ಸ್ಯಾಂಡಲ್‌ವುಡ್‌ Drugs ಜಾಲ: ನಟ ಯೋಗಿ​, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟ ಲೂಸ್​ ಮಾದ ಯೋಗೀಶ್​ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ. ಮಾಜಿ […]

ಸ್ಯಾಂಡಲ್‌ವುಡ್‌ Drugs ಜಾಲ: ನಟ ಯೋಗಿ​, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ
Follow us
KUSHAL V
|

Updated on: Sep 21, 2020 | 8:09 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟ ಲೂಸ್​ ಮಾದ ಯೋಗೀಶ್​ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ. ಮಾಜಿ ಕ್ರಿಕೆಟಿಗ NC ಅಯ್ಯಪ್ಪ ಹಾಗೂ ಕಿರುತೆರೆ ನಟಿ ರಶ್ಮಿ ಚಂಗಪ್ಪರ ವಿಚಾರಣೆಯನ್ನು ISD ಅಧಿಕಾರಿಗಳು ಸೆಪ್ಟೆಂಬರ್ 19ರಂದು ನಡೆಸಿರುವ ಮಾಹಿತಿ ಸಿಕ್ಕಿದೆ. ವಿಚಾರಣೆ ವೇಳೆ ನಾನು ಅಂಡರ್ 19 ತಂಡದ ಕೋಚ್ ಮತ್ತು ಬ್ಯಾಂಕ್ ಉದ್ಯೋಗಿ. ನನಗೆ ಅಂಥ ಯಾರ ಸಂಪರ್ಕವೂ ಇಲ್ಲ ಎಂದು ಅಯ್ಯಪ್ಪ ಹೇಳಿದ್ದಾರಂತೆ. ಹಾಗಾಗಿ, ಅಯ್ಯಪ್ಪರ ಹೇಳಿಕೆ ದಾಖಲಿಸಿ ISD ಅಧಿಕಾರಿಗಳು ವಾಪಾಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜೊತೆಗೆ, ಇಂದು ನಟ ಯೋಗೀಶ್ ಹಾಗೂ ಖಾಸಗಿ ವಾಹಿನಿಯೊಂದರಅಸೋಸಿಯೇಟೆಡ್​ ಪ್ರೊಡ್ಯೂಸರ್ ನಿಶ್ಚಿತಾ ಶರತ್​ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ನಾನೊಬ್ಬ ನಟ. ನನಗೆ ಡ್ರಗ್ ಪೆಡ್ಲರ್​ಗಳ ಸಂಪರ್ಕವಿಲ್ಲ ಎಂದು ನಟ ಯೋಗೀಶ್ ಹೇಳಿದ್ದಾರಂತೆ.

ಇದಲ್ಲದೆ, ಮತ್ತಿಬ್ಬರಿಗೆ ನಾಳೆ ವಿಚಾರಣೆಗೆ ಹಾಜರಾಗಲು ISDಯಿಂದ ನೋಟಿಸ್ ಸಹ ಹೊರಡಿಸಲಾಗಿದೆ. ಅಭಿಷೇಕ್ ಹಾಗೂ ಕಿರುತೆರೆ ನಟಿ ಗೀತಾ ಭಾರತಿ ಭಟ್​ಗೆ ನೋಟಿಸ್ ನೀಡಲಾಗಿದ್ದು ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.