ಮತ್ತೆ ಸಿಎಂ ನಿತೀಶ್ ಕುಮಾರ್ ಕೊರಳಿಗೆ ಬಿತ್ತು ಬಿ‘ಹಾರ’
ಬೀದರ್: ಇಡೀ ದೇಶದ ಜನರ ಚಿತ್ತವನ್ನ ಸೆಳೆದಿದ್ದ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗಿದೆ. ಈ ಬಾರಿಯೂ ನಿತೀಶ್ ಕುಮಾರ್ ತಾವೇ ಬಿಹಾರದ ಜಗದೇಕವೀರ ಅಂತಾ ಗೆದ್ದು ಬೀಗಿದ್ದಾರೆ. ಆದ್ರೆ, ಈ ಗೆಲುವಿನಲ್ಲಿ ಸ್ವಲ್ಪ ಟ್ವಿಸ್ಟ್ ಸಿಕ್ಕಿದ್ದು, ಏಕಾಂಗಿಯಾಗಿ ನಿತೀಶ್ ಹೋಗಿದ್ದಿದ್ರೆ, ಈ ಜಗದೇಕಮಲ್ಲ ಮಣ್ಣು ಮುಕ್ಕುತ್ತಿದ್ರು ಅನ್ನೋದು ಬಟಾಬಯಲಾಗಿದೆ. ಮಹಾಘಟಬಂಧನ್.. ಮಹಾಘಟಬಂಧನ್.. ಮಹಾಘಟಬಂಧನ್… ಬಿಹಾರದಲ್ಲಿ ಫಲಿತಾಂಶ ಘೋಷಣೆಗೂ ಮುನ್ನ ಕೇಳಿ ಬರುತ್ತಿದ್ದ ದೊಡ್ಡ ದನಿಗಳಲ್ಲಿ ಇದೂ ಒಂದು. ಇದರ ಜೊತೆಗೆ ತೇಜಸ್ವಿ ಪ್ರಸಾದ್ ಯಾದವ್. ಇವರೇ […]
ಬೀದರ್: ಇಡೀ ದೇಶದ ಜನರ ಚಿತ್ತವನ್ನ ಸೆಳೆದಿದ್ದ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗಿದೆ. ಈ ಬಾರಿಯೂ ನಿತೀಶ್ ಕುಮಾರ್ ತಾವೇ ಬಿಹಾರದ ಜಗದೇಕವೀರ ಅಂತಾ ಗೆದ್ದು ಬೀಗಿದ್ದಾರೆ. ಆದ್ರೆ, ಈ ಗೆಲುವಿನಲ್ಲಿ ಸ್ವಲ್ಪ ಟ್ವಿಸ್ಟ್ ಸಿಕ್ಕಿದ್ದು, ಏಕಾಂಗಿಯಾಗಿ ನಿತೀಶ್ ಹೋಗಿದ್ದಿದ್ರೆ, ಈ ಜಗದೇಕಮಲ್ಲ ಮಣ್ಣು ಮುಕ್ಕುತ್ತಿದ್ರು ಅನ್ನೋದು ಬಟಾಬಯಲಾಗಿದೆ.
ಮಹಾಘಟಬಂಧನ್.. ಮಹಾಘಟಬಂಧನ್.. ಮಹಾಘಟಬಂಧನ್… ಬಿಹಾರದಲ್ಲಿ ಫಲಿತಾಂಶ ಘೋಷಣೆಗೂ ಮುನ್ನ ಕೇಳಿ ಬರುತ್ತಿದ್ದ ದೊಡ್ಡ ದನಿಗಳಲ್ಲಿ ಇದೂ ಒಂದು. ಇದರ ಜೊತೆಗೆ ತೇಜಸ್ವಿ ಪ್ರಸಾದ್ ಯಾದವ್. ಇವರೇ ಬಿಹಾರದ ನೆಕ್ಸ್ಟ್ ಸಿಎಂ ಅನ್ನೋ ರೀತಿ ಮತದಾನೋತ್ತರ ಸಮೀಕ್ಷೆಗಳು ಬಂದಿದ್ವು. ಬಿಹಾರ ಸಿಎಂ ನಿತೀಶ್ ಕುಮಾರ್ ಲೆಕ್ಕಕ್ಕೇ ಇಲ್ಲ ಅನ್ನೋ ರೀತಿ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ವು. ಆದ್ರೆ, ಕಳೆದ ಬಾರಿಯ ಬಿಹಾರದ ಮತದಾನೋತ್ತರ ಸಮೀಕ್ಷೆಗಳಂತೆ ಈ ಬಾರಿಯೂ ಬಿಹಾರದ ಮತದಾನೋತ್ತರ ಸಮೀಕ್ಷೆಗಳು ಉಲ್ಟಾ ಆಗಿದ್ದು. ಯಾರೂ ಊಹಿಸದ ರೀತಿ ಎನ್ಡಿಎ ಬಿಹಾರಕ್ಕೆ ನಮ್ಮ ಆಡಳಿತ ಬಿಟ್ರೆ ಬೇರಾರು ಇಲ್ಲ ಅನ್ನೋ ರೀತಿ ಮೆರೆದಿದೆ. ಆದ್ರೆ, ಈ ಬಾರಿಯ ಸ್ಕ್ರಿಪ್ಟ್ ಸ್ವಲ್ಪ ಚೇಂಜ್ ಆಗಿದೆ. ಇಷ್ಟು ದಿನ ಜೆಡಿಯುನ ನೆಲೆಯಲ್ಲಿ ಎಲೆಮರೆ ಕಾಯಿಯಂತೆ ಇದ್ದ ಬಿಜೆಪಿ, ಎನ್ಡಿಎನಲ್ಲಿ ಬಿಗ್ ಬ್ರದರ್ ಆಗಿದೆ.
‘ಲಾಟೀನು’ ‘ಕೈ’ ಹಿಡಿದ್ರು ‘ಕತ್ತಿ-ಕುಡುಗೋಲಿಗೆ’ ಸೋಲು! ಭಾರತದ ರಾಜಕಾರಣದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದ ರಾಜಕೀಯ ಅತ್ಯಂತ ಮಹತ್ವದ್ದು. ಅದ್ರಲ್ಲೂ ಬಿಹಾರದ ರಾಜಕೀಯವೇ ಅಂತಾದ್ದು. ಬಿಹಾರದಲ್ಲಿ ಬದಲಾವಣೆಯ ಗಾಳಿ ಬೀಸಿದ್ರೆ. ಅದು ದೇಶದ ಉದ್ದಗಲಕ್ಕೂ ತಟ್ಟುತ್ತೆ. ಉತ್ತರಪ್ರದೇಶದಂತೆ ಬಿಹಾರ ದೊಡ್ಡ ರಾಜ್ಯ ಅಲ್ಲದಿದ್ರೂ. ಬಿಹಾರದ ಸೈದ್ಧಾಂತಿಕ ಮೂಸೆ ದೇಶದ ಎಲ್ಲೆಡೆ ಹರಡಿದೆ. ಇದೇ ಕಾರಣಕ್ಕೆ ಬಿಹಾರದ ರಾಜಕೀಯ ಬದಲಾವಣೆಯ ಗಾಳಿ ದೇಶದೆಲ್ಲೆಡೆ ಬೀಸುತ್ತೆ. ಅದು ಜೆಪಿ ಚಳವಳಿಯಿಂದ ಹಿಡಿದು. ಮಂಡಲ್ ರಾಜಕಾರಣ..
ಅದಕ್ಕೆ ವಿರುದ್ಧವಾಗಿ ಬಿಜೆಪಿಯ ಭೀಷ್ಮ ಹಿಡಿದುಕೊಂಡ ಕಮಂಡಲ ರಾಜಕಾರಣದವರೆಗೆ. ಅಷ್ಟೇ ಏಕೆ.. ನರೇಂದ್ರ ಮೋದಿಯನ್ನ ವಿರೋಧಿಸಿದ್ದ ನಿತೀಶ್ ಕುಮಾರ್ ಸಿಎಂ ಆಗಿ.. ಮಹಾಘಟಬಂಧನ್ ನಿರ್ಮಿಸಿ ಬಳಿಕ ಎನ್ಡಿಎ ತೆಕ್ಕೆಗೆ ಬರೋವರೆಗೆ ಬಿಹಾರದ ರಾಜಕೀಯ ಯಾವ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲದಂತೆ ಇಡೀ ದೇಶದ ಜನರನ್ನ ಸೂಜಿಗಲ್ಲಿನಂತೆ ಸೆಳೆದಿತ್ತು. ಇಂತಾ ಬಿಹಾರದ ಜನ ಈ ಬಾರಿ ಸಿಎಂ ನಿತೀಶ್ಗೆ ಮನೆ ಕಡೆ ದಾರಿ ತೋರಿಸಿ ತೇಜಸ್ವಿಗೆ ಸಲಾಂ ಹೊಡೀತಾರೆ ಅಂತಾ ಹೇಳಿದ್ದ ಸಮೀಕ್ಷೆಗಳು ತಲೆ ಕೆಳಗಾಗಿದ್ದು ಮತ್ತೆ ನಿತೀಶ್ ನೇತೃತ್ವದ ಎನ್ಡಿಎ ಜೈ ಅಂದಿದ್ದಾರೆ.
ಈ ಬಾರಿಯೂ ಮತದಾನೋತ್ತರ ಸಮೀಕ್ಷೆಗಳು ಉಲ್ಟಾ! 2015ರಲ್ಲಿ ಬಿಹಾರದಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬರುತ್ತೆ ಅಂತಾ ಯಾವ ಮತದಾನೋತ್ತರ ಸಮೀಕ್ಷೆಗಳು ಹೇಳಿರಲಿಲ್ಲ. ಯಾಕಂದ್ರೆ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ, ಯಾರೂ ಊಹಿಸದ ರೀತಿ ತನ್ನ ಪಾರುಪತ್ಯ ಮೆರೆದಿತ್ತು. ಇದಾಗಿ ಒಂದೇ ವರ್ಷದಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ.. ಬಹುತೇಕ ಸಮೀಕ್ಷೆಗಳು ಬಿಹಾರದಲ್ಲಿ ಆಗ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುತ್ತೆ.
ಮಹಾಘಟಬಂಧನ್ ಗಟಾರ ಸೇರುತ್ತೆ ಅಂತಾ ಹೇಳಿದ್ವು. ಇವೆಲ್ಲವೂ.. ಆವತ್ತು ಬೆಳಗ್ಗೆ ಫಲಿತಾಂಶ ಪ್ರಕಟವಾಗುತ್ತಿದ್ದ ವೇಳೆ 10 ಗಂಟೆವರೆಗೆ ನಿಜವಾಗಿದ್ವು. ಆದ್ರೆ, ಅಸಲಿ ಚಿತ್ರಣ ಸಿಕ್ಕಿದ್ದೇ ಅಂದು ಬೆಳಗ್ಗೆ 10 ಗಂಟೆ ಬಳಿಕ. ಇದೇ ರೀತಿ ನಿನ್ನೆಯ ಬಿಹಾರದ ಫಲಿತಾಂಶದ ದಿನವೂ ಆಗಿದೆ. ನಿನ್ನೆ ಬೆಳಗ್ಗೆ 10 ಗಂಟೆವರೆಗೆ ಮಹಾಘಟಬಂಧನ್ಗೆ ತಡೆಯೊಡ್ಡೋರೇ ಇಲ್ಲದ ರೀತಿ ಮೆರೆದಿತ್ತು. ಆದ್ರೆ, ಅದಾದ ಬಳಿಕ ಎಲ್ಲವೂ ಉಲ್ಟಾ ಆಗಿದ್ದು, ಬಿಹಾರದಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೇರೋದು ನಿಶ್ಚಯವಾಗಿದೆ.
ವರ್ಕ್‌ಔಟ್ ಆಗಿದೆ ನಿತೀಶ್-ಮೋದಿ ಭಾವನಾತ್ಮಕ ಕರೆಗಳು! ಬಿಹಾರದಲ್ಲಿ ಎಲ್ಲೋ ತನ್ನ ಹಿಡಿತ ತಪ್ಪಿದೆ ಅನ್ನೋದು ಮನವರಿಕೆ ಆದ ತಕ್ಷಣ ಬಿಹಾರ ಸಿಎಂ ನಿತೀಶ್ ಕುಮಾರ್, ಇದೇ ನನ್ನ ಕೊನೆಯ ಚುನಾವಣೆ ಅಂತಾ ಹೇಳಿದ್ರು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಕೊನೆ ಹಂತದ ಱಲಿಗಳಲ್ಲಿ ಬಿಹಾರದ ಜನಕ್ಕೆ ತಾವೇನು ಮಾಡ್ತೀನಿ ಅಂತಾ ಹೇಳಿದ್ರು. ಜೊತೆಗೆ ಕೊರೊನಾ ಔಷಧಿ ಕಂಡು ಹಿಡಿದ್ರೆ, ಅದನ್ನ ಮೊದಲಿಗೆ ಬಿಹಾರಕ್ಕೆ ಕೊಡ್ತೀನಿ ಅಂತಾ ಹೇಳಿದ್ರು. ಇವೆರಡು ಕೊನೆ ಹಂತದ ಮತದಾನದ ಮೇಲೆ ಪ್ರಭಾವ ಬೀರಿದೆ ಅನ್ನೋದನ್ನ ಚುನಾವಣಾ ಫಲಿತಾಂಶ ತೋರಿಸ್ತಿದೆ. ಇಷ್ಟಕ್ಕೂ ಯಾವ್ಯಾವ ಮೈತ್ರಿಗೆ ಎಷ್ಟು ಸ್ಥಾನ ಸಿಕ್ಕಿದೆ ಅನ್ನೋದನ್ನ ನೋಡೋದಾದ್ರೆ,
ಯಾರಿಗೆ ಎಷ್ಟು ಸ್ಥಾನ? ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 125 ಸ್ಥಾನಗಳು ಸಿಕ್ಕಿವೆ, ಇವರ ಪ್ರತಿಸ್ಪರ್ಧಿಯಾಗಿದ್ದ ಮಹಾಘಟಬಂಧನ್ಗೆ 110 ಸ್ಥಾನಗಳು ಸಿಕ್ಕಿದ್ದು, ಭಾರಿ ನಿರೀಕ್ಷೆ ಮೂಡಿಸಿದ್ದ ಎಲ್ಜೆಪಿಗೆ 1 ಸ್ಥಾನ ಸಿಕ್ಕಿದೆ. ಇತರರು 7 ಸ್ಥಾನಗಳಲ್ಲಿ ಗೆದ್ದಿದ್ದು, ಇದರಲ್ಲಿ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೇಹಾದುಲ್ ಮುಸ್ಲಿಮಿನ್.. ಅರ್ಥಾತ್ ಅಸಾದುದ್ದೀನ್ ಒವೈಸಿಯ ಎಂಐಎಂ 5 ಸ್ಥಾನಗಳನ್ನ ಗೆದ್ದು.. ಬಿಹಾರದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿದೆ.
ಒಟ್ನಲ್ಲಿ ಭಾರಿ ಕುತೂಹಲ ಮೂಡಿಸಿದ್ದ.. ಭಾರತದ ರಾಜಕಾರಣಕ್ಕೆ ತಿರುವು ನೀಡಲಿದ್ದ ಬಿಹಾರದ ಚುನಾವಣೆಯಲ್ಲಿ ಎನ್ಡಿಎ ಗೆದ್ದು ಬೀಗಿದೆ. ಇದು ಎನ್ಡಿಎಗೆ ಭಾರಿ ಚೈತನ್ಯ ನೀಡಿರೋದು ಸುಳ್ಳಲ್ಲ. ಇದು ಮುಂದಿನ ದಿನಗಳಲ್ಲಿ ಎನ್ಡಿಎಗೆ ಎಷ್ಟು ಬಲ ನೀಡುತ್ತೆ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.