ಈ ರಾಶಿಯ ಉದ್ಯಮಿಗಳಿಗೆ ಸಮಯ ಉತ್ತಮವಾಗಿಲ್ಲ, ಸಾಲ ನೀಡುವುದನ್ನು ತಪ್ಪಿಸಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ದಶಮೀ ತಿಥಿ, ಸೋಮವಾರ ವ್ಯಾವಹಾರಿಕ ಶುದ್ಧಿ, ಒಳ್ಳೆಯದನ್ನು ಮಾಡುವ ಬುದ್ಧಿ, ಕಲೆಯ ಸಿದ್ಧಿ ಇವೆಲ್ಲ ಈ ದಿನದಂದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಪುಷ್ಯ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ – 06:25 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ: ರಾಹು ಕಾಲ 07:58 – 09:30, ಯಮಘಂಡ ಕಾಲ 11:02 – 12:35, ಗುಳಿಕ ಕಾಲ 14:07 – 15:40
ತುಲಾ ರಾಶಿ: ನಿಮ್ಮ ಸಂಗಾತಿಯ ಮುಗ್ಧ ಪ್ರೀತಿಯು ಅರ್ಥವಾಗಿ ಪಶ್ಚಾತ್ತಪಪಡುವಿರಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಾಣುವುದು. ಮಕ್ಕಳೇ ಶತ್ರುಗಳಂತೆ ವರ್ತಿಸಿಯಾರು. ನಿಮ್ಮ ಕೆಲಸವನ್ನು ಜನರು ಮಾಡುವಂತೆ ಮಾಡುವಲ್ಲಿ ನೀವು ಹೆಚ್ಚಿನ ಮಟ್ಟಿಗೆ ಯಶಸ್ವಿಯಾಗುತ್ತೀರಿ. ಧರ್ಮಕಾರ್ಯಗಳಲ್ಲಿ ಅನಾಸಕ್ತಿಯೆದ್ದು ತೋರುವುದು. ನೀವಾಡುವ ಮಾತುಗಳನ್ನು ನಿಮ್ಮ ಸಹಾಯಕ್ಕೆ ಇದ್ದವರು ಕೇಳಬಹುದು. ಯಾರ ಮೇಲೂ ಅಸೂಯೆಪಡದೇ ನಿರ್ಮಲಮನಸ್ಸಿನಿಂದ ಇರುವಿರಿ. ಇಂದು ನಿಮ್ಮವರೆ ಮೇಲೆ ಅತಿಯಾದ ಅಕ್ಕರೆ ಇರುವುದು. ಶತ್ರುಗಳು ನಿಮ್ಮ ಹಿಂದೆ ಗಾಸಿಪ್ ಮಾಡಬಹುದು. ಇದು ನಿಮ್ಮ ಪ್ರಚಾರದ ಮೇಲೂ ಪರಿಣಾಮ ಬೀರಬಹುದು. ಅತಿಯಾದ ಕ್ರಮವನ್ನು ತೆಗೆದುಕೊಳ್ಳುವುದು ಬೇಡ. ನಿಮ್ಮ ವ್ಯವಹಾರದ ದೀರ್ಘಾವಧಿಯ ಯೋಜನೆಗಳಿಗೆ ನೀವು ಸಂಪೂರ್ಣ ಗಮನ ಹರಿಸಬೇಕು. ನಿಮ್ಮ ತಾಯಿವು ದೈಹಿಕ ನೋವನ್ನು ಅನುಭವಿಸಬಹುದು. ನಿಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ವೃಶ್ಚಿಕ ರಾಶಿ: ಅಪ್ರಯೋಜನವಾದ ವಿಷಯದ ಬಹ್ಗೆ ಹೆಚ್ಚು ಚರ್ಚೆ ಮಾಡುವಿರಿ. ಅಕಾರಣವಾಗಿ ಶೀಘ್ರ ಕೋಪಿಗಳಾಗುವಿರಿ. ಸತ್ಯವನ್ನು ಅರ್ಥಮಾಡಿಕೊಳ್ಳಲು ಮನಸ್ಸು ನಿಮ್ಮದಾಗಿರುವುದಿಲ್ಲ. ಉದ್ಯೋಗದಲ್ಲಿ ಬಡ್ತಿಯ ಹಾಗೂ ಬದಲಾವಣೆ ಸಿಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಧರ್ಮಕರ್ಮಗಳಲ್ಲಿ ಭಾಗವಹಿಸಿ. ಮಾನಸಿಕ ನೆಮ್ಮದಿಯು ನಿಮ್ಮದಾದೀತು. ನೀವು ಹಿಂಜರಿಕೆಯಿಲ್ಲದೆ ಅಂದುಕೊಂಡ ಕಾರ್ಯದಲ್ಲಿ ಮುಂದುವರಿಯುವಿರಿ. ನಿಮ್ಮ ಬಗ್ಗೆ ನಡೆಯುತ್ತಿರುವ ಅಪಶ್ರುತಿ ಬಗೆಹರಿಯಲಿದೆ. ಕೆಲಸಗಳು ಪೂರ್ಣಗೊಳ್ಳಲು ನೀವು ದೀರ್ಘಕಾಲ ಕಾಯುತ್ತಿದ್ದರೆ, ಅದು ಸಂಭವಿಸಬಹುದು. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು. ಇಂದು ನೀವು ಜನರನ್ನು ಆಕರ್ಷಿಸುವಿರಿ. ಜನರು ನಿಮ್ಮ ಆಲೋಚನಾ ವಿಧಾನವನ್ನು ಇಷ್ಟಪಡುತ್ತಾರೆ. ನಿಮ್ಮ ಸಲಹೆಯಿಂದ ಜನರು ಪ್ರಯೋಜನ ಪಡೆಯುತ್ತಾರೆ. ಇಂದು ಕೆಲವು ಒಳ್ಳೆಯ ಸುದ್ದಿಗಾಗಿ ಕಾಯುತ್ತಿದ್ದಾರೆ. ಪ್ರೀತಿಯ ಜೀವನಕ್ಕೆ ದಿನವು ಸಾಮಾನ್ಯವಾಗಿದೆ.
ಧನು ರಾಶಿ: ಇಂದು ನಿಮ್ಮ ಸುತ್ತಲು ವಿರೋಧಿಗಳು ಹೊಂಚು ಹಾಕಿ ನಿಮ್ಮ ಅವನತಿಯನ್ನುವ ಕಾಯುತ್ತಿರಬಹುದು. ನಿಮಗೆ ಬಂದ ಕಾರ್ಯಗಳನ್ನು ನೀವೇ ಮಾಡಿ. ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಶತ್ರುಗಳ ಹೇಗೂ ಪ್ರವೇಶ ಮಾಡಬಹುದು. ನಿಮ್ಮ ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಆದರೆ ಕೆಲಸದ ಸ್ಥಳದಲ್ಲಿ ತೊಂದರೆಗಳು ಉಂಟಾಗಬಹುದು. ಮಾತುಗಳನ್ನು ಎಚ್ಚರದಿಂದ ಆಡಿ. ಮಾತು ಕಂಟಕಗಳನ್ನು ತಂದೀತು. ನಿಮ್ಮ ಜೀವನಶೈಲಿಯನ್ನು ಆಕರ್ಷಕವಾಗಿಸಲು ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಪೋಷಕರ ಜೊತೆ ಕೆಲವು ವಿಷಯದ ಬಗ್ಗೆ ನೀವು ಕಲಹದ ಸಾಧ್ಯತೆ ಇದೆ. ಮಕ್ಕಳಿಗಾಗಿ ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವಿರೋಧಿಗಳನ್ನು ತತ್ಸಾರ ಮಾಡುವ ಅವಶ್ಯಕತೆ ಇಲ್ಲ. ಮಾತು ನಿಯಂತ್ರಣ ತಪ್ಪಬಹುದು. ಕೆಲಸದ ಸ್ಥಳದಲ್ಲಿ ವಾತಾವರಣವು ನಿಮಗೆ ಅನುಕೂಲಕರವಾಗಿಲ್ಲದಿದ್ದರೆ, ನಿಮ್ಮ ಮನಃಸ್ಥಿತಿಯು ಹದಗೆಡುತ್ತದೆ. ದೈನಂದಿನ ಕೆಲಸದಲ್ಲಿ ಸಮಸ್ಯೆಗಳು ಉಳಿಯಬಹುದು. ನೀವು ಯೋಜಿಸಿದ ನಿಮ್ಮ ಕೆಲಸವೂ ಪೂರ್ಣಗೊಳ್ಳುವುದಿಲ್ಲ.
ಮಕರ ರಾಶಿ: ಹೊಸ ಆರ್ಥಿಕ ವ್ಯವಹಾರಗಳನ್ನು ಇಂದು ನೀವು ಮಾಡಿರಿ. ಸಂಗಾತಿಗೆ ಇಷ್ಟವಾಗುವ ಕೆಲಸವನ್ನು ಮಾಡಿ, ಆಕೆಯ ಸಿಹಿಯಪ್ಪುಗೆಯ ಅನುಭವವನ್ನು ಪಡಯುವಿರಿ. ಪ್ರೀತಿಪಾತ್ರರನ್ನು ಭೇಟಿ ಆಗುವುದರಿಂದ ನೀವು ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರುತ್ತದೆ. ಆರಂಭದಲ್ಲಿ ಕೆಲವು ತೊಂದರೆಗಳು ಎದುರಾಗಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಪ್ರಯತ್ನಿಸಿ. ನೀವು ಕೆಲವು ಸಣ್ಣ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಸರಿಯಾದ ಸಮಯಕ್ಕಾಗಿ ಕಾಯಿರಿ. ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಜಾಗರೂಕರಾಗಿರಬೇಕು. ನೀವು ಎಲ್ಲರ ಜೊತೆ ಸಾಮರಸ್ಯವನ್ನು ಕಾಪಾಡಿಕೊಳ್ಳಬೇಕು. ನೀವು ಇಂದು ಅನಿರೀಕ್ಷಿತವಾಗಿ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯಬಹುದು. ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ನಿಮ್ಮ ಕೆಲಸವನ್ನು ಪೂರ್ಣಗೊಳಿಸುತ್ತೀರಿ.
ಕುಂಭ ರಾಶಿ: ನಿಮ್ಮ ಉತ್ತಮ ಸ್ನೇಹಿತರ ಬಳಗವನ್ನು ಹೊಂದಿ ಈ ದಿನ ಹೆಚ್ಚಿನ ಸಮಯವನ್ನು ಅವರ ಜೊತೆ ಕಳೆಯುವಿರಿ. ನಿಮಗೆ ವೃತ್ತಿಸಂಬಂಧ ಸಮಸ್ಯೆಗಳು ಯಾರದೋ ಮೂಲಕ ಎದುರಾಗಬಹುದು. ಕಲೆ ಮತ್ತು ಸಾಹಿತ್ಯದಲ್ಲಿ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ನಿಮಗೆ ಸಾಧ್ಯವಾಗುತ್ತದೆ. ತಾಯಿ ಮತ್ತು ಕುಟುಂಬದ ಎಲ್ಲ ಸದಸ್ಯರೊಂದಿಗೆ ಆತ್ಮೀಯತೆ ಹೆಚ್ಚಾಗುತ್ತದೆ. ಅಲ್ಪಾವಧಿಯ ವಲಸೆಯ ಸಾಧ್ಯತೆಯಿದೆ. ಚಾಣಾಕ್ಷ ಬುದ್ಧಿಯಿಂದ ಅದನ್ನು ಪರಿಹರಿಸಿಕೊಳ್ಳುವಿರಿ. ಬಾಕಿ ಉಳಿಸಕೊಂಡ ಕೆಲಸವನ್ನು ಶೀಘ್ರವಾಗಿ ಮುಗಿಸುವಿರಿ. ಕುಟುಂಬದ ಎಲ್ಲರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೀರಿ. ಪ್ರಮುಖ ಕೆಲಸಗಳಲ್ಲಿ ವಿಳಂಬ ಮಾಡಬೇಡಿ. ನಿಮ್ಮ ಆದಾಯದ ಜೊತೆಗೆ ನಿಮ್ಮ ಖರ್ಚುಗಳೂ ಹೆಚ್ಚಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನೀವು ಮಕ್ಕಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಕಠಿಣ ಪರಿಶ್ರಮದಿಂದ ನಿಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತೀರಿ.
ಮೀನ ರಾಶಿ: ಮನೆಯಲ್ಲಿ ಯಾರಿಂದಲಾದರೂ ನಿಮಗೆ ನಿರಾಸೆಯ ಅನುಭವವಾಗಬಹುದು. ಸಹೋದರರ ನಡುವೆ ಮನೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರುಬುದು. ಶೈಕ್ಷಣಿಕ ಕೆಲಸವು ಆಹ್ಲಾದಕರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ನಿಮ್ಮ ತಾಯಿಯ ಅನಾರೋಗ್ಯದ ಕಾರಣ ನೀವು ಚಿಂತೆಯಲ್ಲಿರುತ್ತೀರಿ. ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗುವುದರಿಂದ ನೀವು ದುಃಖಿತರಾಗುವಿರಿ. ಆಪ್ತರ ಭೇಟಿ ಹಾಗೂ ಮಾರ್ಗದರ್ಶನದ ಸುತ್ತಾಟದಲ್ಲಿ ಇಂದು ಮುಕ್ತಾಯಗೊಳ್ಳಲಿದೆ. ಪ್ರಶಂಸೆಗಳು ನಿಮ್ಮನ್ನು ಅರಸಿ ಬರಲಿವೆ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮನ್ನು ಹೆಚ್ಚು ಗಮನಿಸುತ್ತ ಇರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ತಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಕೆಲಸಕ್ಕಿಂತ ಇತರರ ಕೆಲಸಗಳ ಮೇಲೆ ಹೆಚ್ಚು ಗಮನವಿರುವುದು. ನಿಮ್ಮ ಮೇಲೆ ದುಷ್ಪರಿಣಾಮ ಬೀರಬಹುದು. ಉದ್ಯಮಿಗಳಿಗೆ ಸಮಯ ಉತ್ತಮವಾಗಿಲ್ಲ. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಹಳೆಯ ಸಾಲವು ನಿಮಗೆ ಒತ್ತಡವನ್ನು ಉಂಟುಮಾಡಬಹುದು.