12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಬಾಂಬ್ ಸ್ಫೋಟ ಆರೋಪಿ CCB ಬಲೆಗೆ
ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೊಯೇಬ್ ಬಂಧಿತ ಆರೋಪಿ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ಕೇರಳಕ್ಕೆ ಕರೆ ತರುತ್ತಿದ್ದಾರೆ. ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ. ಕೃತ್ಯದಲ್ಲಿ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ ಅದೇ ವರ್ಷ ಜೈಪುರ ಹಾಗೂ ಅಹಮದಾಬಾದ್ […]
ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶೊಯೇಬ್ ಬಂಧಿತ ಆರೋಪಿ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಸಿಸಿಬಿ ಪೊಲೀಸರು ಕೇರಳಕ್ಕೆ ಕರೆ ತರುತ್ತಿದ್ದಾರೆ. ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ. ಕೃತ್ಯದಲ್ಲಿ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ ಅದೇ ವರ್ಷ ಜೈಪುರ ಹಾಗೂ ಅಹಮದಾಬಾದ್ ನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.
ಈ ಕೃತ್ಯದ ಹಿಂದೆ ಇದೀಗ ಸೆರೆಯಾಗಿರುವ ಅರೋಪಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ. 12 ವರ್ಷಗಳಿಂದ ನಾಪತ್ತೆಯಾಗಿದ್ದ ಶೊಯೇಬ್ಗಾಗಿ ರೆಡ್ ಕಾರ್ನರ್ ನೊಟೀಸ್ ಜಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಕೇರಳದಲ್ಲಿ ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಲೀಂ ನನ್ನು 2018 ರಂದು ಕೇರಳದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು.
ನಾಯಂಡಹಳ್ಳಿ ಜಂಕ್ಷನ್ ಹತ್ತಿರ 1:20 ಕ್ಕೆ ಮಧ್ಯಾಹ್ನ ಬ್ಲಾಸ್ಟ್ ಮಾಡಿದ್ರು. ಒಂಭತ್ತನೆದು ಮಾಗಡಿ ಚೆಕ್ ಪೋಸ್ಟ್‌ಹತ್ತಿರ 2:35 ಕ್ಕೆ ಬ್ಲಾಸ್ಟ್. ಮರುದಿನ , ದಿನ ಪೋರಂ ಮಾಲ್ ಹತ್ತಿರ ಒಂದ್ ಬಾಂಬ್ ಡಿಪ್ಯೂಸ್ ಮಾಡಿದ್ರು. ಹಲವು ಜನರ ಬಂಧನ ಅಗಿದೆ, ಕೆಲವರಿಗೆ ಶಿಕ್ಷೆಯು ಅಗಿದೆ. ಶಂಕರ್ ಬಿದರಿ ಅಂದಿನ. ಸಿಟಿ ಕಮೀಷನರ್ . ಸಿಮಿ ಸಂಘಟನೆ ಬ್ಯಾನ್ ಆಗೋಕು ಮುಂಚೆ ಗುರಪ್ಪನಪಾಳ್ಯದಲ್ಲಿ ಅದರ ಅಫೀಸ್ ಇತ್ತು. ಬ್ಯಾನ್ ಆದ ಮೇಲೂ ಅಲ್ಲೆ ಪಕ್ಕದಲ್ಲಿ ಮನೆ ಬಾಡಿಗೆ ತಗೊಂಡು ಬ್ಲಾಸ್ಟ್ ಪ್ಲಾನ್ ಮಾಡಿದ್ರು.