ಬಿಗ್ ಬಾಸ್ ಎದುರು ವಿಚಿತ್ರ ಆಸೆ ಹೇಳಿಕೊಂಡ ಗಿಲ್ಲಿ ನಟ; ಈಡೇರುತ್ತಾ ಬಯಕೆ?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಆಸೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಎದುರು ವಿಚಿತ್ರ ಬೇಡಿಕೆಗಳನ್ನಿಟ್ಟಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ದೊಡ್ಡಮನೆಯ ಟಿವಿಯಲ್ಲಿ ಸಿನಿಮಾ ವೀಕ್ಷಿಸುವುದು, ಆನೆ ಮೇಲೆ ಕೂರಬೇಕು ಮತ್ತು ನಲ್ಲಿ ಮೂಳೆ ತಿನ್ನುವ ಆಸೆಗಳನ್ನು ಗಿಲ್ಲಿ ವ್ಯಕ್ತಪಡಿಸಿದ್ದಾರೆ. ಈ ಅನಿರೀಕ್ಷಿತ ಬೇಡಿಕೆಗಳನ್ನು ಬಿಗ್ ಬಾಸ್ ಈಡೇರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಸಾಕಷ್ಟು ಮನರಂಜನೆ ನೀಡುವ ಕೆಲಸ ಆಗುತ್ತಿದೆ. ಸ್ಪರ್ಧಿಗಳು ಇದನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲಾ ಸ್ಪರ್ಧಿಗಳು ತಮ್ಮ ಆಸೆ ಹೇಳಿಕೊಳ್ಳುತ್ತಿದ್ದಾರೆ. ಸೋ ಶೀಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಗಿಲ್ಲಿಯ ಆಸೆ ವಿಚಿತ್ರವಾಗಿತ್ತು ಎಂದೇ ಹೇಳಬಹುದು.
ಪ್ರತಿ ಬಾರಿಯೂ ಬಿಗ್ ಬಾಸ್ ಪೂರ್ಣಗೊಳ್ಳುವಾಗ ಸ್ಪರ್ಧಿಗಳ ವಿಶ್ ಕೇಳಲಾಗುತ್ತದೆ. ಈ ವಿಶ್ ಪೈಕಿ ಯಾವುದು ಸಾಧ್ಯವೋ ಅದನ್ನು ಬಿಗ್ ಬಾಸ್ ಈಡೇರಿಸುತ್ತಾರೆ. ಸ್ಪರ್ಧಿಗಳು ಮೂರು ವಿಶ್ ತಿಳಿಸಬೇಕು ಮತ್ತು ಇದರ ಪೈಕಿ ಯಾವುದಾದರೂ ಒಂದು ಈಡೇರುತ್ತದೆ. ಈ ಬಾರಿ ಗಿಲ್ಲಿ ನಟ ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. ಇದನ್ನು ಬಿಗ್ ಬಾಸ್ ಈಡೇರಿಸುತ್ತಾರಾ ಎಂಬುದು ಸದ್ಯದ ಪ್ರಶ್ನೆ ಎಂದೇ ಹೇಳಬಹುದು.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನೂರಾರು ದಿನ ಇರುತ್ತಾರೆ. ಹೊರಗಿನ ಜಗತ್ತು ನೋಡದೇ ಅಷ್ಟು ದಿನ ದೊಡ್ಮನೆಯಲ್ಲಿ ಇರೋದು ಸುಲಭದ ಮಾತಲ್ಲ. ಆದರೆ, ಆ ಸಾಧನೆಯನ್ನು ಸ್ಪರ್ಧಿಗಳು ಮಾಡುತ್ತಾರೆ. ಹೀಗಾಗಿ, ಅವರನ್ನು ಖುಷಿಪಡಿಸೋ ಸಂಪ್ರದಾಯವನ್ನು ಬಿಗ್ ಬಾಸ್ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕರು ವಿವಿಧ ಬೇಡಿಕೆ ಇಟ್ಟಿದ್ದಾರೆ.
Gilli what was that😭
‘Naayi bogalabaardu’ was epic🤣🔥#Gilli #GilliNata #BBK12 pic.twitter.com/4xoORyqYTQ
— Manu (@yoitzmanu) January 12, 2026
‘ಬಿಗ್ ಬಾಸ್ ಮನೆ ಟಿವಿಯಲ್ಲಿ ಒಳ್ಳೆಯ ಸಿನಿಮಾ ನೋಡಬೇಕು. ಬಿಗ್ ಬಾಸ್ ಮನೆ ಒಳಗಿರೋ ಆನೆ ಮೇಲೆ ಕೂರಬೇಕು. ನಲ್ಲಿ ಮೂಳೆ ಇಷ್ಟ. ಅದನ್ನು ತಿಂದು ಮಲಗಬೇಕು. ಆದರೆ, ನಾಯಿ ಕೂಗೋ ಸೌಂಡ್ ಬರಬಾರದು’ ಎಂದು ಬೇಡಿಕೆ ಇಟ್ಟರು ಗಿಲ್ಲಿ. ಇದನ್ನು ಬಿಗ್ ಬಾಸ್ ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಕಿತ್ತೋದ್ ಕೆಲಸ ಮಾಡಿಲ್ಲ, ನನ್ನಿಂದ ಕೆಲವರ ಹೊಟ್ಟೆಪಾಡು ನಡೆಯುತ್ತಿದೆ’; ಸುದೀಪ್
ಈ ಮೊದಲು ಸ್ಪರ್ಧಿಗಳು ಸುದೀಪ್ ಅವರಿಂದ ಅಡುಗೆ ಮಾಡಿಸಿ ತರಿಸಿಕೊಂಡಿದ್ದರು. ಕೆಲ ಸ್ಪರ್ಧಿಗಳು ಸೆಲೆಬ್ರಿಟಿಗಳಿಂದ ವಿಶ್ ಪಡೆದ ಉದಾಹರಣೆಯೂ ಇದೆ. ಗಿಲ್ಲಿ ಈ ರೀತಿಯ ವಿಶ್ಗಳನ್ನು ಪಡೆಯಬಹುದು ಎಂಬುದು ಅನೇಕರ ಆಲೋಚನೆ ಆಗಿತ್ತು. ಆದರೆ, ಅಲ್ಲಾಗಿದ್ದೇ ಬೇರೆ. ಅವರು, ವಿಚಿತ್ರ ಬೇಡಿಕೆಯನ್ನು ಇಟ್ಟಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



