AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಗಧಗ ಹೊತ್ತಿ ಉರಿದ ಫ್ಯಾಕ್ಟರಿ: ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ ಹಾಗೂ ಪತ್ನಿಗಾಗಿ ತಲಾಷ್

ಬೆಂಗಳೂರು: ಹೊಸಗುಡ್ಡದಹಳ್ಳಿಯಲ್ಲಿ ರಾಸಾಯನಿಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಕೇಸ್​ಗೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಫ್ಯಾಕ್ಟರಿಯ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ. ಈಗಾಗಲೇ ಅಗ್ನಿ ಅಪಘಡದಿಂದ ಮೂರು ಕೋಟಿಗೂ ಅಧಿಕ ನಷ್ಟವಾಗಿದೆ. ಹೊಸಗುಡ್ಡದಹಳ್ಳಿಯ ಜನರಲ್ಲಿ ಆತಂಕ ಮನೆ ಮಾಡಿದೆ. ದೀಪಾವಳಿಯ ಬೆಳಕು ಕಾಣಬೇಕಿದ್ದ ಜನ ಬೆಂಕಿಯ ಹೊಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸುಮಾರು 22 ಗಂಟೆಗಳಿಂದ 56ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಗಲು ರಾತ್ರಿ ಎನ್ನದೆ ನಿನ್ನೆ 11ಗಂಟೆಯಿಂದಲೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. […]

ಧಗಧಗ ಹೊತ್ತಿ ಉರಿದ ಫ್ಯಾಕ್ಟರಿ: ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ ಹಾಗೂ ಪತ್ನಿಗಾಗಿ ತಲಾಷ್
ಆಯೇಷಾ ಬಾನು
|

Updated on:Nov 11, 2020 | 8:03 AM

Share

ಬೆಂಗಳೂರು: ಹೊಸಗುಡ್ಡದಹಳ್ಳಿಯಲ್ಲಿ ರಾಸಾಯನಿಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಕೇಸ್​ಗೆ ಸಂಬಂಧಿಸಿ ಬ್ಯಾಟರಾಯನಪುರ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಫ್ಯಾಕ್ಟರಿಯ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ. ಈಗಾಗಲೇ ಅಗ್ನಿ ಅಪಘಡದಿಂದ ಮೂರು ಕೋಟಿಗೂ ಅಧಿಕ ನಷ್ಟವಾಗಿದೆ. ಹೊಸಗುಡ್ಡದಹಳ್ಳಿಯ ಜನರಲ್ಲಿ ಆತಂಕ ಮನೆ ಮಾಡಿದೆ. ದೀಪಾವಳಿಯ ಬೆಳಕು ಕಾಣಬೇಕಿದ್ದ ಜನ ಬೆಂಕಿಯ ಹೊಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸುಮಾರು 22 ಗಂಟೆಗಳಿಂದ 56ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಗಲು ರಾತ್ರಿ ಎನ್ನದೆ ನಿನ್ನೆ 11ಗಂಟೆಯಿಂದಲೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ಆದರೂ ರಾಸಾಯನಿಕ ಸಂಗ್ರಹಿಸಿದ್ದ ಗೋದಾಮಿನ ಮಾಲೀಕ ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ. ಸದ್ಯ ಈಗ ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ ರಾಜ್ ಹಾಗೂ ಪತ್ನಿ ಕಮಲಾ ವಿರುದ್ಧ FIR ದಾಖಲಾಗಿದ್ದು ಪೊಲೀಸರು ದಂಪತಿಯ ಹೊಡುಕಾಟದಲ್ಲಿದ್ದಾರೆ. ಸಜ್ಜನ್ ರಾಜ್ ಮತ್ತು ಕಮಲಾ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕೆಮಿಕಲ್ ಸಂಗ್ರಹಕ್ಕೆ ಅನುಮತಿ ಪಡೆದ ಬಗ್ಗೆ ದಾಖಲೆಗಳಿಲ್ಲ: ಇನ್ನು ಈ ದಂಪತಿ ಹಲವು ವರ್ಷದಿಂದ ಕೆಮಿಕಲ್ ಉದ್ಯಮ ನಡೆಸ್ತಿದ್ದರು. ಪತ್ನಿ ಕಮಲಾ ಹೆಸರಿನಲ್ಲಿ ರೇಕಾ ಕೆಮಿಕಲ್ ಕಾರ್ಪೊರೇಷನ್ ಎಂಬ ಕಂಪನಿಯ ನೋಂದಣಿ ಮಾಡಲಾಗಿದೆ. ಕಂಪನಿಯಲ್ಲಿ ಬಳಸುವ ರಾಸಾಯನಿಕಗಳ ಸಂಗ್ರಹಕ್ಕೆ ಹೊಸಗುಡ್ಡದಹಳ್ಳಿಯ ಗೋದಾಮು ಬಳಸಲಾಗುತ್ತಿತ್ತು. ಇನ್ನು ಗೋದಾಮು ಇದ್ದದ್ದು ಸಜ್ಜನ್ ರಾವ್ ಹೆಸರಿನಲ್ಲಿರುವ ಜಾಗದಲ್ಲಿ. ಆದ್ರೆ ಜಾಗ ತನ್ನದಾದ್ರೂ ಕೆಮಿಕಲ್ ಸಂಗ್ರಹಕ್ಕೆ ಸಜ್ಜನ್ ಅನುಮತಿ ಪಡೆದ ಬಗ್ಗೆ ದಾಖಲೆಗಳಿಲ್ಲ. ಜಿಎಸ್‌ಟಿ ಮಾಹಿತಿ ಹೊರತುಪಡಿಸಿ ಬೇರೆ ದಾಖಲೆಗಳು ಇಲ್ಲ. ರಾಸಾಯನಿಕ ದ್ರಾವಣಗಳ ಮಾರಾಟಕ್ಕೆ ಅನುಮತಿ ಇರಲಿಲ್ಲ. ಹೀಗಿದ್ದರೂ ಸಂಗ್ರಹ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಈಗ ಪೊಲೀಸರು ಗೋದಾಮಿನ ಮ್ಯಾನೇಜರ್ ವಿಚಾರಣೆ ನಡೆಸಿದ್ದಾರೆ. ಗಾಯಗೊಂಡಿದ್ದ ಮ್ಯಾನೇಜರ್​ಗೆ ಚಿಕಿತ್ಸೆ ಕೊಡಿಸಿ ನಂತರ ವಿಚಾರಣೆ ನಡೆಸುದ್ರು ಆದರೆ ಮ್ಯಾನೇಜರ್ ರಾಸಾಯನಿಕಗಳ ಶೇಖರಿಸಲು ಅನುಮತಿ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ‘ನನಗೇನೂ ಗೊತ್ತಿಲ್ಲ ಸರ್, ಮಾಲೀಕ ಸಜ್ಜನ್‌ರನ್ನು ಕೇಳಿ’ ಎಂದು ಪೊಲೀಸರ ಬಳಿ ಗೋದಾಮಿನ ಮ್ಯಾನೇಜರ್ ಹೇಳುತ್ತಿದ್ದಾನೆ. ಮತ್ತೊಂದೆಡೆ ಬಯೋಕಾನ್ ಕಂಪನಿಗೆ ಕೆಮಿಕಲ್ ಮಾರಾಟ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ನಾಪತ್ತೆಯಾದ ಕಂಪನಿ ಮಾಲೀಕರಿಗಾಗಿ ಪೊಲೀಸರ ತಲಾಷ್ ಮುಂದುವರೆದಿದೆ.

ಇದನ್ನೂ ಓದಿ: ಕೆಮಿಕಲ್ ತುಂಬಿದ ಬ್ಯಾರೆಲ್​ನಲ್ಲಿ ದಿಢೀರ್ ಬೆಂಕಿ: ನಿನ್ನೆ ಹೊತ್ತಿದ ಬೆಂಕಿ ಇನ್ನೂ ನಂದಿಲ್ಲ.. ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸ

Published On - 7:58 am, Wed, 11 November 20

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್