2019ರ ಮಾರ್ಚ್ನಲ್ಲೇ ಕೊರೊನಾ ಪತ್ತೆಯಾಗಿತ್ತಾ! ಹಾಗಾದ್ರೆ ಮೂಲ ಎಲ್ಲಿ?
ಕೊರೊನಾ ವೈರಸ್ ಕಳೆದ ವರ್ಷ ಡಿಸೆಂಬರ್ ವೇಳೆಗೆ ಚೀನಾದ ವುಹಾನ್ನಲ್ಲಿ ಪತ್ತೆಯಾಗಿತ್ತು. ಅಲ್ಲಿಂದ ಜನವರಿಯಲ್ಲಿ ಯುರೋಪ್ಗೆ ಹಾಗೂ ಮಾರ್ಚ್ನಲ್ಲಿ ಭಾರತಕ್ಕೆ ಕಾಲಿಟ್ಟಿದೆ ಅಂತಲೇ ಎಲ್ಲರೂ ನಂಬಿದ್ವಿ. ಆದ್ರೆ, ಸ್ಪೇನ್ನ ಯುನಿವರ್ಸಿಟಿ ಆಫ್ ಬರ್ಸೆಲೊನಾ ಸಂಶೋಧನೆ ಪ್ರಕಾರ, 2019ರ ಮಾರ್ಚ್ನಲ್ಲೇ ಸ್ಪೇನ್ನಲ್ಲೇ ಕೊಳಚೆ ನೀರನ್ನ ತಪಾಸಣೆ ಮಾಡಿದ ವೇಳೆ ಸೋಂಕು ಪತ್ತೆಯಾಗಿತ್ತು ಅಂತಾ ಹೇಳಲಾಗ್ತಿದೆ. ಕೊರೊನಾದ ಮೂಲವೇ ಈಗ ಗೊಂದಲ ಸೃಷ್ಟಿಸುತ್ತಿದೆ. ಕೊರೊನಾ ‘ವಿಶ್ವ’ರೂಪ ಕೊರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಪಂಚದಲ್ಲಿ ವಿಶ್ವದಲ್ಲಿ 99 ಲಕ್ಷ 04 […]
ಕೊರೊನಾ ವೈರಸ್ ಕಳೆದ ವರ್ಷ ಡಿಸೆಂಬರ್ ವೇಳೆಗೆ ಚೀನಾದ ವುಹಾನ್ನಲ್ಲಿ ಪತ್ತೆಯಾಗಿತ್ತು. ಅಲ್ಲಿಂದ ಜನವರಿಯಲ್ಲಿ ಯುರೋಪ್ಗೆ ಹಾಗೂ ಮಾರ್ಚ್ನಲ್ಲಿ ಭಾರತಕ್ಕೆ ಕಾಲಿಟ್ಟಿದೆ ಅಂತಲೇ ಎಲ್ಲರೂ ನಂಬಿದ್ವಿ. ಆದ್ರೆ, ಸ್ಪೇನ್ನ ಯುನಿವರ್ಸಿಟಿ ಆಫ್ ಬರ್ಸೆಲೊನಾ ಸಂಶೋಧನೆ ಪ್ರಕಾರ, 2019ರ ಮಾರ್ಚ್ನಲ್ಲೇ ಸ್ಪೇನ್ನಲ್ಲೇ ಕೊಳಚೆ ನೀರನ್ನ ತಪಾಸಣೆ ಮಾಡಿದ ವೇಳೆ ಸೋಂಕು ಪತ್ತೆಯಾಗಿತ್ತು ಅಂತಾ ಹೇಳಲಾಗ್ತಿದೆ. ಕೊರೊನಾದ ಮೂಲವೇ ಈಗ ಗೊಂದಲ ಸೃಷ್ಟಿಸುತ್ತಿದೆ.
ಕೊರೊನಾ ‘ವಿಶ್ವ’ರೂಪ ಕೊರೊನಾದಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಪ್ರಪಂಚದಲ್ಲಿ ವಿಶ್ವದಲ್ಲಿ 99 ಲಕ್ಷ 04 ಸಾವಿರದ 963 ಜನರಿಗೆ ಕೊರೊನಾ ತಗುಲಿದೆ. ಕೊರೊನಾಗೆ ಒಟ್ಟು 4 ಲಕ್ಷ 96 ಸಾವಿರದ 789 ಜನ ಬಲಿಯಾಗಿದ್ದಾರೆ. ಸೋಂಕಿನಿಂದ ಈವರೆಗೂ 53 ಲಕ್ಷದ 57 ಸಾವಿರದ 840 ಜನರು ಗುಣಮುಖರಾದ್ರೆ, 13,56,613 ಮಂದಿ ಪ್ರಸ್ತುತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೀನಾ, ಕೊರಿಯಾದಲ್ಲಿ ಆತಂಕ ಕೆಲ ದಿನಗಳಿಂದ ಸೋಂಕು ರಹಿತವಾಗಿದ್ದ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಕೊರೊನಾ ವೈರಸ್ ಆತಂಕ ಮೂಡಿಸುತ್ತಿದೆ. ಹೌದು, ಚೀನಾ ರಾಜಧಾನಿ ಬೀಜಿಂಗ್ನಲ್ಲಿ 21 ಹೊಸ ಕೇಸ್ಗಳು ಪತ್ತೆಯಾದ್ರೆ, ದಕ್ಷಿಣ ಕೊರಿಯಾದಲ್ಲಿ 51 ಹೊಸ ಪ್ರಕರಣಗಳು ಪತ್ತೆಯಾಗಿವೆ. ಟೆಸ್ಟ್ ಪ್ರಮಾಣ ಹೆಚ್ಚಿಗೆ ಮಾಡಿರುವುದರಿಂದ ಮತ್ತು ಕೆಲ ನಿರ್ಬಂಧಗಳನ್ನ ವಿಧಿಸಿರುವುದರಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿರೋದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.
ಟ್ರಂಪ್ ಱಲಿ ಸಮರ್ಥನೆ ವಿಶ್ವದ ದೊಡ್ಡಣ್ಣ ಅಮೆರಿಕವನ್ನ ಕೊರೊನಾ ಮಕಾಡೆ ಮಲಗಿಸಿದೆ. ಇಷ್ಟಾದರೂ ಕ್ಯಾರೆ ಅನ್ನದ ಟ್ರಂಪ್, ಮುಂದಿನ ಅಧ್ಯಕ್ಷೀಯ ಚುನಾವಣೆಗಾಗಿ ಱಲಿ ನಡೆಸುತ್ತಲೇ ಇದ್ದಾರೆ. ಕೊರೊನಾ ಭೀತಿ ಮಧ್ಯೆಯೂ ಟ್ರಂಪ್ ಸಾರ್ವಜನಿಕ ಱಲಿಗಳನ್ನ ನಡೆಸುತ್ತಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ವೈರಸ್ ಟಾಸ್ಕ್ ಫೋರ್ಸ್ನ ಪೆನ್ಸ್, ಟ್ರಂಪ್ರ ಱಲಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಮಾಸ್ಕ್ಗಾಗಿ ಕೀನ್ಯಾ ಕೆಂಡ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಮಾಸ್ಕ್ ಧರಿಸೋದು ಕಡ್ಡಾಯ. ಆದ್ರೆ,ಕೆಲವರು ಉಡಾಫೆಯಿಂದ ವರ್ತಿಸ್ತಾರೆ. ಇದೇ ವಿಚಾರವೀಗ ಕೀನ್ಯಾದಲ್ಲಿ ಬೆಂಜಿ ಜ್ವಾಲೆಯನ್ನೇ ಎಬ್ಬಿಸಿದೆ. ಕೀನ್ಯಾದ ಲಿಸ್ಸೋಸ್ನಲ್ಲಿ ಸ್ಥಳೀಯರಿಗೆ ಮಾಸ್ಕ್ ಧರಿಸುವಂತೆ ಪೊಲೀಸರು ತಿಳಿಸಿದ್ರು. ಇದಕ್ಕೆ ರೊಚ್ಚಿಗೆದ್ದು ಕೆಲವರು ಕಲ್ಲುತೂರಾಟ ನಡೆಸಿದ್ರು. ಹಿಂಸಾಚಾರದಲ್ಲಿ ಮೂರು ಜನರು ಬಲಿಯಾಗಿದ್ದಾರೆ.
ವೈರಸ್ ‘ಪಾರ್ಟಿ’..! ಅಮೆರಿಕದಲ್ಲಿ ಕೊರೊನಾ ಹಾವಳಿ ಇದ್ದರೂ ಸಹ, ಜನತೆ ಮಾತ್ರ ವೈರಸ್ ಬಗ್ಗೆ ಇನ್ನೂ ನಿರ್ಲಕ್ಷ್ಯ ತೋರ್ತಿದ್ದಾರೆ. ಗುಲ್ ದ್ವೀಪದ ಮಿಚಿಗನ್ ಬೋಟ್ ಪಾರ್ಟಿಯಲ್ಲ್ಲಿ ನೂರಾರು ಜನರು ಜಮಾಯಿಸಿದ್ರು. ವೈರಸ್ ಭೀತಿ ಇಲ್ಲದೆಯೂ ಸ್ಥಳೀಯ ಆಡಳಿತದ ನಿಯಮ ಉಲ್ಲಂಘಿಸಿ ನೂರಾರು ಬೋಟ್ಗಳಲ್ಲಿ ಜನರು ಸೇರಿ, ಪಾರ್ಟಿ ಎಂಜಾಯ್ ಮಾಡಿದ್ರು. ಯಾವುದೇ ಸಂಸ್ಥೆ ವತಿಯಿಂದ ಪಾರ್ಟಿ ಆಯೋಜಿಸದಿದ್ದರೂ, ಪಾರ್ಟಿ ಪ್ರಿಯರು ವೈಯಕ್ತಿಕವಾಗಿ ಬಂದು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಟ್ರಂಪ್ ಱಲಿಯಲ್ಲಿ ಸೋಂಕು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು ಹಾಲಿ ಅಧ್ಯಕ್ಷ ಟ್ರಂಪ್ ಱಲಿ ಮೇಲೆ ಱಲಿ ನಡೆಸುತ್ತಲೇ ಇದ್ದಾರೆ. ಇದ್ರ ಮಧ್ಯೆ ಒಕ್ಲಾಹೋಮಾದಲ್ಲಿ ನಡೆದ ಟ್ರಂಪ್ರ ಟುಲ್ಸಾ ಱಲಿಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತ ಪೌಲ್ ಮೊನೀಸ್ಗೂ ಸೋಂಕು ತಗುಲಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಪೌಲ್, ನನಗೆ ಕೊರೊನಾ ಪಾಸಿಟಿವ್ ಬಂದಿರೋದು ಅಚ್ಚರಿ ತಂದಿದೆ. ಯಾಕಂದ್ರೆ, ಕೊರೊನಾದ ಯಾವುದೇ ಲಕ್ಷಣಗಳು ನನ್ನಲ್ಲಿ ಕಂಡು ಬಂದಿಲ್ಲ. ನಾನು ಚೆನ್ನಾಗಿದ್ದೇನೆ ಅಂತಾ ಹೇಳಿದ್ದಾರೆ.
ಹೊರ ಹೋಗಬೇಕಾದ್ರೆ ಮಾಸ್ಕ್ ಬೇಡ! ಕೊರೊನಾ ಸೋಂಕಿನಿಂದ ನಲುಗಿ ಹೋಗಿರುವ ಇಟಲಿಯಲ್ಲಿ, ಈವರೆಗೂ ಸೋಂಕಿನ ಸುಳಿಗೆ 2,39,961 ಜನರು ಸಿಲುಕಿದ್ದಾರೆ. ಸೋಂಕಿನಿಂದಾಗಿ 34 ಸಾವಿರ ಜನರು ಬಲಿಯಾಗಿದ್ದಾರೆ. ಹೀಗಾಗಿ, ಒಳಾಂಗಣದಲ್ಲಿ ಓಡಾಡಬೇಕಾದರೆ, ಅಥವಾ ಕಚೇರಿಗಳಲ್ಲಿ ಕೆಲಸ ಮಾಡಬೇಕಾದರೆ ಮಾಸ್ಕ್ ಧರಿಸುವುದನ್ನ ಕಡ್ಡಾಯ ಮಾಡಲಾಗಿದೆ. ಆದ್ರೆ, ಹೊರಗೆ ಓಡಾಡಬೇಕಾದರೆ ವಾತಾವರಣ ವ್ಯತ್ಯಾಸವಿರುವುದರಿಂದ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಅಂತಾ ಇಟಲಿ ಸರ್ಕಾರ ಹೇಳಿದೆ.
ಅಧ್ಯಕ್ಷರಿಗೆ ಕೋರ್ಟ್ ಚಾಟಿ ಬ್ರೆಜಿಲ್ನಲ್ಲಿ ಸೋಂಕು ನಿಗ್ರಹಿಸುವ ಸಲುವಾಗಿ ಏಪ್ರಿಲ್ನಿಂದಲೇ ದೇಶದಲ್ಲಿ ಮಾಸ್ಕ್ ಧರಿಸುವುದನ್ನ ಕಡ್ಡಾಯಗೊಳಿಸಲಾಗಿದೆ. ಆದ್ರೆ, ಅಧ್ಯಕ್ಷ ಬೊಲ್ಸೊನಾರೋ ಮಾತ್ರ ಕೋರ್ಟ್ ಮಾಸ್ಕ್ ಧರಿಸುವಂತೆ ಹೇಳಿದ್ರೂ ಮಾಸ್ಕ್ ಧರಿಸುತ್ತಿಲ್ಲ. ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಬೊಲ್ಸಾನಾರೋಗೆ ಚಾಟಿ ಬೀಸಿರೋ ಕೋರ್ಟ್, ಮಾಸ್ಕ್ ಧರಿಸದಿದ್ದರೆ 365 ಅಮೆರಿಕನ್ ಡಾಲರ್ನಷ್ಟು ದಂಡ ಪಾವತಿಸುವಂತೆ ಸೂಚಿಸಿದೆ.