ವಾಹನ ಸಂಚಾರ ಸ್ಥಗಿತ, ರಾಷ್ಟ್ರೀಯ ಹೆದ್ದಾರಿ 169A ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು

  • Publish Date - 11:58 am, Thu, 24 September 20 Edited By: sadhu srinath
ವಾಹನ ಸಂಚಾರ ಸ್ಥಗಿತ, ರಾಷ್ಟ್ರೀಯ ಹೆದ್ದಾರಿ 169A ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಹಾಗೂ ಆಗುಂಬೆ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169A ಯಲ್ಲಿರುವ ರಂಜದ ಕಟ್ಟೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸೇತುವೆಯ ತಡೆಗೋಡೆ ಹಾಗೂ ರಸ್ತೆಯ ಮೇಲೆ ಬಿರುಕು ಕಾಣಿಸಿಕೊಂಡು ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಾರೆ. ಜೊತೆಗೆ, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ನೀಡಲಾಗಿದೆ. ತೀರ್ಥಹಳ್ಳಿಯಿಂದ ಸಾಗರ ರಸ್ತೆಯ ಬೊಬ್ಬಿ ಮಾರ್ಗವಾಗಿ ಬಿಳಾಲುಕೊಪ್ಪದ ಸಮೀಪ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.