iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್​ಲೋಡ್ ಮಾಡುವುದು ಹೇಗೆ?

ಹೊಸ ಐಒಎಸ್ 16 (iOS 16) ಆಯ್ದ ಐಫೋನ್​ಗಳಲ್ಲಿ (iPhone 13) ಮಾತ್ರ ಲಭ್ಯವಿದ್ದು ಈಗಾಗಲೇ ಅಪ್ಡೇಟ್​ಗೆ ಕೂಡ ಸಿಗುತ್ತಿದೆ. ಹೋಮ್ ಸ್ಕ್ರೀನ್, ಅಧಿಸೂಚನೆಗಳು ಮತ್ತು ಫೋಟೋಗಳ ಅಪ್ಲಿಕೇಶನ್ ನವೀಕೃತವಾಗಿದೆ.

iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್​ಲೋಡ್ ಮಾಡುವುದು ಹೇಗೆ?
iOS 16
Follow us
TV9 Web
| Updated By: Vinay Bhat

Updated on: Sep 13, 2022 | 11:34 AM

ಟೆಕ್ ಲೋಕದ ದೈತ್ಯ ಕಂಪನಿ ಆ್ಯಪಲ್ (Apple) ಐಫೋನ್ 14 ಸರಣಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಇದೀಗ ಹೊಸ ಆಪರೇಟಿಂಗ್‌ ಸಿಸ್ಟಮ್‌ iOS 16 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿನೂತನವಾದ ಆಯ್ಕೆಗಳು ನೀಡಲಾಗಿದ್ದು ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ಹೊಸ ಐಒಎಸ್ 16 (iOS 16) ಆಯ್ದ ಐಫೋನ್​ಗಳಲ್ಲಿ (iPhone 13) ಮಾತ್ರ ಲಭ್ಯವಿದ್ದು ಈಗಾಗಲೇ ಅಪ್ಡೇಟ್​ಗೆ ಕೂಡ ಸಿಗುತ್ತಿದೆ. ಹೋಮ್ ಸ್ಕ್ರೀನ್, ಅಧಿಸೂಚನೆಗಳು ಮತ್ತು ಫೋಟೋಗಳ ಅಪ್ಲಿಕೇಶನ್ ನವೀಕೃತವಾಗಿದೆ.

iOS 16 ನಲ್ಲಿ ಫೋಟೋಗಳನ್ನು ಲಾಕ್ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಬಹುದಾಗಿದೆ. ಜೊತೆಗೆ ಫಾಂಟ್ ಶೈಲಿಗಳನ್ನು ಬದಲಾಯಿಸುವ ಆಯ್ಕೆಯ ವಿಜೆಟ್​ಗಳನ್ನು ಒದಗಿಸಲಾಗಿದೆ. ಜೊತೆಗೆ IOS 16 ಇತ್ತೀಚೆಗೆ ಕಳುಹಿಸಿದ ಸಂದೇಶವನ್ನು ಸಂಪಾದಿಸುವ ಅಥವಾ ಅಳಿಸುವ ವೈಶಿಷ್ಟ್ಯವನ್ನು ಹೊಂದಿದೆ. ಫೋಟೋಗಳು ಮತ್ತು ವಿಷಯಾಧಾರಿತ ಸ್ಟೋರೇಜ್‌ಗಳೊಂದಿಗೆ ವಾಲ್‌ಪೇಪರ್‌ ಗ್ಯಾಲರಿಯನ್ನು ಬಳಕೆದಾರರು ಪ್ರವೇಶಿಸಬಹುದು. ಇದು ಬಳಕೆದಾರರಿಗೆ ಸಮಯ ಮತ್ತು ದಿನಾಂಕಕ್ಕಾಗಿ ಫಾಂಟ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡಲಿದೆ.

ಇನ್ನು ಈ ಹೊಸ ಅಪ್ಡೇಟ್​ನಲ್ಲಿ ನೋಟಿಫಿಕೇಶನ್‌ಗಳು ಮತ್ತು ಆಲರ್ಟ್‌ಗಳನ್ನು ಡಿಸ್‌ಪ್ಲೇ ಡೌನ್‌ಸೈಡ್‌ನಲ್ಲಿ ಕಾಣಬಹುದಾಗಿದೆ. ಇದರಿಂದ ಟ್ಯಾಪ್‌ ಮಾಡುವುದು ಹಾಗೂ ವೀಕ್ಷಿಸುವುದು ಸುಲಭವಾಗಲಿದೆ. ಲೈವ್ ಆಕ್ಟಿವಿಟಿಸ್‌ ಎಂಬ ಹೊಸ ಟೂಲ್‌ ಮೂಲಕ ಬಳಕೆದಾರರು ಲಾಕ್ ಸ್ಕ್ರೀನ್‌ನಿಂದ ರಿಯಲ್‌ ಟೈಂ ನಡೆಯುತ್ತಿರುವ ಕಂಟೆಂಟ್‌ ಅನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ವಿಶೇಷವಾಗಿ ಲಾಕ್ ಸ್ಕ್ರೀನ್‌ನಿಂದ ಸ್ವೈಪ್ ಮಾಡುವ ಮೂಲಕ ಫೋಕಸ್ ಮೋಡ್ ಅನ್ನು ಪ್ರವೇಶಿಸಬಹುದಾಗಿದೆ. ಇದರಲ್ಲಿ ನೀವು ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಎಡಿಟ್‌ ಮಾಡುವುದಕ್ಕೆ ಮತ್ತು ಡಿಲೀಟ್‌ ಮಾಡುವುದಕ್ಕೆ ಅವಕಾಶ ಕೂಡ ಸಿಗಲಿದೆ. ಫೋಟೋ ಲೈಬ್ರರಿಯಲ್ಲಿ ಹೊಸ ಆಯ್ಕೆ ಬಂದಿದ್ದು ಇದರಲ್ಲಿ ನೀವು ನಿರ್ದಿಷ್ಟ ವ್ಯಕ್ತಿಗಳ ಫೋಟೋಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ
Image
Motorola Edge 30 Ultra: ಭಾರತದಲ್ಲಿಂದು ಮೊಟ್ಟ ಮೊದಲ 200MP ಕ್ಯಾಮೆರಾ ​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Realme C33: ಬೆಲೆ ಕೇವಲ 8,999 ರೂ.: ಭಾರತದಲ್ಲಿ ರಿಯಲ್ ಮಿ C33 ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ
Image
Galaxy A32: ಸ್ಯಾಮ್​ಸಂಗ್ ಗ್ಯಾಲಕ್ಸಿಯ ಈ ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ
Image
Oppo F21s Pro: ಪವರ್​ಫುಲ್ ಮೈಕ್ರೊ ಲೆನ್ಸ್ ಕ್ಯಾಮೆರಾ: ರೋಚಕತೆ ಸೃಷ್ಟಿಸಿದ ಒಪ್ಪೋ F21s ಪ್ರೊ ಸರಣಿ

ಯಾವ ಐಫೋನ್​ನಲ್ಲಿ ಲಭ್ಯ?:

ಹೊಸ iOS 16 ಐಫೋನ್‌ 14, ಐಫೋನ್‌ 14 ಪ್ಲಸ್‌, ಐಫೋನ್‌ 14 ಪ್ರೊ, ಐಫೋನ್‌ 14 ಪ್ರೊ ಮ್ಯಾಕ್ಸ್‌, ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್‌, ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್‌ 12 ಪ್ರೊ ನಲ್ಲಿ ಲಭ್ಯವಾಗಲಿದೆ. ಇದಲ್ಲದೆ ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್‌ 11, ಐಫೋನ್‌ 11 ಪ್ರೊ, ಐಫೋನ್‌ 11 ಪ್ರೊ ಮ್ಯಾಕ್ಸ್‌, ಐಫೋನ್‌ XS, ಐಫೋನ್‌ XS ಮ್ಯಾಕ್ಸ್‌, ಐಫೋನ್‌ XR, ಐಫೋನ್‌ X, ಐಫೋನ್‌ 8, ಐಫೋನ್‌ 8 ಪ್ಲಸ್‌, ಮತ್ತು ಐಫೋನ್‌ SE ಗಳಲ್ಲಿ ಕಾರ್ಯನಿರ್ವಹಿಸಲಿದೆ.

ಡೌನ್​ಲೋಡ್ ಮಾಡುವುದು ಹೇಗೆ?:

  • ಐಫೋನ್​ನಲ್ಲಿ ಸೆಟ್ಟಿಂಗ್‌ಗೆ ಹೋಗಿ ಅಲ್ಲಿ ಜನರಲ್ ಅನ್ನು ಟ್ಯಾಪ್ ಮಾಡಿ.
  • ಸಾಫ್ಟ್‌ವೇರ್ ಅಪ್ಡೇಟ್ ಟ್ಯಾಪ್ ಮಾಡಿ ಮತ್ತು ರಿಫ್ರೆಶ್ ಆಗುವ ವರೆಗೆ ಕಾಯಿರಿ.
  • ಈಗ iOS 16 ಡೌನ್‌ಲೋಡ್ ಮಾಡಲು ಕೇಳುತ್ತದೆ, ಜೊತೆಗೆ ಹೊಸ ಫೀಚರ್​ಗಳ ಮಾಹಿತಿ ಇರುತ್ತದೆ.
  • ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ಅನ್ನು ಟ್ಯಾಪ್ ಮಾಡಿ.
  • ಡೌನ್‌ಲೋಡ್ ಪೂರ್ಣಗೊಂಡ ನಂತರ, ಇನ್​ಸ್ಟಾಲ್ ನೌ ಆಯ್ಕೆ ಒತ್ತಿ.
  • ಈಗ ಐಫೋನ್ ಇನ್​ಸ್ಟಾಲ್ ಆಗಿ ರೀಸ್ಟಾರ್ಟ್ ಆಗುತ್ತದೆ.
  • ನಂತರ ನಿಮ್ಮ ಐಫೋನ್ iOS 16 ಮೂಲಕ ಕಾರ್ಯನಿರ್ವಹಿಸುತ್ತದೆ.

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್