Kannada News Latest news Poco M5 sale started in country as part of the Flipkart Big Billion Days 2022 sale
Poco M5: ಬಂಪರ್ ಆಫರ್ನಲ್ಲಿ ಮೊದಲ ಸೇಲ್ ಕಾಣುತ್ತಿದೆ ಪೋಕೋ M5 ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
Flipkart Big Billion Days 2022: ಪೋಕೋ M5 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 12,499ರೂ. ಮತ್ತು 6GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 14,499 ರೂ. ನಿಗದಿ ಮಾಡಲಾಗಿದೆ.
ಭಾರತದಲ್ಲಿ ಪೋಕೋ (Poco) ಸಂಸ್ಥೆಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುವುದು ಕಡಿಮೆ ಆಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಅನೇಕ ಮೊಬೈ441296ಲ್ ಬ್ರ್ಯಾಂಡ್ಗಳು ಹುಟ್ಟುಕೊಂಡಿರುವ ಕಾರಣ ಸಾಮಾನ್ಯ ಫೀಚರ್ಗಳಿರುವ ಫೋನ್ಗಳಿಗೆ ಬೇಡಿಕೆ ಇಲ್ಲ. ಇದೇ ಕಾರಣ ಪೋಕೋ ಸಂಸ್ಥೆ ಕೆಲ ತಿಂಗಳುಗಳ ಕಾಲ ಕಾದು ಕಳೆದ ವಾರವಷ್ಟೆ ಭಾರತದಲ್ಲಿ ಹೊಸ ಪೋಕೋಎಮ್5 (POCO M5) ಫೋನನ್ನು ಅನಾವರಣ ಮಾಡಿತ್ತು. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದ್ರೆ ಪೋಕೋ M5 ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
ಪೋಕೋ M5 ಸ್ಮಾರ್ಟ್‌ಫೋನ್ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿತ್ತು. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 12,499ರೂ. ಮತ್ತು 6GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 14,499 ರೂ. ನಿಗದಿ ಮಾಡಲಾಗಿದೆ.
ಇದು ಐಸಿ ಬ್ಲೂ, ಪೊಕೊ ಹಳದಿ ಮತ್ತು ಪವರ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪೋಕೋ M5 ಇದೀಗ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಕಾಣುತ್ತಿದೆ. ಐಸಿಐಸಿಐ ಬ್ಯಾಂಕ್ ಮತ್ತು ಆ್ಯಕ್ಸಿಸ್ ಕಾರ್ಡ್ ಬಳಕೆದಾರರು 1,500ರೂ. ವರೆಗೆ ರಿಯಾಯಿತಿ ಪಡೆಯಬಹುದು.
ಇದನ್ನೂ ಓದಿ
YouTube: ಯೂಟ್ಯೂಬ್ನಲ್ಲಿ ಹಣ ಗಳಿಸಲು ಇರುವ ಸುಲಭವಾದ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Motorola Edge 30 Ultra: ಭಾರತದಲ್ಲಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು?
Airtel 5G: ಕೆಲವೇ ದಿನಗಳಲ್ಲಿ ಏರ್ಟೆಲ್ 5G ಲಭ್ಯ: 5G ಸೇವೆ ಬಳಸಲು ಹೊಸ ಸಿಮ್ ಅಗತ್ಯವಿದೆಯೇ?
iOS 16 Update: ಬಹುನಿರೀಕ್ಷಿತ iOS 16 ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್: ಡೌನ್ಲೋಡ್ ಮಾಡುವುದು ಹೇಗೆ?
ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 1080*2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ ಪ್ಲೇ ಹೊಂದಿದೆ. ಈ ಫೋನಿ ಡಿಸೈನ್ ಅದ್ಭುತವಾಗಿದ್ದು ಗ್ರಾಹಕರು ಫಿದಾ ಆಗುವುದು ಗ್ಯಾರೆಂಟಿ.
ಮೀಡಿಯಾಟೆಕ್ ಹೀಲಿಯೊ G99 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ
ಪೋಕೋ M5ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ v5, GPS/ A-GPS, ಇನ್‌ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿದೆ.