ಆನೇಕಲ್: ಇಂದು ಬೆಳಗ್ಗೆ ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮುತ್ಯಾಲಮಡು ಬಳಿ ವೇಲು ಅಲಿಯಾಸ್ ಸೈಕೋ, ಬಾಲಕೃಷ್ಣ ಅಲಿಯಾಸ್ ಬಾಲ ಕಾಲಿಗೆ ಗುಂಡೇಟು ಹೊಡೆದಿದ್ದಾರೆ.
ಕಳೆದ ಒಂದು ವಾರದ ಹಿಂದೆ ಆರೋಪಿಗಳು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ವ್ಯಾಪ್ತಿಯ ಸಿಂಗೇನ ಅಗ್ರಹಾರ ಬಳಿ ಒಂಟಿ ಮಹಿಳೆ ಕೊಲೆ ಮಾಡಿ ಮನೆಯಲ್ಲಿ ಕಳ್ಳತನ ಮಾಡಿದ್ದರು. ನಿನ್ನೆ ರಾತ್ರಿ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ರು. ಈ ವೇಳೆ ಆರೋಪಿಗಳು ಚೂಪಾದ ಕತ್ತಿಯಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ರು. ಹೀಗಾಗಿ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಹೆಬ್ಬಗೋಡಿ ಪಿಐ ಗೌತಮ್ ಮತ್ತು ಬನ್ನೇರುಘಟ್ಟ ಪಿಎಸ್‌ಐ ಗೋವಿಂದ್ ಫೈರಿಂಗ್ ಮಾಡಿದ್ದಾರೆ.