ಕಾಲಿಗೆ ಗುಂಡು ಹಾರಿಸಿ ದರೋಡೆಕೋರನನ್ನು ಬಂಧಿಸಿದ ಪೊಲೀಸರು
ಯಲಹಂಕದಲ್ಲಿ ಸರಣಿ ಬೈಕ್ ಕಳ್ಳತನ, ಸರ ಕಳ್ಳತನ, ಮತ್ತು ರಾಬರಿ ಮಾಡುತ್ತಿದ್ದ ತಂಡ ಇದಾಗಿದ್ದು, ನಿನ್ನೆ ಓರ್ವ ಹಾಗೂ ಇಂದು ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಶಬರೀಶ್ ಗ್ಯಾಂಗ್ನ ಮೂವರ ಬಂಧನವಾಗಿದ್ದು ಶಬರೀಶ್ ಅಲಿಯಾಸ್ ಅಪ್ಪಿ, ಇಮ್ರಾನ್ ಪಾಷ ಮತ್ತು ರಂಜಿತ್ ಈ ವರೆಗೆ ಬಂಧಿತರು.
ದೇವನಹಳ್ಳಿ: ಬೆಂಗಳೂರಿನಲ್ಲಿ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಬಂಧಿಸಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಕಳತ್ತೂರು ಫಾರ್ಮ್ ಬಳಿ ದರೋಡೆಕೋರ ಇಮ್ರಾನ್ ಪಾಷಾನ ಕಾಲಿಗೆ ಯಲಹಂಕ ಉಪನಗರ ಠಾಣೆ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಗುಂಡು ಹಾರಿಸಿ ಬಂಧಿಸಿದ್ದಾರೆ. ನಿನ್ನೆ ಯಲಹಂಕದಲ್ಲಿ ಶಬರೀಶ್ ಮೇಲೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿತ್ತು. ಇದೀಗ ಈತನ ಸಹಚರ ಇಮ್ರಾನ್ ಪಾಷಾ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಯಲಹಂಕದಲ್ಲಿ ಸರಣಿ ಬೈಕ್ ಕಳ್ಳತನ, ಸರ ಕಳ್ಳತನ, ಮತ್ತು ರಾಬರಿ ಮಾಡುತ್ತಿದ್ದ ತಂಡ ಇದಾಗಿದ್ದು, ನಿನ್ನೆ ಓರ್ವ ಹಾಗೂ ಇಂದು ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ಶಬರೀಶ್ ಗ್ಯಾಂಗ್ನ ಮೂವರ ಬಂಧನವಾಗಿದ್ದು ಶಬರೀಶ್ ಅಲಿಯಾಸ್ ಅಪ್ಪಿ, ಇಮ್ರಾನ್ ಪಾಷ ಮತ್ತು ರಂಜಿತ್ ಈ ವರೆಗೆ ಬಂಧಿತರು.
ಇನ್ನು ಇಮ್ರಾನ್ ಬಂಧನದ ವೇಳೆ ಯಲಹಂಕ ಉಪನಗರ ಪೊಲೀಸ್ ಕಾನ್ಸ್ಟೇಬಲ್ ಮಧುಕುಮಾರ್ಗೆ ಗಾಯಗಳಾಗಿವೆ. ಹಾಗೂ ಆರೋಪಿ ಇಮ್ರಾನ್ ಎಡಗಾಲಿಗೆ ಗುಂಡು ಬಿದ್ದಿದೆ. ಸದ್ಯ ಗಾಯಾಳುಗಳಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು , ಆರೋಪಿಗಳ ಕಾಲಿಗೆ ಗುಂಡು
Published On - 9:12 am, Fri, 12 February 21