ನಕಲಿ ವಿವಿ ಹೆಸರಲ್ಲಿ ಡಾಕ್ಟರೇಟ್ ಪ್ರದಾನ.. ವೇದಿಕೆಯಲ್ಲೇ ಮೂವರ ಅರೆಸ್ಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ಪದವಿ ನೀಡುವ ದಂಧೆ ನಡೆಯುತ್ತಿದೆ. ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಇಂಟರ್​ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಕಾರ್ಯಕ್ರಮದ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿ: ನಿಖರ ಮಾಹಿತಿ ಮೇರೆಗೆ ದಾಳಿ ನಡೆಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. […]

ನಕಲಿ ವಿವಿ ಹೆಸರಲ್ಲಿ ಡಾಕ್ಟರೇಟ್ ಪ್ರದಾನ.. ವೇದಿಕೆಯಲ್ಲೇ ಮೂವರ ಅರೆಸ್ಟ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 26, 2020 | 2:17 PM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಕಲಿ ಯುನಿವರ್ಸಿಟಿ ಹೆಸರಲ್ಲಿ ಡಾಕ್ಟರೇಟ್ ಪದವಿ ನೀಡುವ ದಂಧೆ ನಡೆಯುತ್ತಿದೆ. ಖಾಸಗಿ ಹೋಟೆಲ್​ನಲ್ಲಿ ನಡೆಯುತ್ತಿದ್ದ ಇಂಟರ್​ನ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಡಿಸಿಪಿ ಪ್ರಕಾಶ್ ಗೌಡ ನೇತೃತ್ವದ ತಂಡ ದಾಳಿ ನಡೆಸಿದೆ.

ಕಾರ್ಯಕ್ರಮದ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿ:
ನಿಖರ ಮಾಹಿತಿ ಮೇರೆಗೆ ದಾಳಿ ನಡೆಸುತ್ತಿದ್ದಂತೆ ಕಾರ್ಯಕ್ರಮದ ಆಯೋಜಕರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಈ ನಕಲಿ ಯುನಿವರ್ಸಿಟಿ ಮುಂದಾಗಿತ್ತು.

ಕರ್ನಾಟಕ ಸೇರಿದಂತೆ ದೇಶದ ಇತರ ಭಾಗಗಳಲ್ಲೂ ಡಾಕ್ಟರೇಟ್ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿದ್ದ ನಕಲಿ ಯುನಿವರ್ಸಿಟಿಯ ಪ್ರಶಸ್ತಿ ಪತ್ರ, ಮೂಮೆಂಟೋಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us