ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್ ಆಗಿರುವ ರಾಜಶೇಖರ್ಅಲಿಯಾಸ್ ಬಾಂಬ್ ರಾಜಶೇಖರ್ ಅಸಲಿ ಚರಿತ್ರೆ ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.
ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ರಮೇಶ್ ಹಾಗೂ ತನ್ನ ಮಾವ ಬಸವಲಿಂಗಯ್ಯ ಮೇಲೆ ಆರೋಪ ಹೊರಿಸಿದ್ದನಂತೆ.
ಬಸವಲಿಂಗಯ್ಯ ತನ್ನ ಮಗಳು ಭೂಮಿಕಾಳನ್ನ ಒಂದೂವರೆ ಲಕ್ಷಕ್ಕೆ ಮಾರಟ ಮಾಡಿದ್ದಾರೆಂದು ಆರೋಪ ಮಾಡಿದ್ದನಂತೆ. ತನ್ನ ಮಾವ ಬಸವಲಿಂಗಯ್ಯ ಹಾಗೂ ರಮೇಶ್ನ ಮೇಲೆ ಆರೋಪ ಹೊರಿಸಲು ನಾದಿನಿ ಮಾರಾಟದ ನಾಟಕವಾಡಿದ್ದ.
ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿಯನ್ನ ಸಹ ಹಬ್ಬಿಸಿದ್ದನಂತೆ. ಸುದ್ದಿ ಬಳಿಕ ಭೂಮಿಕಾ ಹೇಳಿಕೆ ದಾಖಲು ಮಾಡಿಕೊಂಡಿದ್ದ ಪೊಲೀಸರು ಮತ್ತು ಮಕ್ಕಳ ಸಂರಕ್ಷಣೆ ಅಧಿಕಾರಿಗಳಿಗೆ ರಾಜಶೇಖರ್ ಸ್ವತಃ ಭೂಮಿಕಾಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಆಗ, ಭೂಮಿಕಾ ಮತ್ತು ಬಸವಲಿಂಗಪ್ಪ ನೀಡಿದ್ದ ದೂರಿನನ್ವಯ ಚೇಳೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು.
ರಾಜಶೇಖರ್ ಆಗ ಚೇಳೂರು ಪೊಲೀಸರಿಗೂ ತಲೆ ಬಿಸಿ ತಂದಿದ್ದ ಎಂದು ಹೇಳಲಾಗಿದೆ. ಈ ನಡುವೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ರಾಜಶೇಖರ್ನ ಷಡ್ಯಂತ್ರ ಗೊತ್ತಾಗಿತ್ತು. ಆಗ, ರಾಜಶೇಖರ್ಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ, ಪೊಲೀಸರ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್ ಇದೀಗ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಬಾಂಬ್ ರಾಜಶೇಖರ್ ಆಗಿ ಪರಿಣಮಿಸಿದ್ದಾನೆ.
CCB, ಸಿವಿಲ್ ಕೋರ್ಟ್ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!
ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!