ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ ಇಲ್ಲವೇ ಇಲ್ಲ
[lazy-load-videos-and-sticky-control id=”iXKOaun-T7Y”] ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಸ್ಫೋಟ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಕೊರೊನಾ ತೀವ್ರತೆ ಹೆಚ್ಚಾಗಿದೆ. ಕಳೆದ ಬಾರಿ ಕೈಗೊಂಡಿದ್ದ ಲಾಕ್‌ಡೌನ್ ಕ್ರಮದಿಂದಾಗಿ ಸೋಂಕಿನ ಹರಡುವಿಕೆ ಕೊಂಚ ನಿಧಾನವಾಗಿತ್ತು. ಆದರೆ ದೇಶದ ಆರ್ಥಿಕ ಪರಿಸ್ಥಿತಿಯ ಕುಂಠಿತದಿಂದಾಗಿ ಲಾಕ್‌ಡೌನ್ ಕ್ರಮ ಕೈ ಬಿಡಲಾಗಿತ್ತು. ಮತ್ತೆ ಲಾಕ್ ಡೌನ್ ಸೂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ಆದರೆ ಈಗ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ ಖಡಾಖಂಡಿತವಾಗಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದಲ್ಲಿ ಯಾವುದೇ […]
[lazy-load-videos-and-sticky-control id=”iXKOaun-T7Y”]
ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ ಸ್ಫೋಟ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಕೊರೊನಾ ತೀವ್ರತೆ ಹೆಚ್ಚಾಗಿದೆ. ಕಳೆದ ಬಾರಿ ಕೈಗೊಂಡಿದ್ದ ಲಾಕ್‌ಡೌನ್ ಕ್ರಮದಿಂದಾಗಿ ಸೋಂಕಿನ ಹರಡುವಿಕೆ ಕೊಂಚ ನಿಧಾನವಾಗಿತ್ತು. ಆದರೆ ದೇಶದ ಆರ್ಥಿಕ ಪರಿಸ್ಥಿತಿಯ ಕುಂಠಿತದಿಂದಾಗಿ ಲಾಕ್‌ಡೌನ್ ಕ್ರಮ ಕೈ ಬಿಡಲಾಗಿತ್ತು. ಮತ್ತೆ ಲಾಕ್ ಡೌನ್ ಸೂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದರು. ಆದರೆ ಈಗ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪ ಖಡಾಖಂಡಿತವಾಗಿ ಇಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ. ಲಾಕ್‌ಡೌನ್ ಕಡ್ಡಾಯ ಎಂದು ಪ್ರಧಾನಿ ಮೋದಿ ಹೇಳಿಲ್ಲ. ಹೀಗಾಗಿ ಲಾಕ್‌ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ಮಾಡಿಲ್ಲ. ಆದ್ರೆ ಪ್ರಧಾನಿ-ಸಿಎಂಗಳ ಸಭೆಯಲ್ಲಿ ಲೋಕಲ್ ಲಾಕ್‌ಡೌನ್ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ರು. ಪರಿಸ್ಥಿತಿ ನೋಡಿಕೊಂಡು ಲೌಕ್‌ಡೌನ್ ಬಗ್ಗೆ ಚಿಂತನೆ ಮಾಡಿ ಎಂದಿದ್ದರು. ವಾರದಲ್ಲಿ ಒಂದೆರಡು ದಿನ ಲಾಕ್‌ಡೌನ್ ಬಗ್ಗೆ ಯೋಚಿಸಿ. ಅತಿ ಹೆಚ್ಚು ಕೊರೊನಾ ಕೇಸ್ ಇದ್ದರೆ ಲಾಕ್‌ಡೌನ್ ಅಗತ್ಯ.
ಮೈಕ್ರೋ ಕಂಟೇನ್‌ಮೆಂಟ್ ಜೋನ್‌ನಲ್ಲಿ ಅಗತ್ಯಬಿದ್ದರೆ ಮಾತ್ರ ಸೀಲ್‌ಡೌನ್ ಮಾಡುವಂತೆ ಸೂಚನೆ ನೀಡಿದ್ರು. ಆದ್ರೆ ಆರ್ಥಿಕ ಚಟುವಟಿಕೆಗೆ ಹಿನ್ನಡೆಯಾಗದಂತೆ ನೋಡಿಕೊಳ್ಳಿ. ಅಗತ್ಯಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಪ್ರಧಾನಿ ತಿಳಿಸಿದ್ರು. ಆದರೆ ಪ್ರಧಾನಿ ಕಡ್ಡಾಯವಾಗಿ ಲಾಕ್‌ಡೌನ್ ಮಾಡುವಂತೆ ಮೋದಿ ಸೂಚಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಲಾಕ್‌ಡೌನ್ ಸೂತ್ರವನ್ನು ಕೈಬಿಡುವ ಸಾಧ್ಯತೆ ಇದೆ. ಇನ್ನು ಮುಂದೆ ಲಾಕ್‌ಡೌನ್ ಮಾಡದಿರಲು ಚಿಂತಿಸಿದೆ ಎನ್ನಲಾಗುತ್ತಿದೆ. ಹಾಗೂ ಪ್ರಧಾನಿ ಸಲಹೆ ಜಾರಿಗೊಳಿಸೋದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು.
ಅಲ್ಲದೆ ಮುಂದಿನ 6 ತಿಂಗಳು ರಾಜ್ಯದ ಪರಿಸ್ಥಿತಿಯನ್ನು ನಿಭಾಯಿಸುವುದು ಸವಾಲಿನಿಂದ ಕೂಡಿದೆ. ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯಗಳಿಂದ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಪರೀಕ್ಷೆ ಪ್ರಮಾಣ 3 ಪಟ್ಟು ಹೆಚ್ಚಿಸಲು ರಾಜ್ಯಗಳಿಗೆ ಪಿಎಂ ಸಲಹೆ ನೀಡಿದ್ದಾರೆ. ಱಪಿಡ್ ಟೆಸ್ಟ್ ಜೊತೆ RT-PCR ಪರೀಕ್ಷೆ ಹೆಚ್ಚಿಸುವಂತೆ ತಿಳಿಸಿದ್ದಾರೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ನಿಯಂತ್ರಿಸುವಂತೆ ಸೂಚಿಸಿದ್ದಾರೆ.
Published On - 9:34 am, Thu, 24 September 20