ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ: ಬೃಹತ್ ಹೊಂಡ, ಪರಿಕರ ಸೀಜ್ ಮಾಡಿದ ಅಧಿಕಾರಿಗಳು
ಆನೇಕಲ್: ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೊಂಡಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಅತ್ತಿಬೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಲಬೆಲೆಯಲ್ಲಿ ಮೂರು ಬೃಹತ್ ಹೊಂಡಗಳಲ್ಲಿ ಆಫ್ರಿಕನ್ ಕ್ಯಾಟ್ ಫಿಶ್ ಸಾಕಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಅಧಿಕಾರಿಗಳು ದಾಳಿ ನಡೆಸಿ ಹೊಂಡಗಳನ್ನು ಸೀಜ್ ಮಾಡಿದ್ದಾರೆ. ವೆಂಕಟೇಶ್ ಎಂಬಾತ 5 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ನಿಷೇಧಿತ ಮೀನುಗಳ ಸಾಕಣೆ ಮಾಡುತ್ತಿದ್ದ. ಖಚಿತ ಮಾಹಿತಿಯ […]
ಆನೇಕಲ್: ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹೊಂಡಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಅತ್ತಿಬೆಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಲಬೆಲೆಯಲ್ಲಿ ಮೂರು ಬೃಹತ್ ಹೊಂಡಗಳಲ್ಲಿ ಆಫ್ರಿಕನ್ ಕ್ಯಾಟ್ ಫಿಶ್ ಸಾಕಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಅಧಿಕಾರಿಗಳು ದಾಳಿ ನಡೆಸಿ ಹೊಂಡಗಳನ್ನು ಸೀಜ್ ಮಾಡಿದ್ದಾರೆ.
ವೆಂಕಟೇಶ್ ಎಂಬಾತ 5 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ನಿಷೇಧಿತ ಮೀನುಗಳ ಸಾಕಣೆ ಮಾಡುತ್ತಿದ್ದ. ಖಚಿತ ಮಾಹಿತಿಯ ಮೇರೆಗೆ ಅತ್ತಿಬೆಲೆ PSI ಮುರುಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ದಾಳಿ ಮಾಡಿ ಹೊಂಡದ ಸ್ಥಳಕ್ಕೆ ಪ್ರವೇಶ ತಡೆದಿದೆ. ವೆಂಕಟೇಶ್ ನಿಷೇಧವಿದ್ದರೂ ಗ್ರಾಮದ ಮಧ್ಯೆಯೇ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದ.