ವಾಷಿಂಗ್ಟನ್: ಸುದೀರ್ಘ ಕೊರೊನಾ ಗ್ಯಾಪ್ ಬಳಿಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಾ ಪ್ರವಾಸದ ಅಂಗವಾಗಿ ವಾಷಿಂಗ್ಟನ್ ಗೆ ಬಂದಿಳಿದರು. ಆ ವೇಳೆ ಭಾರತೀಯ ಸಮುದಾಯದವರು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಪ್ರಧಾನಿ ಮೋದಿ ಸಹ ಯಾವುದೇ ಗ್ಯಾಪ್ ಇಲ್ಲದೆ ಜನರೊಂದಿಗೆ ಮುಕ್ತವಾಗಿ ಬೆರೆತರು.
ಕೊರೊನಾ ಅಂತರ ಪಕ್ಕಕ್ಕಿಟ್ಟು ಭಾರತೀಯ ಸಂಜಾತರೊಂದಿಗೆ ಕೈ ಕುಲುಕಿದ್ದು ವಿಶೇಷವಾಗಿತ್ತು:
ಮೂರು ದಿನಗಳ ಅಮೆರಿಕ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ್ಯಂಡ್ರ್ಯೂವ್ಸ್ ಏರ್‌ಬೇಸ್‌ನಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು. ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಪ್ರಧಾನಿ ಮೋದಿಯನ್ನು ಬರಮಾಡಿಕೊಂಡರು. ಅದಾದಮೇಲೆ ಏರ್‌ಬೇಸ್ ಹೊರಗೆ ಮೋದಿ ಭಾರತೀಯರನ್ನು ಭೇಟಿಯಾದರು. ಸದ್ಯ ಪ್ರಧಾನಿ ಮೋದಿ ವಾಷ್ಟಿಂಗ್ಟನ್ ಡಿಸಿಯ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ-ಜಪಾನ್ ಮತ್ತು ಭಾರತ-ಆಸ್ಟ್ರೇಲಿಯಾ ಮಧ್ಯೆ ಮಾತುಕತೆ ನಡೆಯಲಿದೆ. ಉಭಯ ರಾಷ್ಟ್ರಗಳ ನಡುವೆ ಪ್ರಧಾನಿ ಮೋದಿ ಬಾಂಧವ್ಯ ವೃದ್ಧಿ ಸಂಬಂಧ ಚರ್ಚೆ ನಡೆಸಲಿದ್ದಾರೆ. ಬಳಿಕ ಅಮೆರಿಕ ಉಪಾಧ್ಯಕ್ಷೆ, ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ.
ಆಮೆರಿಕಾದ ವಾಷಿಂಗ್ಟನ್ ಡಿ.ಸಿ.ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಇಂದು ಕೆಲ ಪ್ರಮುಖ ಕಂಪನಿಗಳ ಸಿಇಒ ಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಕ್ವಾಲ್ಕಂ, ಅಡೋಬ್, ಫಸ್ಟ್ ಸೋಲಾರ್, ಜನರಲ್ ಅಟೋಮಿಕ್ಸ್, ಬ್ಲ್ಯಾಕ್ ಸ್ಟೋನ್ ಕಂಪನಿಗಳ ಸಿಇಒ ಜೊತೆಗೆ ಸಭೆ ನಗದಿಪಡಿಸಲಾಗಿದೆ. ತಂತ್ರಜ್ಞಾನ, ನವೀಕರಣ ಇಂಧನ, ಸಾಫ್ಟ್‌ವೇರ್, ಡ್ರೋಣ್, ಬಂಡವಾಳ ಹೂಡಿಕೆ ಸಂಬಂಧಿ ಕಂಪನಿಯ ಸಿಇಒ ಜೊತೆಗೂ ಮೋದಿ ಸಭೆ ನಡೆಸಲಿದ್ದಾರೆ.
ಬೈಡೆನ್ ಅಧ್ಯಕ್ಷರಾದ ಬಳಿಕ ಮೊದಲ ಮುಖಾಮುಖಿ ಭೇಟಿ:
ನಾಳೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಸಭೆ ನಡೆಸಲಿದ್ದಾರೆ. ಭಾರತ-ಅಮೆರಿಕ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚೆಗಳು ನಡೆಯಲಿವೆ. ಬೈಡೆನ್ ಅಧ್ಯಕ್ಷರಾದ ಬಳಿಕ ಪ್ರಧಾನಿ ಮೋದಿ ಜೊತೆಗೆ ಇದು ಮೊದಲ ಮುಖಾಮುಖಿ ಭೇಟಿಯಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಗುರುವಾರ ಬೆಳಗ್ಗೆ 11 ಗಂಟೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮ್ಯಾರಿಸನ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 12.45 ಕ್ಕೆ ಆಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆಗೆ ಸಭೆ ಏರ್ಪಾಡಾಗಿದೆ. ಭಾರತೀಯ ಕಾಲಮಾನ ರಾತ್ರಿ 3 ಗಂಟೆಗೆ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಜೊತೆಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಮಾತುಕತೆ ನಿಗದಿಯಾಗಿದೆ.
ಶ್ವೇತಭವನದಲ್ಲಿ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ ನಡೆಯಲಿದೆ. ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ಸದಸ್ಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶುಕ್ರವಾರ ಶ್ವೇತಭವನದಲ್ಲಿ ಬೈಡೆನ್ ಜತೆ ಮೋದಿ ಔತಣಕೂಟ ಏರ್ಪಾಡಾಗಿದೆ. ಬಳಿಕ ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ. ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಭಾಗಿವಹಿಸಿ, ಶನಿವಾರ ಸಂಜೆ 6.30ಕ್ಕೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ:
ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?
ಇದನ್ನೂ ಓದಿ:
Narendra Modi: ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಮೆರಿಕ ಪ್ರವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ
#WATCH | Prime Minister Narendra Modi arrives at the hotel in Washington DC, US pic.twitter.com/vlZRsIHUhw
— ANI (@ANI) September 22, 2021
"Grateful to the Indian community in Washington DC for the warm welcome. Our diaspora is our strength. It is commendable how the Indian diaspora has distinguished itself across the world," tweets PM Narendra Modi pic.twitter.com/fXRif5I0oO
— ANI (@ANI) September 23, 2021
ದೆಹಲಿಯಿಂದ ನೇರವಾಗಿ ವಾಷಿಂಗ್ಟನ್ ಡಿಸಿ ತಲುಪಿದ ಪ್ರಧಾನಿ ಮೋದಿ|Modi |Tv9Kannada
(PM Narendra Modi on US trip Ecstatic Indian Americans welcome PM Modi in Washington)
Published On - 6:56 am, Thu, 23 September 21