ನಮ್ಮ ಬಹುತೇಕ ಬೇಡಿಕೆಗಳನ್ನು ಪರಿಶೀಲಿಸುವ ಭರವಸೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದಾರೆ: ಷಣ್ಮುಗಪ್ಪ
ಸುಮಾರು ಎರಡೂವರೆ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಚೆಕ್ ಪೋಸ್ಟ್ಗಳ ಸಮಸ್ಯೆಯನ್ನು ಸಚಿವರು ಬಗೆಹರಿಸುವ ಭರವಸೆಯನ್ನು ಸಚಿವರ ನೀಡಿದ್ದಾರೆ ಮತ್ತು ಎಫ್ ಸಿ ಸಂಬಂಧಿಸಿದಂತೆ ಲಾರಿ ಮಾಲೀಕರು ಕಟ್ಟಬೇಕಿರುವ ₹ 13,000 ಶುಲ್ಕವನ್ನು ಕಡಿಮ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿನಂತಿ ಮಾಡಿಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಷಣ್ಮುಗಪ್ಪ ಹೇಳಿದರು.
ಬೆಂಗಳೂರು, ಏಪ್ರಿಲ್ 17: ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿದ್ದ ಲಾರಿ ಮುಷ್ಕರ ಇವತ್ತು ಕೊನೆಗೊಂಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (transport minister Ramalinga Reddy) ಅವರೊಂದಿಗೆ ಇಂದು ಸಭೆ ನಡೆಸಿದ ಬಳಿಕ ಲಾರಿ ಮುಷ್ಕರ ವಾಪಸ್ಸು ಪಡೆಯಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಅರ್ ಷಣ್ಮುಗಪ್ಪ ಹೇಳಿದರು. ನಮ್ಮ ಬೇಡಿಕೆಗಳಲ್ಲಿ ಹೆಚ್ಚಿನವನ್ನು ಈಡೇರಿಸುವ ಭರವಸೆ ಸಚಿವ ರಾಮಲಿಂಗಾರೆಡ್ಡಿಯವರು ನೀಡಿರುವುದರಿಂದ ಮುಷ್ಕರವನ್ನು ವಾಪಸ್ಸು ತೆಗೆದುಕೊಳ್ಳಲಾಗಿದೆ ಎಂದು ಷಣ್ಮುಗಪ್ಪಹೇಳಿದರು. ಸಭೆಯ ನಂತರ ರಾಮಲಿಂಗಾರೆಡ್ಡಿ ಮತ್ತು ಷಣ್ಮುಗಪ್ಪ ಜಂಟಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದರು.
ಇದನ್ನೂ ಓದಿ: ಲಾರಿ ಮುಷ್ಕರ: ಮೈಸೂರಿನ ಗೂಡ್ಸ್ ಶೆಡ್ನಲ್ಲಿ 400ಕ್ಕೂ ಹೆಚ್ಚು ಲಾರಿಗಳು ನಿಶ್ಚಲ ಸ್ಥಿತಿಯಲ್ಲಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ