ಮತ್ತೊಂದು ಅರುಣ್ ಸಾಗರ್ ಆಗ್ತಾರಾ ಗಿಲ್ಲಿ ನಟ? ರನ್ನರ್ ಅಪ್ ಸ್ಥಾನ ಫಿಕ್ಸ್?
ಬಿಗ್ ಬಾಸ್ ಕನ್ನಡದಲ್ಲಿ ಹಾಸ್ಯ ನಟ ಗಿಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಅವರು ವಿಜೇತರಾಗುತ್ತಾರೆಯೇ ಅಥವಾ ಅರುಣ್ ಸಾಗರ್ ಅವರಂತೆ ರನ್ನರ್ ಅಪ್ ಆಗುತ್ತಾರೆಯೇ ಎಂಬ ಚರ್ಚೆ ನಡೆಯುತ್ತಿದೆ. ಹಲವು ಶೋಗಳಲ್ಲಿ ರನ್ನರ್ ಅಪ್ ಆಗಿರುವ ಗಿಲ್ಲಿಗೆ ಈ ಬಾರಿಯ ಬಿಗ್ ಬಾಸ್ ಗೆಲುವು ಸಿಗುತ್ತಾ ಅಥವಾ ಕರಾಳ ಇತಿಹಾಸ ಮರುಕಳಿಸುತ್ತಾ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಅದು 2013ರ ಸಮಯ. ಆಗತಾನೇ ಬಿಗ್ ಬಾಸ್ (Bigg Boss) ಕನ್ನಡಕ್ಕೆ ಬಂತು. ಕಿಚ್ಚ ಸುದೀಪ್ ಅವರು ಇದರ ಹೋಸ್ಟ್ ಆದರು. ಈಟಿವಿ ಕನ್ನಡದಲ್ಲಿ ಶೋ ಪ್ರಸಾರ ಕಂಡಿತು. 15 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದರು. ಈ ಪೈಕಿ ವಿಜಯ್ ರಾಘವೇಂದ್ರ ಗೆಲುವು ಕಂಡರೆ, ಅರುಣ್ ಸಾಗರ್ ರನ್ನರ್ ಅಪ್ ಆದರು. ಅರುಣ್ ಸಾಗರ್ ನಿಜವಾದ ವಿನ್ನರ್ ಆಗಬೇಕಿತ್ತು ಎಂಬುದು ವೀಕ್ಷಕರ ಅಭಿಪ್ರಾಯ ಆಗಿತ್ತು. ಈಗ ಈ ಸಾಲಿಗೆ ಗಿಲ್ಲಿ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಗಿಲ್ಲಿ ನಟ ಅವರು ಹಾಸ್ಯ ನಟ. ಹಲವು ರಿಯಾಲಿಟಿ ಶೋಗಳಲ್ಲಿ ಅವರು ರಂಜಿಸಿದ್ದಾರೆ. ಈಗ ಬಿಗ್ ಬಾಸ್ಗೆ ಬಂದು ಅವರು ಮನರಂಜನೆ ನೀಡುತ್ತಿದ್ದಾರೆ. ಅವರ ಹಾಸ್ಯಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರೇ ವಿನ್ ಆಗುತ್ತಾರೆ ಎಂದು ಫ್ಯಾನ್ಸ್ ಅಂದುಕೊಂಡಿದ್ದಾರೆ. ಆದರೆ, ಕೊನೆಯ ವಾರಗಳಲ್ಲಿ ಟ್ರೆಂಡ್ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
View this post on Instagram
ಕಳೆದ ವಾರ ಸೀಸನ್ ಚಪ್ಪಾಳೆಯನ್ನು ಸುದೀಪ್ ಅವರು ಧ್ರುವಂತ್ಗೆ ನೀಡಿದರು. ಇಡೀ ಸೀಸನ್ ಉದ್ದಕ್ಕೂ ಮನರಂಜನೆ ನೀಡಿದ್ದು ಗಿಲ್ಲಿ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ಗಿಲ್ಲಿಗೆ ಚಪ್ಪಾಳೆ ಸಿಗುತ್ತಿದ್ದಂತೆ, ಗಿಲ್ಲಿ ಬಳಿ ಮಾತನಾಡಿದ್ದ ರಘು, ‘ಧ್ರುವಂತ್ ಈ ಬಾರಿ ವಿನ್ ಆದರೂ ಆಗಬಹುದು’ ಎಂದಿದ್ದರು. ಇನ್ನು, ಅಶ್ವಿನಿ ಕೂಡ ಒಳ್ಳೆಯ ಸ್ಪರ್ಧೆಯನ್ನೇ ನೀಡುತ್ತಿದ್ದು, ಅವರಿಗೂ ವಿಜಯಲಕ್ಷ್ಮೀ ಒಲಿಯಬಹುದು ಎಂಬುದು ಕೆಲವರ ಅಭಿಪ್ರಾಯ.
ಇದನ್ನೂ ಓದಿ: ಬಿಗ್ ಬಾಸ್ ಎದುರು ವಿಚಿತ್ರ ಆಸೆ ಹೇಳಿಕೊಂಡ ಗಿಲ್ಲಿ ನಟ; ಈಡೇರುತ್ತಾ ಬಯಕೆ?
ಇನ್ನು ಗಿಲ್ಲಿ ಅವರದ್ದು ಒಂದು ಕರಾಳ ಇತಿಹಾಸ ಇದೆ. ಅವರು ಸಾಕಷ್ಟು ಶೋಗಳನ್ನು ಮಾಡಿದ್ದರು ಕೂಡ ಯಾವುದನ್ನೂ ವಿನ್ ಆಗಿಲ್ಲ. ಎಲ್ಲ ಕಡೆಗಳಲ್ಲಿ ರನ್ನರ್ ಅಪ್ ಆಗಿದ್ದೇ ಹೆಚ್ಚು. ಈ ಶೋನಲ್ಲೂ ಇತಿಹಾಸ ಮರುಕಳಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಹಾಗಾದಲ್ಲಿ ಅವರು ಮತ್ತೋರ್ವ ಅರುಣ್ ಸಾಗರ್ ಆಗುತ್ತಾರೆ ಎಂಬುದು ಫ್ಯಾನ್ಸ್ ಅಭಿಪ್ರಾಯ. ಅರ್ಹರಿಗೆ ಗೆಲುವು ಸಿಗಬೇಕು ಎಂಬುದು ವೀಕ್ಷಕರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:45 pm, Tue, 13 January 26




