ಸಿದ್ದರಾಮಯ್ಯಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ ಲಹರ್ ಸಿಂಗ್! ಸಿರೋಯಾ ಎಕ್ಸ್ ಪೋಸ್ಟ್ನಲ್ಲೇನಿದೆ?
ಬಿಜೆಪಿ ನಾಯಕ ಲಹರ್ ಸಿಂಗ್ ಸಿರೋಯಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ GRAAM ಸಮೀಕ್ಷಾ ವರದಿ ಬಗ್ಗೆ ಎಕ್ಸ್‌ನಲ್ಲಿ 6 ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಿಎಂ, ಡಿಸಿಎಂ ಕುರ್ಚಿ ಕದನದ ಮಧ್ಯೆ ಈ ಪ್ರಶ್ನೆಗಳು ಹೆಚ್ಚು ಚರ್ಚೆಯಾಗುತ್ತಿವೆ. GRAAM ಅಧ್ಯಕ್ಷ ಡಾ. ಬಾಲಸುಬ್ರಹ್ಮಣಿಯನ್ ಅವರ ವಿಶ್ವಾಸಾರ್ಹತೆ, GRAAM ವರದಿ ಸೇರಿ ಹಲವು ವಿಷಯಗಳ ಕುರಿತು ಪ್ರಶ್ನೆಗಳನ್ನು ಹಾಕಿರುವ ಸಿರೋಯಾ, ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಬೆಂಗಳೂರು, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ವರದಿ ಮತ್ತು ಸಮೀಕ್ಷೆ ನಡೆಸುವ ಸಂಸ್ಥೆ GRAAM (ಗ್ಲೋಬಲ್ ರಿಸರ್ಚ್ ಅಂಡ್ ಅಕಾಡೆಮಿಕ್ ಅಸೋಸಿಯೇಷನ್ ಮೆಥೋಡ್ಸ್) ಸಂಶೋಧನೆ ವರದಿಗಳ ಬಗ್ಗೆ ಸಂಸದ, ಹಿರಿಯ ಬಿಜೆಪಿ ನಾಯಕ ಲಹರ್ ಸಿಂಗ್ ಸಿರೋಯಾ ತಮ್ಮ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, 6 ಮಹತ್ವದ ಪ್ರಶ್ನೆಗಳನ್ನು ಸಿಎಂ ಮುಂದಿಟ್ಟಿದ್ದಾರೆ. ಸಿಎಂ, ಡಿಸಿಎಂ ಕುರ್ಚಿ ಕದನದ ಮಧ್ಯ ಸಿರೋಯಾ ಪೋಸ್ಟ್ ಮತ್ತು ಅವರು ಕೇಳಿರುವ ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡಿದೆ.
ಪೋಸ್ಟ್ ಇಲ್ಲಿದೆ
I have a few simple questions for Shri. @siddaramaiah (particularly see questions 4 and 5) who has washed his hands off the survey report that his own government’s Evaluation and Monitoring Authority (on public trust in democracy and EVMs) had put out in August 2025.
1. Why did… https://t.co/LvhhcIHiX4
— Lahar Singh Siroya (@LaharSingh_MP) January 2, 2026
ಇದನ್ನೂ ಓದಿ ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!
ಸಿರೋಯಾ ಕೇಳಿರುವ ಪ್ರಶ್ನೆಗಳಿವು
2025ರ ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ಸರ್ಕಾರದ ಇವ್ಯಾಲ್ಯುವೇಶನ್ & ಮ್ಯಾನಿಟರಿಂಗ್ ಅಥಾರಿಟಿ (EMA) ನಡೆಸಿದ ಸಮೀಕ್ಷೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
- ನಿಮ್ಮ ಸಮೀಕ್ಷೆಯ ವೆಬ್ಸೈಟ್ನಲ್ಲಿದ್ದ ವರದಿಯನ್ನು ‘ಮತ ಚೋರಿ’ ಆರೋಪಗಳ ಮೊದಲು ನಡೆಸಲಾಗಿತ್ತು ಎಂದು ಹೇಳಿ ತೆಗೆದುಹಾಕಿದ ಕಾರಣವೇನು?
- GRAAM ಅಧ್ಯಕ್ಷ ಡಾ. ಆರ್. ಬಾಲಸುಬ್ರಹ್ಮಣಿಯನ್ ಹಾರ್ವರ್ಡ್, ಕೊರ್ನೆಲ್ ಶಿಕ್ಷಣ ಹೊಂದಿರುವವರಾಗಿ ಸಮೀಕ್ಷೆ ನಡೆಸಲು ಯೋಗ್ಯರಲ್ಲರಾ?
- ಡಾ. ಬಾಲಸುಬ್ರಹ್ಮಣಿಯನ್ ಪ್ರಧಾನಮಂತ್ರಿ ಮೋದಿಯ ಕುರಿತು ಪುಸ್ತಕ ಬರೆದಿದ್ದರೆ, ಅವರ ವೃತ್ತಿಪರತೆ ಮೇಲೆ ಪ್ರಭಾವವಾಯಿತೆ? ಹಾಗಾದರೆ ನೆಹರು-ಗಾಂಧಿ ರಾಜವಂಶದ ಬಗ್ಗೆ ಪುಸ್ತಕಗಳನ್ನು ಬರೆದವರೆಲ್ಲರೂ ಭ್ರಷ್ಟ ವೃತ್ತಿಪರರೇ? ಅಥವಾ ಹೊಗಳುಭಟ್ಟರೇ
- ಡಾ. ಬಾಲಸುಬ್ರಮಣಿಯನ್ (ಅವರು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ದಶಕಗಳಿಂದ ಕೆಲಸ ಮಾಡಿದ್ದಾರೆ) ಅವರ ಸೈದ್ಧಾಂತಿಕ ಸಂಬಂಧದ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿದಿದ್ದರೆ, ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮತ್ತು ಈಗ, ಲೋಕಸಭಾ ಚುನಾವಣೆಗೆ ಮೊದಲು ಮತ್ತು ನಂತರ ಅವರ ಎರಡನೇ ಅವಧಿಯಲ್ಲಿ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಅಧ್ಯಯನ ಮಾಡಲು ಮತ್ತು ಮುನ್ಸೂಚನೆ ನೀಡಲು ವಿವಿಧ ಸರ್ಕಾರಿ ಇಲಾಖೆಗಳು GRAAM ಗೆ ಗುತ್ತಿಗೆಗಳನ್ನು ಏಕೆ ನೀಡಿವೆ
- 2013-2018 ರ ನಡುವೆ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಡಾ. ಬಾಲಸುಬ್ರಮಣಿಯನ್ ಅವರ ನೇತೃತ್ವದಲ್ಲಿ GRAAM ನಡೆಸಿದ ಸಮೀಕ್ಷೆಗಳು ಮತ್ತು ಅಧ್ಯಯನಗಳ ಪಟ್ಟಿಯನ್ನು ತನಿಖಾ ತಾಣ ದಿ ಫೈಲ್ ಬಿಡುಗಡೆ ಮಾಡಿದೆ. ಆದರೆ ಈಗ ಈ ಯಾವುದೇ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು ಕೇಂದ್ರ ಅಥವಾ ರಾಜ್ಯ ಚುನಾವಣಾ ಆಯೋಗವು ನಡೆಸುತ್ತಿಲ್ಲ ಯಾಕೆ?
- ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ GRAAM ವರದಿಗಳನ್ನು ಏಕೆ ಸ್ವೀಕರಿಸಿ, ಈಗ ಅದು ಸಮಸ್ಯಾತ್ಮಕವಾಗಿದೆ ಎನ್ನುತ್ತಿರುವಿದೇಕೆ? ಪ್ರಧಾನಿ ಮೋದಿ ಮೇಲಿನ ಕರ್ನಾಟಕ ಕಾಂಗ್ರೆಸ್‌ನ ದ್ವೇಷವೇ ಅವರನ್ನು ಮುನ್ನಡೆಸುತ್ತಿದೆಯೇ ಅಥವಾ ಡಿಕೆ ಶಿವಕುಮಾರ್ ಇಂದ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಉಳಿಸಬೇಕಾದ ರಾಹುಲ್‌ಗಾಂಧಿಯವರ ಮೇಲೆ ಭಯವೇ ?
ಈ 6 ಪ್ರಶ್ನೆಗಳನ್ನು ಹಾಕಿರುವ ಲಹರ್ ಸಿಂಗ್, ಕೊನೆಯ 3 ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಂದೂ ಬರೆದುಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Sat, 3 January 26




