ವಿಜಯಪುರ: ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ವಿಜಯಪುರ ASP ರಾಮ ಅರಸಿದ್ಧಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಕಾರಾಗೃಹದ ಮೇಲೆ ದಾಳಿ ನಡೆಸಿದ ವೇಳೆ ಕೈದಿಗಳ ಹಾಗೂ ಆರೋಪಿಗಳ ಬಳಿ ಮೂರು ಮೊಬೈಲ್, ಚಾರ್ಜರ್ ಹಾಗೂ ಇಯರ್ ಫೋನ್ ಪತ್ತೆಯಾಗಿದೆ. ಇದಲ್ಲದೆ, ಕೈದಿಗಳ ಬಳಿ ತಂಬಾಕು ಮತ್ತು ಬೀಡಿ ಕಟ್ಟುಗಳು ಸಹ ದೊರೆತಿವೆ. ಇವೆಲ್ಲಾ ಸಾಮಾನುಗಳನ್ನು ಕೈದಿಗಳು ಮತ್ತು ಆರೋಪಿಗಳು ಕಾನೂನು ಬಾಹಿರವಾಗಿ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಎಲ್ಲವನ್ನು ಜಪ್ತಿ ಮಾಡಲಾಗಿದೆ.
Published On - 11:04 am, Thu, 24 September 20