Poco M5: ಬಂಪರ್ ಆಫರ್​ನಲ್ಲಿ ಮೊದಲ ಸೇಲ್ ಕಾಣುತ್ತಿದೆ ಪೋಕೋ M5 ಸ್ಮಾರ್ಟ್​ಫೋನ್: ಬೆಲೆ ಎಷ್ಟು?

Flipkart Big Billion Days 2022: ಪೋಕೋ M5 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 12,499ರೂ. ಮತ್ತು 6GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 14,499 ರೂ. ನಿಗದಿ ಮಾಡಲಾಗಿದೆ.

Poco M5: ಬಂಪರ್ ಆಫರ್​ನಲ್ಲಿ ಮೊದಲ ಸೇಲ್ ಕಾಣುತ್ತಿದೆ ಪೋಕೋ M5 ಸ್ಮಾರ್ಟ್​ಫೋನ್: ಬೆಲೆ ಎಷ್ಟು?
POCO M5
Follow us
TV9 Web
| Updated By: Vinay Bhat

Updated on: Sep 14, 2022 | 6:20 AM

ಭಾರತದಲ್ಲಿ ಪೋಕೋ (Poco) ಸಂಸ್ಥೆಯ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವುದು ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈ441296ಲ್ ಬ್ರ್ಯಾಂಡ್​ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್​ಗಳಿರುವ ಫೋನ್​ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣ ಪೋಕೋ ಸಂಸ್ಥೆ ಕೆಲ ತಿಂಗಳುಗಳ ಕಾಲ ಕಾದು ಕಳೆದ ವಾರವಷ್ಟೆ ಭಾರತದಲ್ಲಿ ಹೊಸ ಪೋಕೋ ಎಮ್​5 (POCO M5) ಫೋನನ್ನು ಅನಾವರಣ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್​ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದ್ರೆ ಪೋಕೋ M5 ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.

  • ಪೋಕೋ M5 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 12,499ರೂ. ಮತ್ತು 6GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 14,499 ರೂ. ನಿಗದಿ ಮಾಡಲಾಗಿದೆ.
  • ಇದು ಐಸಿ ಬ್ಲೂ, ಪೊಕೊ ಹಳದಿ ಮತ್ತು ಪವರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪೋಕೋ M5 ಇದೀಗ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟ ಕಾಣುತ್ತಿದೆ. ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಕಾರ್ಡ್ ಬಳಕೆದಾರರು 1,500ರೂ. ವರೆಗೆ ರಿಯಾಯಿತಿ ಪಡೆಯಬಹುದು.
  • ಇದನ್ನೂ ಓದಿ
    Image
    YouTube: ಯೂಟ್ಯೂಬ್​ನಲ್ಲಿ ಹಣ ಗಳಿಸಲು ಇರುವ ಸುಲಭವಾದ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
    Image
    Motorola Edge 30 Ultra: ಭಾರತದಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಎಷ್ಟು?
    Image
    Airtel 5G: ಕೆಲವೇ ದಿನಗಳಲ್ಲಿ ಏರ್ಟೆಲ್ 5G ಲಭ್ಯ: 5G ಸೇವೆ ಬಳಸಲು ಹೊಸ ಸಿಮ್ ಅಗತ್ಯವಿದೆಯೇ?
    Image
    iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್​ಲೋಡ್ ಮಾಡುವುದು ಹೇಗೆ?
  • ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 1080*2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ಡಿಸ್‌ ಪ್ಲೇ ಹೊಂದಿದೆ. ಈ ಫೋನಿ ಡಿಸೈನ್ ಅದ್ಭುತವಾಗಿದ್ದು ಗ್ರಾಹಕರು ಫಿದಾ ಆಗುವುದು ಗ್ಯಾರೆಂಟಿ.
  • ಮೀಡಿಯಾಟೆಕ್ ಹೀಲಿಯೊ G99 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
  • ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ
  • ಪೋಕೋ M5ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.
  • ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್