AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರಿಗೆ ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ, ಶುಕ್ರವಾರದಂದು ಮೂಲದ ಸಂಪತ್ತಿನ ಕಡೆ ಗಮನ, ಉದ್ಯಮದ ವಿಸ್ತಾರ, ಮಕ್ಕಳಿಗೆ ಅನುಕೂಲತೆಯ ನಿರ್ಮಾಣ ಇವು ಈ ದಿನದ‌ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯವರಿಗೆ ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 18, 2025 | 1:41 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ :ಶುಕ್ರ, ತಿಥಿ : ಪಂಚಮೀ, ನಿತ್ಯನಕ್ಷತ್ರ: ಮೂಲಾ, ಯೋಗ : ಪರಿಘ, ಕರಣ : ತೈತಿಲ, ಸೂರ್ಯೋದಯ – 06:18 am, ಸೂರ್ಯಾಸ್ತ 06: 45 pm, ಇಂದಿನ ಶುಭಾಶುಭಕಾಲ : ರಾಹು ಕಾಲ 10:59 – 12:32, ಯಮಘಂಡ ಕಾಲ 15:39 – 17:12, ಗುಳಿಕ ಕಾಲ 07:52-09:25

ಮೇಷ ರಾಶಿ: ಉತ್ಸಾಹದ ಮಾತುಗಳು ನಿಮ್ಮನ್ನು ಪ್ರೇರಿಸುವುದು ನಿಜ. ಆದರೆ ಅದು ಸರಿಯಾದ ಕಡೆ ಇರಲಿ. ತಂತ್ರಗಾರಿಕೆಯಲ್ಲಿ ವೈಷಮ್ಯ ತಲೆದೋರುವುದು. ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಆದರೆ ನಿಮ್ಮ ಆರೋಗ್ಯವನ್ನೂ ನೀವು ಉಳಿಸಿಕೊಳ್ಳಬೇಕಾಗುವುದು. ನಿಮ್ಮ ವಿಶ್ಲೇಷಣಾ ಶಕ್ತಿ ಇಂದಿನ ಪ್ರಮುಖ ಆಸ್ತಿಯಾಗಲಿದೆ. ಹಣದ ವ್ಯವಹಾರಗಳಲ್ಲಿ ನಿಖರತೆ ಅಗತ್ಯ. ವಿಶೇಷವಾಗಿ ಬಾಕಿ ಇರುವ ವಿಚಾರದ ಕಡೆ ಗಮನ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕೆಲಸದ ಗುಣಮಟ್ಟವು ಮೇಲಧಿಕಾರಿಗಳ ಗಮನ ಸೆಳೆಯಲಿದೆ. ನಿಮ್ಮ ಸಂಗಾತಿಯೊಂದಿಗೆ ಕಲಹಕ್ಕೆ ಕಾರಣವಿಲ್ಲದಂತೆ ಮಾತನಾಡಿ. ಉದ್ಯೋಗಿಗಳಿಗೆ ಇಂದು ಹೆಚ್ಚಿನ ಕೆಲಸದ ಹೊರೆ ಬರಬಹುದು. ಹಿರಿಯರ ಸಹಕಾರದಿಂದ ಸಮಯಕ್ಕೆ ಸರಿಯಾಗಿ ಮಾರ್ಗವು ತೆರೆಯುವುದು. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ಮಕ್ಕಳ ಜೊತೆ ಸಂತೋಷದಿಂದ ಕಳೆಯುವುದು ಅವರಿಗೂ ಖುಷಿಯಾಗುವುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡುವಿರಿ.

ವೃಷಭ ರಾಶಿ: ಮಕ್ಕಳ ಪ್ರಗತಿಯಿಂದ ಸಂತೋಷ. ಕಲಿಕೆಗೆ ಮತ್ತಷ್ಟು ಸಹಾಯ. ಇಂದು ನಿಮ್ಮ ಬಲವಾದ ಆತ್ಮವಿಶ್ವಾಸವು ಎಲ್ಲ ಕೆಲಸವೂ ಬೇಗ ಮುಗಿಯುವಂತೆ ಮಾಡುವುದು. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಯಾವ ಸಮಸ್ಯೆಯನ್ನಾದರೂ ಎದುರಿಸಲು ನೀವು ಸಿದ್ಧರಿದ್ದೀರಿ. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಮಕ್ಕಳ ಜೊತೆಗೆ ಸಮಯ ಕಳೆಯುವುದು ನಿಜವಾದ ಸಂತೋಷ ನೀಡುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರಮವನ್ನು ಗುರುತಿಸಲಾಗುವುದು. ಅನಾರೋಗ್ಯದಿಂದ ಅವಕಾಶ ವಂಚಿತರಾಗುವಿರಿ. ಸಲಹೆ ಪಡೆಯದೆ ಇಂದು ಹಣಕಾಸಿನ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇಂದು ನೀವು ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿದರೆ ಉನ್ನತ ಸ್ಥಾನಕ್ಕೆ ಹೋಗುವ ಕನಸು ನನಸಾಗುವುದು. ಸದುಪಯೋಗ ಆಗುವಂತಹ ಕೆಲಸದ ಕಡೆ ಗಮನವಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಉದ್ಯೋಗದಲ್ಲಿ ನೀವು ಸಡಿಲಾಗುವುದು ಬೇಡ. ನಿಮ್ಮ ಸ್ಥಾನವನ್ನು ಬಿಡುವುದು ಬೇಡ.

ಮಿಥುನ ರಾಶಿ: ಯಾರ ಮನವೊಲಿಸಿ ಮಾಡುವ ಕಾರ್ಯವು ಪೂರ್ಣ ಫಲಕೊಡುವುದು. ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳವನ್ನು ಹುಡುಕುವಿರಿ. ನಿಮ್ಮ ಮಗುವಿನ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ನೀವು ಕೆಲವು ನಷ್ಟಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಆಧ್ಯಾತ್ಮಿಕ ಚಟುವಟಿಕೆಗಳು ಉತ್ತಮ. ಭೂಮಿಯ ವಿಸ್ತರಣೆಯ ಬಗ್ಗೆ ಯೋಚಿಸುವಿರಿ. ಹಣಕಾಸಿನ ತೊಂದರೆಗಳು ತುರ್ತು ಖರ್ಚುಗಳಿಂದ ಉಂಟಾಗಬಹುದು. ಮನೆಯ ಕೆಲಸಗಳು ಕೆಲವೊಂದು ತಲೆನೋವಿಗೆ ಕಾರಣವಾಗಲಿದೆ. ಇಂದು ನಿಮ್ಮನೈಜ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ. ಸಂಗಾತಿಯ ಜೊತೆ ಅದ್ಭುತ ಕ್ಷಣಗಳನ್ನು ಕಳೆಯುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ.‌ ಅಪ್ರಾಮಾಣಿಕತೆಯು ನಿಮಗೆ ಇಷ್ಟವಾಗದು. ನಾಯಕರು ತಮ್ಮ ಬಗ್ಗೆ ಒಳ್ಳಯ ಸುದ್ದಿಯನ್ನು ಕೇಳುವರು. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು.‌

ಕರ್ಕಾಟಕ ರಾಶಿ: ನಿಮ್ಮ ಅಸತ್ಯದ ಮಾತು ಎಲ್ಲರಿಗೂ ಗೊತ್ತಾಗುವುದು. ಯಾರನ್ನೂ ಅವಲಂಬಿಸಬೇಕು ಅನ್ನಿಸದು. ನೀವು ಹಣಕಾಸಿನ ಲಾಭವನ್ನು ಆನಂದಿಸುವ ಸಾಧ್ಯತೆ ಇದೆದೆ. ಆಧ್ಯಾತ್ಮಿಕ ಚಿಂತನೆ ನಿಮ್ಮ ಶಾಂತಮಯವಾಗಿ ಆರಂಭಿಸಲು ಮಾಡುತ್ತದೆ. ಬಹಳ‌ ದಿನಗಳ ಅನಂತರ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಪ್ರತಿಫಲದ ಅಪೇಕ್ಷೆ ಇಲ್ಲದೇ ಮಾಡಿದ ಸಹಾಯದಿಂದ ತೃಪ್ತಿ. ಅನವಶ್ಯಕ ವ್ಯವಹಾರಗಳಲ್ಲಿ ಪಾಲ್ಗೊಳ್ಳದಿರುವುದು ಉತ್ತಮ. ಕೆಲಸದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಇಂದು ಒಳ್ಳೆಯ ಸಮಯ. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಯಾವುದನ್ನೂ ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಇರದು. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ವಿದ್ಯಾರ್ಥಿಗಳು ಕೆಲವುದರಲ್ಲಿ ಸೋಲಬಹುದು.

ಸಿಂಹ ರಾಶಿ: ನಾಯಕರು ಸಮಾರಂಭಗಳಿಗೆ ಭೇಟಿ ನೀಡುವರು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವಿರಿ. ಸಮಯ ಮುಂದುವರೆದಂತೆ ನಿಮ್ಮ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಹಂತಹಂತವಾದ ಬೆಳವಣಿಗೆಯಿಂದ ಸಂತಸ. ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಇತರರ ಮಾತಿಗೆ ಒಳಗಾಗಬೇಡಿ, ಹಣಕಾಸಿನಲ್ಲಿ ನಷ್ಟವಾಗುವ ಸಂಭವವಿದೆ. ದೂರದ ಸಂಬಂಧಿಗಳು ಸಂಪರ್ಕಿಸಿ ಸಂಭ್ರಮ ತರಬಹುದು. ವ್ಯಾಪಾರದ ಗುತ್ತಿಗೆಗಳಲ್ಲಿ ನಿಖತೆ ಅಗತ್ಯ. ಇಂದು ಸಂಗಾತಿಯು ನಿಮ್ಮನ್ನು ಖುಷಿಪಡಿಸಲು ಏನು ಬೇಕಾದರೂ ಮಾಡಬಹುದು. ಇದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ದಾರಿ ಮಾಡಿಕೊಡುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಬಹುದು. ಆಪ್ತರ ಬಗ್ಗೆ ನಿಮಗೆ ಹಲವು ಅನುಮಾನಗಳು ಇರಬಹುದು.‌ ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು.

ಕನ್ಯಾ ರಾಶಿ: ಆದಾಯದ ಮೂಲವನ್ನು ಬಹಿರಂಗಪಡಿಸಬೇಕಾಗುವುದು. ಪ್ರಸ್ತುತ ಪಡಿಸುವುದು ನಿಮ್ಮ ಕೈಯಲ್ಲಿದೆ. ಖರೀದಿಯ ವ್ಯವಹಾರವನ್ನು ಗೌಪ್ಯವಾಗಿ ಮಾಡುವುದು ಬೇಡ. ಅನಂತರ ಪಶ್ಚಾತ್ತಾಪ ಪಡಬೇಕಾಗುವುದು. ಇಂದು ನಿಮ್ಮ ಆಂತರಿಕ ಶಕ್ತಿ ಹೆಚ್ಚು ಸ್ಪಷ್ಟವಾಗಿ ತೋರಬಹುದು. ಆರ್ಥಿಕ ವಿಷಯಗಳಲ್ಲಿ ಬುದ್ಧಿವಂತಿಕೆ ಬಳಸಿ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಲ್ಲಿ ಸಹಮತದಿಂದ ಕೆಲಸ ಮಾಡಿದರೆ ಶಾಂತಿಯುತ ವಾತಾವರಣ ಸಿಗುತ್ತದೆ. ಉದ್ಯೋಗದಲ್ಲಿ ಹೆಚ್ಚು ಶ್ರಮ ನೀಡಿದರೆ ನಿರೀಕ್ಷಿತ ಫಲ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಿ, ಸಂಬಂಧ ಮತ್ತಷ್ಟು ಗಾಢವಾಗುತ್ತದೆ. ಗೌಪ್ಯ ವಿಷಯಗಳನ್ನು ನಿಮ್ಮ ಸಂಗಾತಿಯಿಂದ ಹಂಚಿಕೊಳ್ಳುವಿರಿ. ಸ್ತ್ರೀಯರಿಗೆ ತಾಳ್ಮೆಯ ಪರೀಕ್ಷೆ ಆಗಬಹುದು. ಮನೆಯ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ.‌ ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​