ಕೊರೊನಾ ಸಂಕಷ್ಟಕ್ಕೆ ಸಿಲುಕಿ ಇತಿಹಾಸದ ಪುಟ ಸೇರ್ತು ರಾಜಕಾರಣಿ, ನಟರ ಫೇವರಿಟ್​ ಹೋಟೆಲ್

| Updated By: KUSHAL V

Updated on: Jun 28, 2020 | 3:24 PM

ಮೈಸೂರು: ಕೊರೊನಾ ಮಹಾಮಾರಿ ಎಫೆಕ್ಟ್​ನಿಂದ 40 ವರ್ಷಗಳ‌ ಕಾಲ ಗ್ರಾಹಕರಿಗೆ ತನ್ನದೇ ಶೈಲಿಯಲ್ಲಿ ಸೇವೆ ನೀಡ್ತಿದ್ದ ರಮ್ಯಾ ಹೋಟೆಲ್ ಬಂದ್ ಆಗಿದೆ. ಈ ಹೋಟೆಲ್ ಬಿಸಿ ಬಿಸಿ ಮಸಾಲೆ ದೋಸೆ, ಇಡ್ಲಿ ಸಾಂಬಾರ್‌ಗೆ ಫೇಮಸ್ ಆಗಿತ್ತು. ಹೋಟಲ್ ಉದ್ಯಮದಲ್ಲಿ ತನ್ನದೇ ಚಾಪು ಮುಡಿಸಿದ್ದ ರಮ್ಯಾ ಹೋಟೆಲ್ ಪ್ರಭಾವಿ ರಾಜಕಾರಣಿಗಳ ಹಾಟ್ ಸ್ಪಾಟ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ ಬಂಗಾರಪ್ಪ, ಎಸ್.ಎಂ ಕೃಷ್ಣ, ವರನಟ ರಾಜಕುಮಾರ್ ಹಾಗೂ ಅವರ ಕುಟುಂಬದ ಅಚ್ಚುಮೆಚ್ಚಿನ ಹೋಟೆಲ್ ಈಗ ಇತಿಹಾಸದ ಪುಟ […]

ಕೊರೊನಾ ಸಂಕಷ್ಟಕ್ಕೆ ಸಿಲುಕಿ ಇತಿಹಾಸದ ಪುಟ ಸೇರ್ತು ರಾಜಕಾರಣಿ, ನಟರ ಫೇವರಿಟ್​ ಹೋಟೆಲ್
Follow us on

ಮೈಸೂರು: ಕೊರೊನಾ ಮಹಾಮಾರಿ ಎಫೆಕ್ಟ್​ನಿಂದ 40 ವರ್ಷಗಳ‌ ಕಾಲ ಗ್ರಾಹಕರಿಗೆ ತನ್ನದೇ ಶೈಲಿಯಲ್ಲಿ ಸೇವೆ ನೀಡ್ತಿದ್ದ ರಮ್ಯಾ ಹೋಟೆಲ್ ಬಂದ್ ಆಗಿದೆ. ಈ ಹೋಟೆಲ್ ಬಿಸಿ ಬಿಸಿ ಮಸಾಲೆ ದೋಸೆ, ಇಡ್ಲಿ ಸಾಂಬಾರ್‌ಗೆ ಫೇಮಸ್ ಆಗಿತ್ತು.

ಹೋಟಲ್ ಉದ್ಯಮದಲ್ಲಿ ತನ್ನದೇ ಚಾಪು ಮುಡಿಸಿದ್ದ ರಮ್ಯಾ ಹೋಟೆಲ್ ಪ್ರಭಾವಿ ರಾಜಕಾರಣಿಗಳ ಹಾಟ್ ಸ್ಪಾಟ್ ಆಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್ ಬಂಗಾರಪ್ಪ, ಎಸ್.ಎಂ ಕೃಷ್ಣ, ವರನಟ ರಾಜಕುಮಾರ್ ಹಾಗೂ ಅವರ ಕುಟುಂಬದ ಅಚ್ಚುಮೆಚ್ಚಿನ ಹೋಟೆಲ್ ಈಗ ಇತಿಹಾಸದ ಪುಟ ಸೇರುತ್ತಿದೆ.

ಮೈಸೂರಿಗೆ ಹೋಗುವವರು ಒಮ್ಮೆಯಾದ್ರು ರಮ್ಯಾ ಹೋಟೆಲ್​ಗೆ ಹೋಗಿಯೇ ಬರುತ್ತಿದ್ದರು. ರಾಜಕಾರಣಿಗಳು, ನಟರಿಗೆ ಇಲ್ಲಿ ತಿಂಡಿ ಬಲು ಇಷ್ಟ.ಕೊರೊನಾ ಸಂಕಷ್ಟಕ್ಕೆ ಹೋಟೆಲ್ ಉದ್ಯಮ ನೆಲಕಚ್ಚಿದೆ. ಜನರ ರುಚಿ ರುಚಿಯಾದ ಆಹಾರ ನೀಡಿ ಹೊಟ್ಟೆ ತುಂಬಿಸುತ್ತಿದ್ದ ಮೆಚ್ಚುಗೆಗೆ ಪಾತ್ರವಾಗಿದ್ದ ಹೋಟೆಲ್ ಮಹಾಮಾರಿಯ ನರ್ತನದಿಂದಾಗಿ ಬಂದ್ ಆಗಿದೆ.

Published On - 1:45 pm, Sun, 28 June 20