Galaxy A32: ಸ್ಯಾಮ್‌ಸಂಗ್ ಗ್ಯಾಲಕ್ಸಿಯ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ
Samsung Galaxy A32 Price Cut: ಇದೀಗ ಯಾವುದೇ ಫೋನ್ ಬಿಡುಗಡೆ ಮಾಡದೆ ಅಚ್ಚರಿ ಎಂಬಂತೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ32 (Samsung Galaxy A32) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಕಡಿತ ಮಾಡಿದೆ.
ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್ಫೋನ್ಗಳ ಪೈಕಿ ಸ್ಯಾಮ್‌ಸಂಗ್ (Samsung) ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವುದು. ಮುಖ್ಯವಾಗಿ ಗ್ಯಾಲಕ್ಸಿ ಹೊಸ ಆವೃತ್ತಿಯ ಫೋನ್ ಬಿಡುಗಡೆ ಆಯಿತು ಎಂದಾದರೆ ಆಗ ತನ್ನ ಹಿಂದಿನ ಆವೃತ್ತಿಯ ಫೋನಿನ ಬೆಲೆ ಕೊಂಚ ಕಡಿಮೆ ಮಾಡಿ ಮಾರಾಟ ಮಾಡುತ್ತದೆ. ಆದರೆ, ಇದೀಗ ಯಾವುದೇ ಫೋನ್ ಬಿಡುಗಡೆ ಮಾಡದೆ ಅಚ್ಚರಿ ಎಂಬಂತೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎ32 (Samsung Galaxy A32) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ದಿಢೀರ್ ಕಡಿತ ಮಾಡಿದೆ. ನೀವು ದೊಡ್ಡ ಬ್ಯಾಟರಿ, ಅತ್ಯುತ್ತಮ ಕ್ಯಾಮೆರಾ ಫೋನನ್ನು ಹುಡುಕುತ್ತಿದ್ದರೆ ಇದೊಂದು ಅತ್ಯುತ್ತಮ ಆಯ್ಕೆ ಆಗಲಿದೆ. ಹಾಗಾದ್ರೆ ಈ ಫೋನಿನ ಬೆಲೆಯಲ್ಲಿ ಎಷ್ಟು ಕಡಿಮೆ ಮಾಡಲಾಗಿದೆ?, ಫೀಚರ್ಸ್ ಏನು ಎಂಬುದನ್ನು ನೋಡೋಣ.
ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ A32 ಫೋನ್ ಕಳೆದ ವರ್ಷ ನವೆಂಬರ್ನಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದರ ಒಂದು ವೇರಿಯಂಟ್ನಲ್ಲಿ ಬರೋಬ್ಬರಿ 3,500 ರೂ. ಗಳನ್ನು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯಿಂದಾಗಿ ಈ ಫೋನಿನ 8GB RAM + 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 19,999 ರೂ. ಆಗಿದೆ. ಈ ಫೋನ್ 23,499 ರೂ. ಗೆ ಅನಾವರಣಗೊಂಡಿತ್ತು. ಕಂಪನಿಯ ಅಧಿಕೃತ ವೆಬ್ಸೈಟ್ ಮತ್ತು ಇ ಕಾಮರ್ಸ್ ತಾಣಗಳಲ್ಲಿ ಗ್ಯಾಲಕ್ಸಿ A32 ಫೋನನ್ನು ನೀವು ಖರೀದಿಸಬಹುದು.
#SamsungGalaxyA32 now available for ₹19999 pic.twitter.com/5AnQN4AlMD
— Mahesh Telecom (@MAHESHTELECOM) September 10, 2022
ಗ್ಯಾಲಕ್ಸಿ A32 ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ ಹೆಚ್‌ಡಿ+ ಸ್ಕ್ರೀನ್ ಹೊಂದಿದ್ದು, 90Hz ರೀಫ್ರೆಶ್ ರೇಟ್ ಇದೆ. ಮೀಡಿಯಾಟೆಕ್ ಹೀಲಿಯೋ ಜಿ80 ಪ್ರೊಸೆಸರ್ ಜೊತೆಗೂಡಿರುವುದರಿಂದ ಕಾರ್ಯಾಚರಣೆಯು ಸುಲಲಿತವಾಗಿದೆ. ಆಂಡ್ರಾಯ್ಡ್ 11 ಒಎಸ್ ನೀಡಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A32 ಫೋನ್‌ನ ಕ್ಯಾಮೆರಾದಲ್ಲಿ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಇದ್ದು, 8MP ಆಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ಹಾಗೂ ತಲಾ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್‌ಗಳಿವೆ. ಸೆಲ್ಫೀಗೆ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರಧಾನ ಕ್ಯಾಮೆರಾವು ಹೊರಾಂಗಣದಲ್ಲಿ ಅದ್ಭುತವಾಗಿ ಬಣ್ಣಗಳ ಮಿಳಿತದೊಂದಿಗೆ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸಮೀಪದ ವಸ್ತುಗಳು ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳಿಂದಾಗಿ ಅತ್ಯುತ್ತಮವಾಗಿ ಸೆರೆಯಾಗುತ್ತವೆ. 20MP ಸಾಮರ್ಥ್ಯದ ಲೆನ್ಸ್ ಮೂಲಕ ಸೆಲ್ಫೀ, ಈಗಿನ ಅಗತ್ಯಕ್ಕೆ ತಕ್ಕಂತೆ ಚಿತ್ರಗಳಿಗೆ ಹೆಚ್ಚು ಸೌಂದರ್ಯ ಒದಗಿಸುತ್ತದೆ.
ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ವೈ–ಫೈ, ಬ್ಲೂಟೂತ್, ಮತ್ತು ಜಿಪಿಎಸ್ ಸೇರಿದಂತೆ ಪ್ರಮುಖ ನೂತನ ಫೀಚರ್ಗಳಿಂದ ಕೂಡಿದೆ.