Top News: ಕೊರೊನಾ ವಿರುದ್ಧ ಹೋರಾಡಿ ಗೆದ್ದ 114 ವರ್ಷದ ಅಜ್ಜ
ಕೊರೊನಾ ವೈರಸ್ನಿಂದ ಚಿಕ್ಕ ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಮೃತ ಪಡುತ್ತಲೇ ಇದ್ದಾರೆ. ಇಥಿಯೋಪಿಯಾದ ಅಬಾ ತಿಲಾಹುನ್ಗೆ 114 ವರ್ಷವಾಗಿದ್ದರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದಾಗ ದೇವರೇ ನನ್ನ ಆರೋಗ್ಯವನ್ನ ಕಾಪಾಡು ಅಂತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಅಂತಾ ಇಥಿಯೋಫಿಯಾದ ಶತಾಯುಷಿ ಹೇಳಿದ್ದಾರೆ. ಕೊರೊನಾ ವಿಶ್ವರೂಪ ಕೊರೊನಾದಿಂದಾಗಿ ಇಡೀ ವಿಶ್ವವೇ ಕಂಗೆಟ್ಟು ಹೋಗಿದೆ. ಪ್ರಪಂಚದಲ್ಲಿ 1 ಕೋಟಿ 82 ಸಾವಿರದ 618 ಜನರಿಗೆ ಕೊರೊನಾ ತಗುಲಿದೆ. ಕೊರೊನಾಗೆ ಒಟ್ಟು 5 ಲಕ್ಷದ 1 ಸಾವಿರದ 789 ಜನ ಬಲಿಯಾಗಿದ್ದಾರೆ. […]
ಕೊರೊನಾ ವೈರಸ್ನಿಂದ ಚಿಕ್ಕ ಚಿಕ್ಕಮಕ್ಕಳಿಂದ ಹಿಡಿದು, ದೊಡ್ಡವರ ವರೆಗೂ ಮೃತ ಪಡುತ್ತಲೇ ಇದ್ದಾರೆ. ಇಥಿಯೋಪಿಯಾದ ಅಬಾ ತಿಲಾಹುನ್ಗೆ 114 ವರ್ಷವಾಗಿದ್ದರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಾನು ಆಸ್ಪತ್ರೆಯಲ್ಲಿದ್ದಾಗ ದೇವರೇ ನನ್ನ ಆರೋಗ್ಯವನ್ನ ಕಾಪಾಡು ಅಂತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಅಂತಾ ಇಥಿಯೋಫಿಯಾದ ಶತಾಯುಷಿ ಹೇಳಿದ್ದಾರೆ.
ಕೊರೊನಾ ವಿಶ್ವರೂಪ ಕೊರೊನಾದಿಂದಾಗಿ ಇಡೀ ವಿಶ್ವವೇ ಕಂಗೆಟ್ಟು ಹೋಗಿದೆ. ಪ್ರಪಂಚದಲ್ಲಿ 1 ಕೋಟಿ 82 ಸಾವಿರದ 618 ಜನರಿಗೆ ಕೊರೊನಾ ತಗುಲಿದೆ. ಕೊರೊನಾಗೆ ಒಟ್ಟು 5 ಲಕ್ಷದ 1 ಸಾವಿರದ 789 ಜನ ಬಲಿಯಾಗಿದ್ದಾರೆ. ಸೋಂಕಿನಿಂದ ಈವರೆಗೂ 54 ಲಕ್ಷದ 58 ಸಾವಿರದ 523 ಜನರು ಗುಣಮುಖರಾದ್ರೆ, 13,86,948 ಮಂದಿ ಪ್ರಸ್ತುತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
HIV-ಕೊರೊನಾ ಸಮಾನಾಂತರ! ಹೆಚ್ಐವಿ ವೈರಸ್ನಂತೆಯೇ ಕೊರೊನಾ ವೈರಸ್ ಕೂಡ ಸಾಮ್ಯತೆ ಮತ್ತು ಸಮಾನಾಂತರವನ್ನ ಹೊಂದಿದೆ ಅಂತಾ ಅಧ್ಯಯನವೊಂದು ಹೇಳಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ರೋಗನಿರೋಧಕ ತಜ್ಞ ಜಾನ್ ವೆರ್ರಿ ಮತ್ತು ಅವರ ಸಹೋದ್ಯೋಗಿಗಳು ತೀವ್ರ ಅನಾರೋಗ್ಯದಿಂದ ಕಾಡುತ್ತಿದ್ದ ಜನರನ್ನ ತಪಾಸಣೆಗೆ ಒಳ ಪಡಿಸಿದಾಗ ಕೆಲ ಅಗತ್ಯ ಕೋಶಗಳು ಪ್ರತಿರಕ್ಷಣಾ ವ್ಯವಸ್ತೆಯನ್ನ ಕಳೆದುಕೊಳ್ಳುತ್ತವೆ ಅಂತಾ ಹೇಳಲಾಗಿದೆ.
ಬ್ರೆಜಿಲ್ನಲ್ಲಿ ಮರಣಮೃದಂಗ ಮನುಕುಲದ ಪಾಲಿಗೆ ವಿನಾಶ ಎಂಬಂತೆ ಕಾಡುತ್ತಿರುವ ಕೊರೊನಾ ವೈರಸ್ ಬ್ರೆಜಿಲ್ ಪಾಲಿಗೆ ಮರಣಮೃದಂಗ ಬಾರಿಸುತ್ತಲೇ ಇದೆ. ಕೇವಲ 24 ಗಂಟೆಗಳ ಅವಧಿಯಲ್ಲಿ 38,693 ಜನರಿಗೆ ಸೋಂಕು ವಕ್ಕರಿಸಿಕೊಂಡಿದೆ. 1,109 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ 13,13,667ಕ್ಕೆ ಏರಿಕೆಯಾದ್ರೆ, ಮೃತರ ಸಂಖ್ಯೆ 57,070ಕ್ಕೆ ಏರಿಕೆಯಾಗಿದೆ. ರಾಜಧಾನಿ ಸಾವೋಪೋಲೋದಲ್ಲಿ ಸೋಂಕಿತರು ಸಂಖ್ಯೆ ಹೆಚ್ಚುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಡಿಸ್ನಿ ಲ್ಯಾಂಡ್ ಓಪನ್ಗೆ ಸಿಬ್ಬಂದಿ ಕಿಡಿ ಕೊರೊನಾ ಸೋಂಕಿನ ಭೀತಿಯಿಂದಾಗಿ ಬಂದ್ ಆಗಿದ್ದ ಡಿಸ್ನಿ ಲ್ಯಾಂಡ್ನ್ನ ಮತ್ತೆ ಶುರು ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ಹೊಸ ಮಾರ್ಗಸೂಚಿ ಬಳಿಕ ಈ ವಾರದಲ್ಲಿ ಡಿಸ್ನಿ ಲ್ಯಾಂಡ್ ತೆರೆಯಲು ಕಂಪನಿ ಸಿದ್ಧತೆ ನಡೆಸಿದೆ. ಆದ್ರೆ, ಇದಕ್ಕೆ ಸುಮಾರು 17 ಸಾವಿರ ಡಿಸ್ನಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ನಮಗೆ ಕಂಪನಿ ಕೊರೊನಾದಿಂದ ಸೂಕ್ತ ರಕ್ಷಣೆ ಕೊಡುವ ಒಪ್ಪಂದಕ್ಕೆ ಒಪ್ಪಿದರೆ ಮಾತ್ರ ಕೆಲಸಕ್ಕೆ ಹಾಜರಾಗುತ್ತೇವೆ ಇಲ್ಲದಿದ್ದರೆ ಇಲ್ಲ ಅಂತಾ, ಸುಮಾರು 200 ಕಾರುಗಳಲ್ಲಿ ಆಗಮಿಸಿ ಡಿಸ್ನಿ ಹೊರ ಭಾಗ ಪ್ರತಿಭಟನೆ ನಡೆಸಿದ್ರು.
ಮಾನವ ಸರಪಳಿ ಹೋರಾಟ ಜರ್ಮನಿಯಲ್ಲಿ ಕೊರೊನಾ ಸೋಂಕಿನ ಗಾಣಕ್ಕೆ 1,94,689 ಜನರು ಸಿಲುಕಿದ್ದಾರೆ. ಸೋಂಕಿನಿಂದಾಗಿ 9 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸೋಂಕು ದಿನೇ ದಿನೆ ಹೆಚ್ಚಾಗುತ್ತಿರೋದನ್ನ ಖಂಡಿಸಿದ ಸುಮಾರು 1,500 ಜನರು ಕೊರೊನಾ ನಿಯಂತ್ರಿಸುವಂತೆ ಪ್ರತಿಭಟನೆ ನಡೆಸಿದ್ರು. ಕಸಾಯಿಖಾನೆಯಿಂದಲೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ರು.
ಪಾಕ್ಗೆ ಕೊರೊನಾಂತಕ ಭಾರತದ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಈವರೆಗೂ 4,098 ಜನರು ಬಲಿಯಾಗಿದ್ದಾರೆ. ಆಘಾತಕಾರಿ ವಿಚಾರ ಅಂದ್ರೆ, ಸುಮಾರು 5 ಸಾವಿರ ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದೆಯಂತೆ. ಕಳೆದ ತಿಂಗಳು ಲಾಕ್ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ, ಕಳೆದ ಕೆಲ ವಾರಗಳಿಂದ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ.
ಪೆರು ಡಿಸ್ಕೋ ಮಾರ್ಕೆಟ್! ಕೊರೊನಾ ವೈರಸ್ ಬಂದಾಗಿನಿಂದ ಪೆರು ದೇಶದಲ್ಲಿ ಮಾರ್ಚ್ನಿಂದ ಲಾಕ್ಡೌನ್ ಹೇರಲಾಗಿತ್ತು. ಆದ್ರೀಗ, ರಾಜಧಾನಿ ಲಿಮಾ ನಗರದಲ್ಲಿ ಡಿಸ್ಕೋ ಮಾರ್ಕೆಟ್ನ್ನ ತೆರೆಯಲಾಗಿದೆ. ಗ್ರಾಹಕರನ್ನ ಸೆಳೆಯುವ ಸಲುವಾಗಿ ಶಾಪ್ನವರು ಹೊಸ ಐಡಿಯಾ ಮಾಡಿದ್ದಾರೆ. ಪೆರುವಿನಲ್ಲಿ ಈವರೆಗೂ 2,72,000 ಜನರು ಸೋಂಕಿನಿಂದ ಬಳಲುತ್ತಿದ್ರೆ, 8,939 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಮೂಲ ಅಮೆರಿಕನ್ನರಿಗೆ ಕಂಟಕ ಅಮೆರಿಕದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 25 ಲಕ್ಷದ 96 ಸಾವಿರದ 537 ಜನರಿಗೆ ತಗುಲಿದೆ. 1,28.152 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸೋಂಕಿನಿಂದಾಗಿ ಮೂಲ ಅಮೆರಿಕನ್ನರಿಗೆ ಕಂಟಕ ಎದುರಾಗಿದೆ. ಅದರಲ್ಲೂ ಬುಡಕಟ್ಟು ಜನಾಂಗದವರಿಗೆ ಹೆಚ್ಚು ಮುಳುವಾಗಿರೋದಾಗಿ ಬುಡಕಟ್ಟು ಆರೋಗ್ಯ ಮಂಡಳಿ ಹೇಳಿದೆ. ಸೋಂಕಿತರ ಪೈಕಿ ಶೇ53 ರಷ್ಟು ಪೆಂಟಗಾನ್ ಸಿಟಿಯಲ್ಲೇ ಕಾಣಿಸಿಕೊಂಡಿರೋದು ಕಳವಳ ತಂದಿದೆ.
Published On - 2:06 pm, Sun, 28 June 20