BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
Brisbane Heat vs Melbourne Stars: ಕೊನೆಯ ಓವರ್ನಲ್ಲಿ 10 ರನ್ಗಳ ಗುರಿ ಪಡೆದ ಬ್ರಿಸ್ಬೇನ್ ಹೀಟ್ ತಂಡಕ್ಕೆ ಮ್ಯಾಕ್ಸ್ ಬ್ರ್ಯಾಂಟ್ ಆಸರೆಯಾಗಿ ನಿಂತರು. ಅಲ್ಲದೆ ಹಾರಿಸ್ ರೌಫ್ ಎಸೆದ ಕೊನೆಯ ಓವರ್ನ 4 ಎಸೆತಗಳಲ್ಲೇ 10 ರನ್ಗಳಿಸುವ ಮೂಲಕ ಬ್ರ್ಯಾಂಟ್ ಬ್ರಿಸ್ಬೇನ್ ಹೀಟ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ದಿ ಗಬ್ಬಾ ಮೈದಾನದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ 20ನೇ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿತು.
196 ರನ್ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್ ಬ್ರ್ಯಾಂಟ್ ಪಂದ್ಯದ ಗತಿಯನ್ನೇ ಬದಲಿಸಿದರು.
ಕೊನೆಯ 3 ಓವರ್ಗಳಲ್ಲಿ 44 ರನ್ಗಳ ಗುರಿ ಪಡೆದಿದ್ದ ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟರ್ಗಳು ಪೀಟರ್ ಸಿಡ್ಲ್ ಎಸೆದ 18ನೇ ಓವರ್ನಲ್ಲಿ ಕಲೆಹಾಕಿದ್ದು ಬರೋಬ್ಬರಿ 17 ರನ್ಗಳು. ಇನ್ನು ಟಾಮ್ ಕರನ್ ಎಸೆದ 19ನೇ ಓವರ್ನಲ್ಲೂ 17 ರನ್ಗಳಿಸಿದರು.
ಅದರಂತೆ ಕೊನೆಯ ಓವರ್ನಲ್ಲಿ 10 ರನ್ಗಳ ಗುರಿ ಪಡೆದ ಬ್ರಿಸ್ಬೇನ್ ಹೀಟ್ ತಂಡಕ್ಕೆ ಮ್ಯಾಕ್ಸ್ ಬ್ರ್ಯಾಂಟ್ ಆಸರೆಯಾಗಿ ನಿಂತರು. ಅಲ್ಲದೆ ಹಾರಿಸ್ ರೌಫ್ ಎಸೆದ ಕೊನೆಯ ಓವರ್ನ 4 ಎಸೆತಗಳಲ್ಲೇ 10 ರನ್ಗಳಿಸುವ ಮೂಲಕ ಬ್ರ್ಯಾಂಟ್ ಬ್ರಿಸ್ಬೇನ್ ಹೀಟ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಅಂತಿಮ ಹಂತದಲ್ಲಿ ಕೇವಲ 26 ಎಸೆತಗಳನ್ನು ಎದುರಿಸಿದ್ದ ಮ್ಯಾಕ್ಸ್ ಬ್ರ್ಯಾಂಟ್ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 48 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಈ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

