾಲ ಮಾಡಬೇಕಾಗುವುದು. ಇತ್ತೀಚಿನ ನಿರಾಶೆಯಿಂದ ಹೊರಬರಲು ನೀವು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು. ಇಂದು ಸಂಗಾತಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಚರ್ಚೆ ಆಗಬಹುದಾದರೂ, ಸಹೋದರರ ಸಹಕಾರವು ನಿಮಗೆ ಬಲವನ್ನು ಕೊಡಬಹುದು. ತಾಯಿಯ ಪ್ರೀತಿಯು ನಿಮಗೆ ಅಪರೂಪವೆನಿಸುವಂತೆ ಆಗುವುದು. ಮೇಲಧಿಕಾರಿಗಳು ಕೆಲಸದ ಮಾಹಿತಿಯನ್ನು ಕೇಳುವರು. ಶಾಂತ ಸ್ವಭಾವದಿಂದ ವಾಗ್ವಾದ ನಿಲ್ಲುತ್ತದೆ. ಕುಟುಂಬದ ಕಲ್ಯಾಣಕ್ಕಾಗಿ ತೆಗೆದುಕೊಳ್ಳುವ ಕ್ರಮಗಳು ಫಲಕಾರಿಯಾಗುತ್ತವೆ. ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಸ್ವಾಭಿಮಾನ ಬಂಧುಗಳ ಎದುರು ಕಾಣಿಸಿಕೊಳ್ಳಬಹುದು. ಎಲ್ಲ ವಿಚಾರದಲ್ಲಿ ಹಿನ್ನಡೆ ಇರಲಿದೆ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ.
ವೃಶ್ಚಿಕ ರಾಶಿ: ಇಂದು ಸಾಮೂಹಿಕ ಕಾರ್ಯದಿಂದ ಸಂತೋಷವೂ ಹೊಸತನವೂ ಸಿಗಲಿದೆ. ಹೊಸ ಒಪ್ಪಂದಗಳು ಬರುವ ಸಾಧ್ಯತೆ ಇದೆ. ಸ್ನೇಹಿತರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ, ಅವರು ನಿಮಗೆ ಸಹಾಯ ಮಾಡುವ ಇಚ್ಛೆಯೇ ಇರುತ್ತದೆ. ಹಣದ ನಷ್ಟವನ್ನು ತಪ್ಪಿಸಲು ಖರ್ಚನ್ನು ಮಿತಿಗೊಳಿಸಿ. ಜೀವನದಲ್ಲಿ ಹೊಸತನ್ನು ಸ್ವೀಕರಿಸುವ ಮನಸ್ಥಿತಿಯಿರಲಿ. ಹಳೆಯ ಮನೆಯನ್ನು ದುರಸ್ತಿ ಮಾಡುವ ಚಿಂತನೆಯಿರುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಆದರ್ಶಗಳಿಂದಲೇ ಸ್ಪೂರ್ತಿ ಪಡೆಯಿರಿ. ಇಂದಿನ ಪ್ರಯಾಣ ದುರಂತವಾಗಬಹುದು. ಸಹೋದ್ಯೋಗಿಗಳ ಜೊತೆ ಸೌಹಾರ್ದಯುತವಾಗಿ ವರ್ತಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ. ನೀವು ಹೊಸತನ್ನು ಒಮ್ಮನಸ್ಸಿನಿಂದ ಒಪ್ಪಿಕೊಳ್ಳಲಾರಿರಿ. ಸಹೋದರ ಸಹೋದರಿಯರ ಜೊತೆ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಜಗಳಗಳು ಆಗಬಹುದು. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ವಿಚಾರದಲ್ಲಿ ಕೋಪವನ್ನು ಮಾಡುವಿರಿ.
ಧನು ರಾಶಿ: ಎಲ್ಲರಿಗೂ ಸಹಾಯ ಮಾಡುವ ನಿಮ್ಮ ನಿರಂತರ ಇಚ್ಛೆಯು ನಿಮಗೆ ದಣಿವನ್ನು ತರಬಹುದು. ದುರಭ್ಯಾಸದ ಜನರ ಸಹವಾಸ ಇರುವುದು. ಅನಾವಶ್ಯಕ ಚರ್ಚೆಗಳಿಂದ ದೂರವಿರಿ, ಶಾಂತಿಯುತವಾಗಿ ದಿನಚರಿ ನಡೆಸಿ. ಹೊಸ ಆರ್ಥಿಕ ಒಪ್ಪಂದಗಳಿಂದ ಲಾಭ ಸಾಧ್ಯ. ಸಣ್ಣ ವಿಚಾರಗಳಿಂದ ಸಂಗಾತಿಯೊಂದಿಗೆ ಮನಸ್ತಾಪ ಸಂಭವಿಸಬಹುದು. ಎಂದೂ ನಂಬದವರ ಮಾತನ್ನು ನೀವು ಇಂದು ನಂಬುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಧೈರ್ಯದಿಂದ ತೆಗೆದುಕೊಳ್ಳುವ ನಿರ್ಧಾರಗಳು ಫಲಕಾರಿಯಾಗುವ ಸಾಧ್ಯತೆ ಇದೆ. ಸಂಗಾತಿ ತಮ್ಮ ಕುಟುಂಬಕ್ಕಿಂತ ನಿಮ್ಮವರಿಗೆ ಕಡಿಮೆ ಮಹತ್ವ ನೀಡುತ್ತಿದ್ದಾರೆ ಎನಿಸಬಹುದು. ಆದರೆ ಅದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಅಪರಿಚಿತರ ಮಾತುಗಳಿಂದ ದೂರವಿರಬೇಕು. ಕೆಲವು ಕೆಲಸಗಳಿಗಾಗಿ ನೀವು ಸ್ವಲ್ಪ ದೂರ ಪ್ರಯಾಣಿಸಬೇಕಾಗಬಹುದು. ಏನೂ ಮಾಡಿದರೂ ಆಗುತ್ತದೆ ಎಂದು ಏನನ್ನಾದರೂ ಮಾಡಲು ಹೋಗುವುದು ಬೇಡ. ಮಿಂಚಿ ಹೋದ ಕಾರ್ಯವನ್ನು ಎಷ್ಟೆಂದು ಚಿಂತಿಸುವಿರಿ.
ಮಕರ ರಾಶಿ: ನೀವು ನಿರುದ್ಯೋಗದಿಂದ ಅಪಮಾನವನ್ನು ಎದುರಿಸಬೇಕಾಗುವುದು. ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ಹೆಚ್ಚುವರಿ ಆದಾಯವನ್ನು ಗಳಿಸಲು ನಿಮ್ಮ ಕ್ರೀಯಾಶೀಲತೆ ಅಗತ್ಯವಾಗಿ ಬೇಕು. ಹಣಕಾಸಿನ ಚಟುವಟಿಕೆಗಳಲ್ಲಿ ಸುಧಾರಣೆಯಿಂದ ಬಾಕಿ ಬಿಲ್‌ಗಳನ್ನು ತೀರಿಸಲು ಅನುಕೂಲ. ಸಂಬಂಧಿಕರ ಆಗಮನದಿಂದ ಸಂಜೆಯು ವಿಶೇಷವಾಗಬಹುದು. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಇಂದು ಹಳೆಯ ತಪ್ಪುಗಳನ್ನು ಮರೆತು ಸಂತೋಷವಾಗಿರಿ. ಹೊಸ ತಂತ್ರಜ್ಞಾನ ಬಳಸಿಕೊಂಡು ಬದಲಾಗುವ ಕಾಲಕ್ಕೆ ತಕ್ಕಂತೆ ನಡೆಯಿರಿ. ನೀವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ತಾಯಿಗೆ ಯಾವುದಾದರೂ ಹಳೆಯ ಕಾಯಿಲೆ ಮರುಕಳಿಸಬಹುದು. ಬಹಳ ದಿನಗಳ ಅನಂತರ ಹಳೆಯ ಗೆಳೆಯರನ್ನು ಭೇಟಿಯಾಗುವ ಸಂತಸ ಇರಲಿದೆ. ದೈವಭಕ್ತಿಯು ನಿಮ್ಮನ್ನು ಬಲ ಮಾಡುವುದು.
ಕುಂಭ ರಾಶಿ: ಸ್ನೇಹಿತರ ಜೊತೆ ಸೇರಿ ವಾಗ್ವಾದ ಮಾಡುವಿರಿ. ಗೆಲುವು ಸಿಗದಿದ್ದರೂ ಪ್ರಯತ್ನ ಬಿಡಲಾರಿರಿ. ಇಂದು ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಮನೆಗೆ ಅತಿಥಿಗಳ ಆಗಮನವು ಹೊಸ ಮೆರುಗನ್ನು ಕೊಡುವುದು. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ; ತಪ್ಪಾದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತದೆ. ಕುಟುಂಬದಲ್ಲಿ ಹಿರಿಯರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿ. ಸ್ನೇಹಿತರೊಂದಿಗೆ ಚರ್ಚೆಗಳಲ್ಲಿ ಧೈರ್ಯವಂತಿಕೆಯಿಂದ ನಿರ್ವಹಿಸಿ. ಉದ್ಯೋಗದಲ್ಲಿ ನಿಮಗೆ ನೀಡಲ್ಪಡುವೆ ಹೊಸ ಜವಾಬ್ದಾರಿ ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವಾಗಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರು ಕೆಲವು ಅಪವಾದವನ್ನು ಕೇಳಬೇಕಾದೀತು. ನೀವು ಕೆಲವು ಹಳೆಯ ತಪ್ಪುಗಳಿಂದ ಕಲಿಯಬೇಕು. ಇಂದು ಹೆಚ್ಚಿನ ಸಮಯವನ್ನು ತಂದೆ, ತಾಯಿಯರ ಸೇವೆಯಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಬಹಳ ದಿನಗಳಿಂದ ಒಂದೇ ತರದ ಕೆಲಸಗಳಿಂದ ಬೇಸರವಾಗುವುದು. ಇಂದು ನಡೆದ ಅಹಿತಕರ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ.
ಮೀನ ರಾಶಿ: ನಿಮ್ಮ ಭವಿಷ್ಯದ ಮಾರ್ಗ ನಿರ್ಧಾರವಾಗಲಿದೆ. ಇಂದು ಸಂತೋಷದ ಕ್ಷಣಗಳನ್ನು ನೀವೆ ಸೃಷ್ಟಿಸಿಕೊಳ್ಳುವಿರಿ. ಮನೋರಂಜನೆಗೆ ಹಣವು ಖರ್ಚಾಗುವುದು. ನಿಮ್ಮ ವೈಭವವನ್ನು ಕಂಡು ಬೇರೆಯವರಿಂದ ಮೆಚ್ಚುಗೆ ಸಿಗುವುದು. ಪ್ರೀತಿಯ ಸಂಗಾತಿಯ ಜೊತೆ ವಿಶೇಷ ಸಮಯ ಕಳೆಯಬಹುದು. ನಿಮ್ಮ ಕೆಲಸದಲ್ಲಿ ಉತ್ತಮ ಸಾಧನೆ ಮಾಡಲು ಸಮಯ ಸೂಕ್ತ. ನಿರೀಕ್ಷಿಸದ ಅತಿಥಿಗಳ ಆಗಮನದಿಂದ ಕೆಲವೊಂದು ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಕಾನೂನಿನ ಕ್ರಮದಲ್ಲಿ ಮುಂದುವರಿದರೆ, ನೀವು ಅದರಲ್ಲಿ ಯಶಸ್ವಿಯಾಗುತ್ತೀರಿ. ರಾಜಕೀಯದಲ್ಲಿ ಕೆಲಸ ಮಾಡುವವರಿಗೆ ದೊಡ್ಡ ಹುದ್ದೆಗಳು ಸಿಗುತ್ತವೆ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ.