Airtel 5G: ಕೆಲವೇ ದಿನಗಳಲ್ಲಿ ಏರ್ಟೆಲ್ 5G ಲಭ್ಯ: 5G ಸೇವೆ ಬಳಸಲು ಹೊಸ ಸಿಮ್ ಅಗತ್ಯವಿದೆಯೇ?

ಏರ್ಟೆಲ್ 5ಜಿ ಆಯ್ದ ಮೆಟ್ರೊ ನಗರಗಳಲ್ಲಿ ಅಕ್ಟೋಬರ್ ವೇಳೆ ಲಭ್ಯವಾಗಲಿದೆ. ಆರಂಭದಲ್ಲಿ ಡೆಲ್ಲಿ, ಮುಂಬೈ, ಚೆನ್ನೈ ಸೇರಿದಂತೆ ಕೆಲ ಮುಖ್ಯ ನಗರಗಳಲ್ಲಿ 5ಜಿ ಕಾರ್ಯನಿರ್ವಹಿಸುತ್ತದೆ. 2023ರ ವೇಳೆ ಬಹುತೇಕ ಎಲ್ಲ ಕಡೆಗಳಲ್ಲಿ ಏರ್ಟೆಲ್ 5ಜಿ ಹರಡಲಿದೆ.

Airtel 5G: ಕೆಲವೇ ದಿನಗಳಲ್ಲಿ ಏರ್ಟೆಲ್ 5G ಲಭ್ಯ: 5G ಸೇವೆ ಬಳಸಲು ಹೊಸ ಸಿಮ್ ಅಗತ್ಯವಿದೆಯೇ?
Airtel 5G
Follow us
TV9 Web
| Updated By: Vinay Bhat

Updated on: Sep 13, 2022 | 12:19 PM

ಭಾರತದಲ್ಲಿ 5G ನೆಟ್​ವರ್ಕ್ (5G Network) ಸೇವೆಯನ್ನು ಆನಂದಿಸಲು ಬಳಕೆದಾರರು ಕಾದು ಕುಳಿತಿದ್ದಾರೆ. ಈಗಾಗಲೇ ರಿಲಯನ್ಸ್ ಒಡೆತನದ ಜಿಯೋ (Jio) ಟೆಲಿಕಾಂ ಕಂಪನಿ ದೀಪಾವಳಿ ವೇಳೆಗ 5ಜಿ ಸೇವೆ ನೀಡುವುದಾಗಿ ಘೋಷಣೆ ಮಾಡಿದೆ. ಇದೀಗ ಭಾರ್ತಿ ಏರ್ಟೆಲ್ ಅತಿ ವೇಗದ ಇಂಟರ್ನೆಟ್‌ ಕನೆಕ್ಷನ್‌ 5G ಅನ್ನು ಸದ್ಯದಲ್ಲೇ ಎಲ್ಲ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಈ ಬಗ್ಗೆ ಏರ್ಟೆಲ್ (Bharti Airtel) ಎಂಟರ್‌ಪ್ರೈಸಸ್‌ನ ಉಪಾಧ್ಯಕ್ಷ ಅಖಿಲ್ ಗುಪ್ತಾ ಮಾಹಿತಿ ನೀಡಿದ್ದು, ಮುಂದಿನ ತಲೆಮಾರಿನ ಏರ್ಟೆಲ್ 5G ಸೇವೆಯನ್ನು ಗ್ರಾಹಕರು ಕೆಲವೇ ವಾರಗಳಲ್ಲಿ ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆದ 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್ಟೆಲ್ 900 MHz, 1800 MHz, 2100 MHz, 3300 MHz, ಮತ್ತು 26 GHz ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಿತ್ತು. ಏರ್ಟೆಲ್ ಒಟ್ಟು 43,084 ರೂ. ಕೋಟಿ ವೆಚ್ಚ ಮಾಡಿ 19867.8 MHz ಏರ್‌ವೇವ್‌ಗಳಿಗೆ ಬಿಡ್ ಮಾಡಿದೆ. ಏರ್‌ಟೆಲ್‌ನಲ್ಲಿ ಈ ಸ್ಪೆಕ್ಟ್ರಮ್‌ಗಳು ಮುಂದಿನ 20 ವರ್ಷಗಳವರೆಗೆ ಇರುತ್ತವೆ.

“ಏರ್ಟೆಲ್ 5ಜಿ ಆಯ್ದ ಮೆಟ್ರೊ ನಗರಗಳಲ್ಲಿ ಅಕ್ಟೋಬರ್ ವೇಳೆ ಲಭ್ಯವಾಗಲಿದೆ. ಆರಂಭದಲ್ಲಿ ಡೆಲ್ಲಿ, ಮುಂಬೈ, ಚೆನ್ನೈ ಸೇರಿದಂತೆ ಕೆಲ ಮುಖ್ಯ ನಗರಗಳಲ್ಲಿ 5ಜಿ ಕಾರ್ಯನಿರ್ವಹಿಸುತ್ತದೆ. 2023ರ ವೇಳೆ ಬಹುತೇಕ ಎಲ್ಲ ಕಡೆಗಳಲ್ಲಿ ಏರ್ಟೆಲ್ 5ಜಿ ಹರಡಲಿದೆ. ನಿಮ್ಮ ಪ್ರದೇಶದಲ್ಲಿ ಏರ್ಟೆಲ್ 5ಜಿ ಸೇವೆ ಇದೆಯೇ ಎಂದು ತಿಳಿಯಲು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿ ನೋಡಬಹುದು ಹಾಗೂ ನಿಮ್ಮ ಮೊಬೈಲ್​ಗೆ 5ಜಿ ನೆಟ್​ವರ್ಕ್ ಸಪೋರ್ಟ್ ಆಗುತ್ತಾ ಎಂಬುದನ್ನು ಕೂಡ ಪರಿಶೀಲಿಸಬಹುದು,” ಎಂದು ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ
Image
iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್​ಲೋಡ್ ಮಾಡುವುದು ಹೇಗೆ?
Image
Motorola Edge 30 Ultra: ಭಾರತದಲ್ಲಿಂದು ಮೊಟ್ಟ ಮೊದಲ 200MP ಕ್ಯಾಮೆರಾ ​ಫೋನ್ ಬಿಡುಗಡೆ: ಬೆಲೆ ಎಷ್ಟು?
Image
Realme C33: ಬೆಲೆ ಕೇವಲ 8,999 ರೂ.: ಭಾರತದಲ್ಲಿ ರಿಯಲ್ ಮಿ C33 ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ
Image
Galaxy A32: ಸ್ಯಾಮ್​ಸಂಗ್ ಗ್ಯಾಲಕ್ಸಿಯ ಈ ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ

ಏರ್ಟೆಲ್ 5ಜಿ ನೆಟ್​ವರ್ಕ್ ಇಗಿರುವ 4ಜಿ ನೆಟ್​ವರ್ಕ್​ಗಿಂತ 20-30 ಸಮಯ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ನೆಟ್​ವರ್ಕ್ ಸ್ಲೈಸಿಂಗ್ ಎಂಬ ಫೀಚರ್ ನೀಡುತ್ತಿದ್ದು ಈ ಮೂಲಕ ಕಡಿಮೆ ನೆಟ್​ವರ್ಕ್ ಇರುವ ಪ್ರದೇಶದಲ್ಲಿ ಅಥವಾ ವರ್ಕ್​ ಫ್ರಮ್ ಹೋಮ್ ಕೆಲಸ ಮಾಡುವವರಿಗೆ ಹೈ ಸ್ಪೀಡ್​ನಲ್ಲಿ 5ಜಿ ನೆಟ್​ವರ್ಕ್ ಉಪಯೋಗಿಸಬಹುದಾಗಿದೆ.

ನಿಮ್ಮಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಏರ್ಟೆಲ್ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್​ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್​ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್​ಫೋನ್​ನಲ್ಲಿ ನೆಟ್​ವರ್ಕ್​ ಸೆಟ್ಟಿಂಗ್​ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.

ಇನ್ನು ಏರ್ಟೆಲ್ ಹೆಚ್ಚಿನ ಸುಂಕದ ಯೋಜನೆಗಳೊಂದಿಗೆ 5G ಸೇವೆಗಳನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ”ಈ ದಿನಗಳಲ್ಲಿ ಅನೇಕ ಜನರಿಗೆ ಕೆಲಸ ಅಥವಾ ಮನರಂಜನೆಗಾಗಿ ಹೆಚ್ಚುವರಿ ಡೇಟಾ ಅಗತ್ಯವಿದೆ. ಏರ್ಟೆಲ್​ ಅಂತಹ ಗ್ರಾಹಕರಿಗೆ ವ್ಯವಸ್ಥೆ ರೂಪಿಸಿದೆ. ಕಂಪನಿಯು ಪ್ರಸ್ತುತ ನಾಲ್ಕು ಡೇಟಾ ಬೂಸ್ಟರ್ ಪ್ಯಾಕ್‌ಗಳನ್ನು ಹೊಂದಿದೆ. ದೇಶದಲ್ಲಿ 5Gಯ ​​ಹರಡುವಿಕೆ ಬಹಳ ವೇಗವಾಗಿರುತ್ತದೆ,” ಎಂದು ಗುಪ್ತಾ ಹೇಳಿದ್ದಾರೆ.