ಗುಂಡಿಯಲ್ಲಿ ಕುತ್ತಿಗೆಯವರೆಗೆ ಮಣ್ಣು ಹಾಕಿಕೊಂಡು ಜೀವಂತ ಸಮಾಧಿಗೆ ಯತ್ನಿಸಿದ ಗಂಡ-ಹೆಂಡತಿ!
ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಸಲು ಪತಿ ಮತ್ತು ಪತ್ನಿ 'ಭೂ ಸಮಾಧಿ'ಗೆ ಯತ್ನಿಸಿದ್ದಾರೆ. ರಾಮನರೇಶ್ ಮತ್ತು ಅವರ ಪತ್ನಿ ಗುಚ್ಚಿ ದೇವಿ ತಮ್ಮ ಮನೆಯ ಪಕ್ಕದಲ್ಲಿ ಗುಂಡಿ ತೋಡಿ ಅದರಲ್ಲಿ ಕುಳಿತು ಕುತ್ತಿಗೆಯವರೆಗೆ ಮಣ್ಣು ಹಾಕಿಕೊಂಡಿದ್ದಾರೆ. ಹಲವು ವರ್ಷಗಳಿಂದ ತಾವು ಆಕ್ರಮಿಸಿಕೊಂಡಿದ್ದ ಭೂಮಿಯಿಂದ ತಮ್ಮನ್ನು ಹೊರಹಾಕಲಾಗುತ್ತಿದೆ ಎಂದು ಆ ದಂಪತಿ ಆರೋಪಿಸಿದ್ದಾರೆ. ಅವರ ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಡಿಯೋರಿಯಾ, ಏಪ್ರಿಲ್ 17: ಉತ್ತರ ಪ್ರದೇಶದ (Uttar Pradesh) ಡಿಯೋರಿಯಾದಲ್ಲಿ ಒಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಡಿಯೋರಿಯಾ ಜಿಲ್ಲೆಯ ಸಲೆಂಪುರ ತಹಸಿಲ್ ಪ್ರದೇಶದ ಪಟ್ಲಾಪುರ ಗ್ರಾಮದಲ್ಲಿ ವೃದ್ಧ ದಂಪತಿ ಮಂಗಳವಾರ ತಮ್ಮ ಮನೆಯ ಪಕ್ಕದಲ್ಲಿನ ಭೂಮಿಯಲ್ಲಿ ಗುಂಡಿಯನ್ನು ನೋಡಿ ಅಲ್ಲೇ ತಮ್ಮನ್ನು ಜೀವಂತ ಸಮಾಧಿ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ಗ್ರಾಮಸಭೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ ದಂಪತಿಗಳು ಭೂ ಸಮಾಧಿಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಗ್ರಾಮದ ಮುಖ್ಯಸ್ಥರು ಭಯಭೀತರಾಗಿ ತಕ್ಷಣ ಆಡಳಿತ ಅಧಿಕಾರಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಪುಣೆ ಆಸ್ಪತ್ರೆಯಲ್ಲಿ ವೀಲ್‌ಚೇರ್ ಇಲ್ಲದೆ ಅಂಗವಿಕಲ ನೆಲದಲ್ಲಿ ತೆವಳಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್
ಸಲೇಂಪುರ ಎಸ್‌ಡಿಎಂ ದಿಶಾ ಶ್ರೀವಾಸ್ತವ ಸ್ಥಳಕ್ಕೆ ಧಾವಿಸಿ ದಂಪತಿಗೆ ಕಾನೂನನ್ನು ವಿವರಿಸಲು ಪ್ರಯತ್ನಿಸಿದರು. “ರಾಮನರೇಶ್ ಅವರ ಪತ್ನಿ ಗುಚ್ಚಿ ದೇವಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದ್ದರು. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದರು. ಈ ದಂಪತಿಗೆ ಒಂದು ಅಂತಸ್ತಿನ ಮನೆ ಇದೆ. ಆದ್ದರಿಂದ, ಅವರಿಗೆ ಯಾವುದೇ ರೀತಿಯಲ್ಲಿ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿಲ್ಲ ಎಂದು ಅವರು ಹೇಳಿದರು. ಹಲವು ಗಂಟೆಗಳ ಕಾಲ ಮನವೊಲಿಸಿ, ಕಷ್ಟಪಟ್ಟು ದಂಪತಿಯನ್ನು ಹೊರಗೆ ಕರೆದೊಯ್ಯಲಾಯಿತು.
UP : जमीन ना मिलने पर देवरिया में पति-पत्नी ने ली भू-समाधि, सरकारी जमीन पर चाह रहे थे कब्जा
◆ SDM ने कहा, “दंपत्ति को कब्जा नहीं मिला, इसलिए उन्होंने भू-समाधि लेने की कोशिश की”#Deoria | Uttar Pradesh | #UttarPradesh | Deoria pic.twitter.com/tOTLyHa8P9
— News24 (@news24tvchannel) April 17, 2025
ಇದನ್ನೂ ಓದಿ: Viral : ನಡುರಸ್ತೆಯಲ್ಲೇ ಪತಿಯ ಎದೆ ಮೇಲೆ ಕುಳಿತು ಹಿಗ್ಗಾಮುಗ್ಗ ಥಳಿಸಿದ ಪತ್ನಿ, ವಿಡಿಯೋ ವೈರಲ್
ರಾಮನರೇಶ್ ಮತ್ತು ಅವರ ಪತ್ನಿ ಗುಚ್ಚಿ ದೇವಿ ತಮ್ಮ ಮನೆಯ ಪಕ್ಕದಲ್ಲಿ ಒಂದು ಗುಂಡಿಯನ್ನು ಅಗೆದು ಅದರಲ್ಲಿ ಕುಳಿತು ತಮ್ಮ ಕುತ್ತಿಗೆಯವರೆಗೆ ಮಣ್ಣು ಹಾಕಿದರು. ವರ್ಷಗಳಿಂದ ತಾವು ಆಕ್ರಮಿಸಿಕೊಂಡಿದ್ದ ಭೂಮಿಯಿಂದ ತಮ್ಮನ್ನು ಹೊರಹಾಕಲಾಗುತ್ತಿದೆ ಎಂದು ದಂಪತಿಗಳು ಆರೋಪಿಸಿದ್ದಾರೆ. ನಮ್ಮ ಭೂಮಿಯನ್ನು ಈಗ ಖಾಲಿ ಮಾಡಲಾಗುತ್ತಿದೆ. ತಮ್ಮ ನೆರೆಹೊರೆಯವರು ಆಕ್ರಮಿಸಿಕೊಂಡಿರುವ ಭೂಮಿಯನ್ನು ಖಾಲಿ ಮಾಡುತ್ತಿಲ್ಲ. ಇದು “ತಾರತಮ್ಯ”ವಾದ್ದರಿಂದ ನಾವು ಭೂ ಸಮಾಧಿಗೆ ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Thu, 17 April 25