‘ಕಿತ್ತೋದ್ ಕೆಲಸ ಮಾಡಿಲ್ಲ, ನನ್ನಿಂದ ಕೆಲವರ ಹೊಟ್ಟೆಪಾಡು ನಡೆಯುತ್ತಿದೆ’; ಸುದೀಪ್
ಬಿಗ್ ಬಾಸ್ ಕನ್ನಡದಲ್ಲಿ ಧ್ರುವಂತ್‌ಗೆ ಕಿಚ್ಚ ಸುದೀಪ್ ಅವರ 'ಕಿಚ್ಚನ ಚಪ್ಪಾಳೆ' ಗಿಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗಿಲ್ಲಿ ಹೆಚ್ಚು ಮನರಂಜನೆ ನೀಡಿದ್ದಾರೆ ಎಂದು ವಾದಿಸಿದ್ದಾರೆ. ಸುದೀಪ್ ಅಭಿಮಾನಿಗಳು, ಟ್ರೋಲ್‌ಗಳ ಕುರಿತು ಸುದೀಪ್ ಹಿಂದಿನ ಮಾತಿನ ವಿಡಿಯೋ ವೈರಲ್ ಮಾಡುವ ಮೂಲಕ ಅವರ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.

ಯಾವುದೇ ಕೆಲಸ ಮಾಡಿದರೂ ಅದಕ್ಕೆ ಪರ-ವಿರೋಧ ಚರ್ಚೆ ಇದ್ದೇ ಇರುತ್ತದೆ. ಕಿಚ್ಚ ಸುದೀಪ್ (Kichcha Sudeep) ವಿಷಯದಲ್ಲಿ ಅನೇಕ ಬಾರಿ ಹೀಗೆಯೇ ಆಗಿದೆ. ಅವರು ಈ ಸೀಸನ್ ಚಪ್ಪಾಳೆಯನ್ನು ಧ್ರುವಂತ್‌ಗೆ ನೀಡಿದ್ದರು. ಇದನ್ನು ಅನೇಕರು ಟೀಕೆ ಮಾಡಿದ್ದರು. ಆದರೆ, ಈ ಬೆನ್ನಲ್ಲೆ ಸುದೀಪ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಸುದೀಪ್ ಅವರು 10ನೇ ಸೀಸನ್ ಅಲ್ಲಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಮಾಡಲಾಗುತ್ತಿದೆ.
ಧ್ರುವಂತ್ ಅವರಿಗೆ ಇಡೀ ಸೀಸನ್ನ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ. ‘ಧ್ರುವಂತ್ ಸಾಕಷ್ಟು ಮನರಂಜನೆ ನೀಡಿದ್ದಾರೆ. ಅವರ ವಿಟಿ ವಿಶೇಷವಾಗಿ ಇರುತ್ತದೆ’ ಎಂದು ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಹೇಳಿದ್ದರು. ಇದು ಗಿಲ್ಲಿ ಫ್ಯಾನ್ಸ್ನ ಕೆರಳಿಸಿದೆ. ‘ಸೀಸನ್ ಆರಂಭದಿಂದಲೂ ಗಿಲ್ಲಿ ಮನರಂಜನೆ ನೀಡುತ್ತಾ ಬಂದವರು. ಧ್ರುವಂತ್‌ಗೆ ಹೋಲಿಸಿದರೆ ಗಿಲ್ಲಿ ತುಂಬಾನೇ ಬೆಟರ್’ ಎಂದು ಗಿಲ್ಲಿ ಫ್ಯಾನ್ಸ್ ವಾದ ಮುಂದಿಡುತ್ತಿದ್ದಾರೆ. ಸುದೀಪ್ ಅವರನ್ನು ಟೀಕಿಸುವ ಕೆಲಸ ಕೂಡ ಆಗಿದೆ. ಈ ವಿಷಯದಲ್ಲಿ ಸುದೀಪ್ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಹಳೆಯ ವಿಡಿಯೋನ ವೈರಲ್ ಮಾಡುತ್ತಿದ್ದಾರೆ.
View this post on Instagram
‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸಂದರ್ಭದಲ್ಲಿ ಸುದೀಪ್ ಅವರನ್ನು ಸೋಶಿಯಲ್ ಮೀಡಿಯದಲ್ಲಿ ಟೀಕಿಸಲಾಯಿತು. ಈ ಟೀಕೆಯ ಸಂದರ್ಭದಲ್ಲಿ ಸುದೀಪ್ ಒಂದು ಮಾತನ್ನು ಹೇಳಿದ್ದರು. ‘ನನಗಾಗೇ ದುಡ್ಡು ಕೊಟ್ಟು ಸೃಷ್ಟಿಸಿದ ಟ್ರೋಲ್ ಪೇಜ್ಗಳಿವೆ. ನಾನು ಗುಡ್ ಮಾರ್ನಿಂಗ್ ಎಂದರೆ ನಿನ್ನ ಗುಡ್ ಮಾರ್ನಿಂಗ್ ಯಾರಿಗೆ ಬೇಕು ಎನ್ನುತ್ತಾರೆ. ಅವರು ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಮಜಾ ತೆಗೆದಿಕೊಳ್ಳುತ್ತೇನೆ. ಕಿತ್ತೋದ್ ಕೆಲಸ ನಾನಂತೂ ಮಾಡಿಲ್ಲ. ಅವರ ಟ್ರೋಲ್ ಬಗ್ಗೆ ನಂಗೆ ಬೇಸರ ಇಲ್ಲ. ಏಕೆಂದರೆ ನನ್ನಿಂದ ಅವರ ಹೊಟ್ಟೆ ಪಾಡು ನಡೆಯುತ್ತಿದೆ’ ಎಂದು ಕಿಚ್ಚ ಹೇಳಿದ್ದರು.
ಇದನ್ನೂ ಓದಿ: ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಕಿಚ್ಚ ಸುದೀಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆದಿದೆ. ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಆಗುವ ಚರ್ಚೆ ಬಗ್ಗೆ ಸುದೀಪ್ ಅವರು ಮಾತನಾಡಿದ್ದು ಇದೆ. ಈ ವಾರ ಆ ಬಗ್ಗೆ ಮಾತನಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:23 am, Tue, 13 January 26




