
ಬೆಂಗಳೂರು: ಹೊಸಗುಡ್ಡದಹಳ್ಳಿಯಲ್ಲಿ ರಾಸಾಯನಿಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಕೇಸ್ಗೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಫ್ಯಾಕ್ಟರಿಯ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ. ಈಗಾಗಲೇ ಅಗ್ನಿ ಅಪಘಡದಿಂದ ಮೂರು ಕೋಟಿಗೂ ಅಧಿಕ ನಷ್ಟವಾಗಿದೆ. ಹೊಸಗುಡ್ಡದಹಳ್ಳಿಯ ಜನರಲ್ಲಿ ಆತಂಕ ಮನೆ ಮಾಡಿದೆ. ದೀಪಾವಳಿಯ ಬೆಳಕು ಕಾಣಬೇಕಿದ್ದ ಜನ ಬೆಂಕಿಯ ಹೊಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸುಮಾರು 22 ಗಂಟೆಗಳಿಂದ 56ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಗಲು ರಾತ್ರಿ ಎನ್ನದೆ ನಿನ್ನೆ 11ಗಂಟೆಯಿಂದಲೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ಆದರೂ ರಾಸಾಯನಿಕ ಸಂಗ್ರಹಿಸಿದ್ದ ಗೋದಾಮಿನ ಮಾಲೀಕ ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ. ಸದ್ಯ ಈಗ ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ ರಾಜ್ ಹಾಗೂ ಪತ್ನಿ ಕಮಲಾ ವಿರುದ್ಧ FIR ದಾಖಲಾಗಿದ್ದು ಪೊಲೀಸರು ದಂಪತಿಯ ಹೊಡುಕಾಟದಲ್ಲಿದ್ದಾರೆ. ಸಜ್ಜನ್ ರಾಜ್ ಮತ್ತು ಕಮಲಾ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕೆಮಿಕಲ್ ಸಂಗ್ರಹಕ್ಕೆ ಅನುಮತಿ ಪಡೆದ ಬಗ್ಗೆ ದಾಖಲೆಗಳಿಲ್ಲ:
ಸದ್ಯ ಈಗ ಪೊಲೀಸರು ಗೋದಾಮಿನ ಮ್ಯಾನೇಜರ್ ವಿಚಾರಣೆ ನಡೆಸಿದ್ದಾರೆ. ಗಾಯಗೊಂಡಿದ್ದ ಮ್ಯಾನೇಜರ್ಗೆ ಚಿಕಿತ್ಸೆ ಕೊಡಿಸಿ ನಂತರ ವಿಚಾರಣೆ ನಡೆಸುದ್ರು ಆದರೆ ಮ್ಯಾನೇಜರ್ ರಾಸಾಯನಿಕಗಳ ಶೇಖರಿಸಲು ಅನುಮತಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ‘ನನಗೇನೂ ಗೊತ್ತಿಲ್ಲ ಸರ್, ಮಾಲೀಕ ಸಜ್ಜನ್‌ರನ್ನು ಕೇಳಿ’ ಎಂದು ಪೊಲೀಸರ ಬಳಿ ಗೋದಾಮಿನ ಮ್ಯಾನೇಜರ್ ಹೇಳುತ್ತಿದ್ದಾನೆ. ಮತ್ತೊಂದೆಡೆ ಬಯೋಕಾನ್ ಕಂಪನಿಗೆ ಕೆಮಿಕಲ್ ಮಾರಾಟ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ನಾಪತ್ತೆಯಾದ ಕಂಪನಿ ಮಾಲೀಕರಿಗಾಗಿ ಪೊಲೀಸರ ತಲಾಷ್ ಮುಂದುವರೆದಿದೆ.
ಇದನ್ನೂ ಓದಿ: ಕೆಮಿಕಲ್ ತುಂಬಿದ ಬ್ಯಾರೆಲ್ನಲ್ಲಿ ದಿಢೀರ್ ಬೆಂಕಿ: ನಿನ್ನೆ ಹೊತ್ತಿದ ಬೆಂಕಿ ಇನ್ನೂ ನಂದಿಲ್ಲ.. ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ
Published On - 7:58 am, Wed, 11 November 20