ಕುಣಿಗಲ್ ಉತ್ಸವದಲ್ಲಿ ಬಿಗ್ ಬಾಸ್ ವೀಕ್ಷಕರಿಗೆ ಕಿವಿಮಾತು ಹೇಳಿದ ಸುದೀಪ್
ಕಿಚ್ಚ ಸುದೀಪ್ ಇತ್ತೀಚೆಗೆ ಕುಣಿಗಲ್ ಉತ್ಸವದಲ್ಲಿ ಭಾಗವಹಿಸಿ, ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಕುರಿತು ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಅಭಿಮಾನಿಗಳ ನಡುವಿನ ಕಿತ್ತಾಟದ ಬಗ್ಗೆ ಸುದೀಪ್ ಪ್ರಸ್ತಾಪಿಸಿದರು. ವೀಕ್ಷಕರಿಗೆ ಅವರು ಕಿವಿಮಾತು ಹೇಳಿದ್ದಾರೆ. ಜನವರಿ 18ಕ್ಕೆ ವಿಜೇತರ ಹೆಸರು ಘೋಷಣೆಯಾಗಲಿದೆ.

ಕಿಚ್ಚ ಸುದೀಪ್ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಾರೆ. ಇತ್ತೀಚೆಗೆ ಅವರು ‘ಕುಣಿಗಲ್ ಉತ್ಸವ’ಕ್ಕೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇರಿದಂತೆ ಅನೇಕರು ಇದ್ದರು. ನಿರಂಜನ್ ದೇಶಪಾಂಡೆ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ವೇದಿಕೆ ಮೇಲೆ ಸುದೀಪ್ ಮಾತನಾಡುವಾಗ ಅನೇಕರು ಗಿಲ್ಲಿ ಗಿಲ್ಲಿ (Gilli Nata) ಎಂದು ಕೂಗಿದ್ದಾರೆ. ಈ ವೇಳೆ ಸುದೀಪ್ ಕಿವಿಮಾತು ಹೇಳಿದ್ದಾರೆ.
ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ಎಪಿಸೋಡ್ ಪ್ರಸಾರ ಕಾಣಲಿದೆ. ಇದಕ್ಕೆ ಕೌಂಟ್ಡೌನ್ ಶುರುವಾಗಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ. ಗಿಲ್ಲಿ, ಅಶ್ವಿನಿ ಹಾಗೂ ಇತರ ಸ್ಪರ್ಧಿಗಳು ರೇಸ್ನಲ್ಲಿ ಇದ್ದಾರೆ. ಈಗ ಸುದೀಪ್ ಆಡಿದ ಮಾತು ಗಮನ ಸೆಳೆದಿದೆ.
ಇತ್ತೀಚೆಗೆ ಕುಣಿಗಲ್ ಉತ್ಸವ ಅದ್ದೂರಿಯಾಗಿ ನಡೆದಿದೆ. ಹ್ಯಾರಿಸ್ ನಲ್ಪಾಡ್ ಅವರ ಕೋರಿಕೆ ಮೇರೆಗೆ ಸುದೀಪ್ ಈ ಕಾರ್ಯಕ್ರಮಕ್ಕೆ ತೆರಳಿದ್ದರು. ವೇದಿಕೆ ಮೇಲೆ ನಿಂತು ಸಾವಿರಾರು ಜನರನ್ನು ನೋಡುವಾಗ ಸುದೀಪ್ ಅವರಿಗೆ ಖುಷಿ ಆಯಿತು. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಪ್ರಸ್ತಾಪ ಮಾಡಿದರು. ‘ಬಿಗ್ ಬಾಸ್ ಫಿನಾಲೆ ನೋಡ್ತೀರಾ’ ಎಂದು ಜನರ ಬಳಿ ಪ್ರಶ್ನೆ ಮಾಡಿದಾಗ, ಜನರು ‘ಹೌದು’ ಎಂದು ಕೂಗಿದರು.
‘ನಿಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್ ಮಾಡಿ. ಕಿತ್ತಾಡಿಕೊಳ್ಳಬೇಡಿ’ ಎಂದು ಕಿಚ್ಚ ಕಿವಿಮಾತು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕಿತ್ತಾಟ ಜೋರಾಗಿದೆ. ಸ್ಪರ್ಧಿಗಳ ಅಭಿಮಾನಿಗಳ ಮಧ್ಯೆಯೇ ಕಿತ್ತಾಟ ನಡೆಯುತ್ತದೆ. ಈ ಕಾರಣದಿಂದ ಸುದೀಪ್ ಅವರು ಈ ರೀತಿಯ ಕಿವಿಮಾತು ಹೇಳಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್ ಬಿಗ್ ಬಾಸ್ ಅಲ್ಲಿ ಯಾರು ಗೆಲ್ಲುತ್ತಾರೆ,ಯಾರು ಸೋಲುತ್ತಾರೆ ಎಂಬುದು ಜನರ ವೋಟ್ಗಳ ಮೇಲೆ ನಿರ್ಧಾರ ಆಗುತ್ತದೆ. ಈ ಬಾರಿ ಯಾರು ವಿನ್ ಆಗುತ್ತಾರೆ ಎಂಬ ಕುತೂಹಲ ಮೂಡಿದೆ. ಜನವರಿ 18ರಂದು ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Tue, 13 January 26




