ಕಿಚ್ಚ ಸುದೀಪ್ ಮಾತಿಗೂ ಬೆಲೆ ಕೊಡದ ಗಿಲ್ಲಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
Gilli Nata: ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಕಿಚ್ಚ ಸುದೀಪ್ ಅವರ ಮಾತನ್ನೂ ಗಂಭೀರವಾಗಿ ಸ್ವೀಕರಿಸದ ಕಾರಣ, ಮನೆಯ ಸದಸ್ಯರು ಮತ್ತು ಬಿಗ್ ಬಾಸ್ ಅಸಮಾಧಾನಗೊಂಡಿದ್ದಾರೆ. ಅವರ ನಿರ್ಲಕ್ಷ್ಯದ ಬಗ್ಗೆ ಸಹ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಗಿಲ್ಲಿ ನಟ ಅವರ ಆಟ ಬೇರೆಯದೇ ರೀತಿ ಇದೆ. ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಆದರೆ, ಕೆಲ ವಿಷಯಗಳನ್ನು ಅವರು ಗಂಭೀರವಾಗಿ ಸ್ವೀಕರಿಸುವುದಿಲ್ಲ ಎಂಬ ಆರೋಪ ಇದೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಕಿಚ್ಚ ಸುದೀಪ್ ಹೇಳಿದ ಮಾತನ್ನು ಅವರು ನಡೆಸಿಕೊಡಲಿಲ್ಲ. ಇದಕ್ಕೆ ಮನೆಯ ಇತರ ಸ್ಪರ್ಧಿಗಳು ಬೇಸರ ಹೊರಹಾಕಿದ್ದಾರೆ.
ಗಿಲ್ಲಿ ನಟ ಮೇಲೆ ಒಂದು ದೊಡ್ಡ ಕಂಪ್ಲೇಂಟ್ ಇದೆ. ಅವರು ಯಾವಾಗಲೂ ತಲೆ ಕೂದಲನ್ನು ಬಾಚಿಕೊಳ್ಳೋದಿಲ್ಲ. ಅವರ ಕೂದಲು ಸದಾ ಕೆದರಿಕೊಂಡೇ ಇರುತ್ತದೆ. ಈ ಬಗ್ಗೆ ಇತರರಿಗೆ ಅಸಮಾಧಾನ ಇದೆ. ಕೂದಲನ್ನು ಬಾಚಿಕೊಂಡರೆ ಅವರು ಉತ್ತಮವಾಗಿ ಕಾಣುತ್ತಾರೆ ಎಂಬುದು ಮನೆ ಮಂದಿಯ ಅಭಿಪ್ರಾಯ. ಆದರೆ, ಈ ಅಭಿಪ್ರಾಯಗಳಿಗೆಲ್ಲ ಗಿಲ್ಲಿ ಬೆಲೆ ಕೊಡುವವರಲ್ಲ.
ಕಳೆದ ವೀಕೆಂಡ್ನಲ್ಲಿ ಒಂದು ಪ್ರೀತಿಯ ವಸ್ತುವನ್ನು ಇತರ ಸ್ಪರ್ಧಿಗಳಿಗೆ ನೀಡಬೇಕಾದ ಚಟುವಟಿಕೆ ಬಂತು. ಈ ವೇಳೆ ಗಿಲ್ಲಿ ನಟ ಅವರಿಗೆ ಕಾವ್ಯಾ ತಮ್ಮಿಷ್ಟದ ಬಾಚಣಿಗೆ ನೀಡಿದರು. ಅವರು ಅದರಿಂದ ಕೂದಲು ಬಾಚಿಕೊಂಡರು. ಈ ವೇಳೆ ಸುದೀಪ್ ಅವರು ಒಂದು ನಿರ್ದೇಶನ ಕೊಟ್ಟರು. ‘ದಿನವೂ ಆ ಬಾಚಣಿಗೆಯಿಂದ ಕೂದಲು ಬಾಚಿಕೊಳ್ಳಬೇಕು’ ಎಂದು ಸುದೀಪ್ ಸೂಚನೆ ನೀಡಿದರು.
ಆದರೆ, ಈ ಸೂಚನೆಯನ್ನು ಗಿಲ್ಲಿ ಅಷ್ಟು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಸುದೀಪ್ ಬಂದು ಹೋದ ಮರುದಿನದ ಎಪಿಸೋಡ್ನಲ್ಲಿ ಅವರು ಎಂದಿನಂತೆ ಕೂದಲು ಬಾಚಿಕೊಳ್ಳದೆ ಕುಳಿತಿದ್ದರು. ಆಗ ಬಿಗ್ ಬಾಸ್ ಕಡೆಯಿಂದ ಆದೇಶ ಒಂದು ಬಂತು. ‘ಸುದೀಪ್ ಅವರು ಹೇಳಿದಂತೆ ಗಿಲ್ಲಿ ತಲೆಕೂದಲು ಬಾಚಿಕೊಳ್ಳಬೇಕು ಹಾಗೂ ಒಂದು ಹೊತ್ತು ಅಡುಗೆ ಮಾಡಬೇಕು’ ಎಂದು ಆದೇಶದಲ್ಲಿ ಇತ್ತು. ಬಿಗ್ ಬಾಸ್ ಕೂಡ ಗಿಲ್ಲಿ ಮೇಲೆ ಅಸಮಾಧಾನಗೊಂಡಂತೆ ಕಂಡಿತು.
ಇದನ್ನೂ ಓದಿ: ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ
ಆಗ ರಘು ಹಾಗೂ ಕಾವ್ಯಾ ಗಿಲ್ಲಿ ವಿರುದ್ಧ ನೇರ ಅಸಮಾಧಾನ ಹೊರಹಾಕಿದರು. ‘ಸುದೀಪ್ ಸರ್ ಮಾತಿಗೂ ಬೆಲೆ ಕೊಡ್ತಾ ಇಲ್ವಲ್ಲ ಗಿಲ್ಲಿ’ ಎಂದು ಹೇಳಿದರು. ಆಗ ಗಿಲ್ಲಿ ತಲೆಕೂದಲು ಬಾಚಿಕೊಂಡರು. ಇನ್ನು, ಅವರು ಮಾಡಿದ ಅಡುಗೆ ತಿನ್ನೋಕೆ ಯಾರ ಬಳಿಯೂ ಸಾಧ್ಯವಾಗಿಲ್ಲ. ಉಪ್ಪು ಹಾಗೂ ಖಾರ ಇಲ್ಲದ ಕಾರಣ ಅದನ್ನು ತಿನ್ನೋದು ಅವರಿಗೆ ಕಷ್ಟ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




