ವ್ಯಾದಿ ಬೂದಿಯಾಯ್ತು, ಸೃಷ್ಟಿ ಸಿರಿಯಾಯ್ತು.. ನಿಜವಾಗುತ್ತಂತೆ ಗೊರವಜ್ಜನ ಭವಿಷ್ಯವಾಣಿ
ಹಾವೇರಿ: ಅದು ಪ್ರಸಿದ್ಧ ದೇವಸ್ಥಾನ. ಅಲ್ಲಿ ನಡೆಯೋ ಕಾರ್ಣಿಕವಾಣಿ ಅಂದ್ರೆ ಅದು ವರ್ಷದ ಭವಿಷ್ಯವಾಣಿ ಅಂತಲೇ ಫೇಮಸ್. ಭವಿಷ್ಯದಲ್ಲಿ ನಡೆಯೋದನ್ನ ಒಂದೇ ಮಾತಿನಲ್ಲಿ ಬಿಲ್ಲನ್ನೇರಿ ಗೊರವಪ್ಪ ಹೇಳುತ್ತಾನೆ. ಕಳೆದ ವರ್ಷ ಹಾಗೂ ಈ ವರ್ಷ ಗೊರವಪ್ಪ ನುಡಿದ ಕಾರ್ಣಿಕ ನುಡಿ ನಿಜವಾಗಿದ್ದು, ಭಕ್ತರ ಭಕ್ತಿ ಮತ್ತಷ್ಟು ಹೆಚ್ಚಾಗಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮಾಲತೇಶ ದೇವರ ಕಾರ್ಣಿಕ ನೆರವೇರಿಸಲಾಗುತ್ತದೆ. ಇಂತಹ ಕಾರ್ಣಿಕದಲ್ಲಿ ನುಡಿಯುವಂತ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. […]

ಹಾವೇರಿ: ಅದು ಪ್ರಸಿದ್ಧ ದೇವಸ್ಥಾನ. ಅಲ್ಲಿ ನಡೆಯೋ ಕಾರ್ಣಿಕವಾಣಿ ಅಂದ್ರೆ ಅದು ವರ್ಷದ ಭವಿಷ್ಯವಾಣಿ ಅಂತಲೇ ಫೇಮಸ್. ಭವಿಷ್ಯದಲ್ಲಿ ನಡೆಯೋದನ್ನ ಒಂದೇ ಮಾತಿನಲ್ಲಿ ಬಿಲ್ಲನ್ನೇರಿ ಗೊರವಪ್ಪ ಹೇಳುತ್ತಾನೆ. ಕಳೆದ ವರ್ಷ ಹಾಗೂ ಈ ವರ್ಷ ಗೊರವಪ್ಪ ನುಡಿದ ಕಾರ್ಣಿಕ ನುಡಿ ನಿಜವಾಗಿದ್ದು, ಭಕ್ತರ ಭಕ್ತಿ ಮತ್ತಷ್ಟು ಹೆಚ್ಚಾಗಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮಾಲತೇಶ ದೇವರ ಕಾರ್ಣಿಕ ನೆರವೇರಿಸಲಾಗುತ್ತದೆ. ಇಂತಹ ಕಾರ್ಣಿಕದಲ್ಲಿ ನುಡಿಯುವಂತ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಷ್ಟೇ ಅಲ್ಲ ಗೊರವಪ್ಪ ನುಡಿಯುವ ಭವಿಷ್ಯವನ್ನ ಸಾಕ್ಷಾತ್ ಮೈಲಾರ ಲಿಂಗೇಶ್ವರನೇ ನುಡಿದ ನುಡಿ ಎನ್ನಲಾಗುತ್ತೆ.
ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಗೊರವಯ್ಯ ಘಟಸರ್ಪ ಕಂಗಾಲಾದಿತಲೆ ಪರಾಕ್ ಅನ್ನೋ ಕಾರ್ಣಿಕ ನುಡಿದಿದ್ದ. ಇದು ಮನುಷ್ಯ ಕುಲ ಸಂಕಷ್ಟಕ್ಕೆ ಸಿಲುಕುತ್ತದೆ ಅನ್ನೋದರ ಮುನ್ಸೂಚನೆ ಆಗಿತ್ತಂತೆ. ಅದರಂತೆ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗಿತ್ತು ಹಾಗೂ ಮಳೆಯಿಂದಾಗಿ ರೈತಕುಲ ಕಂಗಾಲಾಗಿದ್ದು ಇದಕ್ಕೆ ಸಾಕ್ಷಿಯಾಗಿತ್ತು. ಈ ವರ್ಷ ದಸರಾ ಸಂದರ್ಭದಲ್ಲಿ ನಡೆದ ಕಾರ್ಣಿಕದಲ್ಲಿ ವ್ಯಾದಿ ಬೂದಿಯಾತಲೆ, ಸೃಷ್ಟಿ ಸಿರಿಯಾತಲೆ ಪರಾಕ್ ಅಂತಾ ಹೊರವಯ್ಯ ಕಾರ್ಣಿಕ ನುಡಿದಿದ್ದ. ಇದು ಕೂಡ ನಿಜವಾಗಿದೆಯಂತೆ. ಅಟ್ಟಹಾಸ ಮೆರೆದಿದ್ದ ಕೊರೊನಾ ಈಗ ಕಡಿಮೆ ಆಗ್ತಿದ್ದು, ಗೊರವಯ್ಯನ ಕಾರ್ಣಿಕ ಸತ್ಯವಾಗಿದೆ ಅಂತಾರೆ ದೇವಸ್ಥಾನದ ಪ್ರಧಾನ ಅರ್ಚಕರು.
ಕೊರೊನಾ ಆರ್ಭಟ ಕಡಿಮೆ ಆಗ್ತಿರೋದು ಮತ್ತು ಹಿಂಗಾರಿನ ಬೆಳೆಗಳು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿರೋದು ಈ ವರ್ಷ ನುಡಿದ ಕಾರ್ಣಿಕಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಇಲ್ಲಿ ನಡೆಯೋ ಕಾರ್ಣಿಕಕ್ಕೆ ಎಲ್ಲಿಲ್ಲದ ಮಹತ್ವವಿದೆ. ಪ್ರತಿವರ್ಷ ರೈತರು ಮಾಲತೇಶ ದೇವರ ಕಾರ್ಣಿಕದ ಮೇಲೆಯೇ ವರ್ಷದ ಮಳೆ ಬೆಳೆ ಹಾಗೂ ಜನಜೀವನವನ್ನ ನಿರ್ಧರಿಸ್ತಾರೆ. ಸುಮಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಕಾರ್ಣಿಕ ಭವಿಷ್ಯವಾಣಿಯಾಗಿ ಸತ್ಯವಾಗಿವೆ ಅಂತಾರೆ ಭಕ್ತರು.
ಸುಮಾರು ವರ್ಷಗಳ ಇತಿಹಾಸ ಹೊಂದಿರೋ ಮಾಲತೇಶ ದೇವಸ್ಥಾನದ ಕಾರ್ಣಿಕಕ್ಕೆ ಎಲ್ಲಿಲ್ಲದ ಮಹತ್ವ ಪಡೆದಿದೆ. ಪ್ರತಿವರ್ಷ ಕಾರ್ಣಿಕ ಆಲಿಸಲು ರಾಜ್ಯ, ಹೊರರಾಜ್ಯಗಳ ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಬರ್ತಾರೆ. ಈವರೆಗೆ ನುಡಿದ ಕಾರ್ಣಿಕಗಳೆಲ್ಲವೂ ನಿಜವಾಗಿವೆ. ಹಾಗೆಯೇ ಈ ವರ್ಷದ ಕಾರ್ಣಿಕವೂ ನಿಜವಾಗಿದೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.





