ಇಂದು ಸಂಜೆಯೊಳಗೆ.. ಬೆಂಗಳೂರಿನ ಅತಿ ದೊಡ್ಡ Drug ಡೀಲರ್ ಬಂಧನ ಸಾಧ್ಯತೆ!

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಗರದ ಅತಿ ದೊಡ್ಡ ಡ್ರಗ್ ಡೀಲರ್​ನ ಬಂಧನವಾಗುವ ಸಾಧ್ಯತೆಯಿದೆ. ಇಂದು ಸಂಜೆಯೊಳಗೆ CCB ಅಧಿಕಾರಿಗಳಿಂದ ಡೀಲರ್​ನ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈತ ಇಡೀ ಬೆಂಗಳೂರಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದ್ದು 10 ವರ್ಷಗಳ ಹಿಂದೆ ಮಾತ್ರ ಈತ ಒಮ್ಮೆ ಅರೆಸ್ಟ್​ ಆಗಿದ್ದ ಎಂದು ಹೇಳಲಾಗಿದೆ. ಇದಲ್ಲದೆ, ಸ್ಯಾಂಡಲ್‌ವುಡ್ ನಟ, ನಟಿಯರಿಗೆ, ಉದ್ಯಮಿಗಳಿಗೆ ಹಾಗೂ ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್​ ಸೇವನೆಗೆ ಪ್ರೇರೇಪಿಸುತ್ತಿದ್ದ ಎಂದು […]

ಇಂದು ಸಂಜೆಯೊಳಗೆ.. ಬೆಂಗಳೂರಿನ ಅತಿ ದೊಡ್ಡ Drug ಡೀಲರ್ ಬಂಧನ ಸಾಧ್ಯತೆ!
KUSHAL V

| Edited By: sadhu srinath

Sep 24, 2020 | 12:25 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಗರದ ಅತಿ ದೊಡ್ಡ ಡ್ರಗ್ ಡೀಲರ್​ನ ಬಂಧನವಾಗುವ ಸಾಧ್ಯತೆಯಿದೆ. ಇಂದು ಸಂಜೆಯೊಳಗೆ CCB ಅಧಿಕಾರಿಗಳಿಂದ ಡೀಲರ್​ನ ಬಂಧನವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಈತ ಇಡೀ ಬೆಂಗಳೂರಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ದೊರೆತಿದ್ದು 10 ವರ್ಷಗಳ ಹಿಂದೆ ಮಾತ್ರ ಈತ ಒಮ್ಮೆ ಅರೆಸ್ಟ್​ ಆಗಿದ್ದ ಎಂದು ಹೇಳಲಾಗಿದೆ. ಇದಲ್ಲದೆ, ಸ್ಯಾಂಡಲ್‌ವುಡ್ ನಟ, ನಟಿಯರಿಗೆ, ಉದ್ಯಮಿಗಳಿಗೆ ಹಾಗೂ ರಾಜಕಾರಣಿಗಳ ಮಕ್ಕಳಿಗೆ ಡ್ರಗ್ಸ್​ ಸೇವನೆಗೆ ಪ್ರೇರೇಪಿಸುತ್ತಿದ್ದ ಎಂದು ತಿಳಿದುಬಂದಿದೆ.

ಮಾಜಿ ಭೂಗತ ಪಾತಕಿಯೊಬ್ಬನ ಆಪ್ತನಾಗಿರುವ ಈ ಕುಖ್ಯಾತ ಡ್ರಗ್ ಪೆಡ್ಲರ್​ಗಾಗಿ ಕಳೆದ 20 ದಿನಗಳಿಂದ CCB ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada