5 ದಿನ ಆಯ್ತು ರಿಪೋರ್ಟ್ ಬಂದಿಲ್ಲ, ಕ್ವಾರಂಟೈನ್ ಕೇಂದ್ರದಲ್ಲಿ ಗರ್ಭಿಣಿ ತೊಳಲಾಟ

ಬೆಂಗಳೂರು: ಕ್ವಾರಂಟೈನ್ ಹೆಸರಿನಲ್ಲಿ ವಿದೇಶದಿಂದ ಬಂದಿದ್ದ 8 ತಿಂಗಳ ಗರ್ಭಿಣಿಯನ್ನ ಹೋಟೆಲ್​ನಲ್ಲಿ ಕೂಡಿಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಖತಾರ್​ನಿಂದ ಕಳೆದ ಶುಕ್ರವಾರ ಬೆಂಗಳೂರಿಗೆ ಗರ್ಭಿಣಿ ಬಂದಿದ್ದರು. ಸದ್ಯ ಹೋಟೆಲ್​ನಲ್ಲಿ ಗರ್ಭಿಣಿಯನ್ನು ಕ್ವಾರಂಟೈನ್ ಮಾಡಿದ್ದಾರೆ. ಆರೋಗ್ಯ ಇಲಾಖೆ ನಿಯಮದಂತೆ ಗರ್ಭಿಣಿಯರಿಗೆ 48 ಗಂಟೆಗಳಲ್ಲಿ ಟೆಸ್ಟ್ ರಿಪೋರ್ಟ್ ಮಾಡಬೇಕು. ನೆಗೆಟಿವ್ ಬಂದ್ರೆ ಹೋಂ ಕ್ವಾರಂಟೈನ್​ಗೆ ಕಳುಹಿಸಬೇಕು. ಆದ್ರೆ 5 ದಿನಗಳಾದ್ರೂ ಕೊರೊನಾ ವರದಿ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದೆ. ಹೋಟೆಲ್ ಕ್ವಾರಂಟೈನ್​ನಲ್ಲಿರುವುದಕ್ಕೆ ನಮಗೆ ಭಯವಾಗ್ತಿದೆ. ವಿದೇಶದಿಂದ ಬೆಂಗಳೂರಿಗೆ ವಾಪಸಾಗಿರುವ […]

5 ದಿನ ಆಯ್ತು ರಿಪೋರ್ಟ್ ಬಂದಿಲ್ಲ, ಕ್ವಾರಂಟೈನ್ ಕೇಂದ್ರದಲ್ಲಿ ಗರ್ಭಿಣಿ ತೊಳಲಾಟ
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: May 27, 2020 | 2:14 PM

ಬೆಂಗಳೂರು: ಕ್ವಾರಂಟೈನ್ ಹೆಸರಿನಲ್ಲಿ ವಿದೇಶದಿಂದ ಬಂದಿದ್ದ 8 ತಿಂಗಳ ಗರ್ಭಿಣಿಯನ್ನ ಹೋಟೆಲ್​ನಲ್ಲಿ ಕೂಡಿಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಖತಾರ್​ನಿಂದ ಕಳೆದ ಶುಕ್ರವಾರ ಬೆಂಗಳೂರಿಗೆ ಗರ್ಭಿಣಿ ಬಂದಿದ್ದರು. ಸದ್ಯ ಹೋಟೆಲ್​ನಲ್ಲಿ ಗರ್ಭಿಣಿಯನ್ನು ಕ್ವಾರಂಟೈನ್ ಮಾಡಿದ್ದಾರೆ.

ಆರೋಗ್ಯ ಇಲಾಖೆ ನಿಯಮದಂತೆ ಗರ್ಭಿಣಿಯರಿಗೆ 48 ಗಂಟೆಗಳಲ್ಲಿ ಟೆಸ್ಟ್ ರಿಪೋರ್ಟ್ ಮಾಡಬೇಕು. ನೆಗೆಟಿವ್ ಬಂದ್ರೆ ಹೋಂ ಕ್ವಾರಂಟೈನ್​ಗೆ ಕಳುಹಿಸಬೇಕು. ಆದ್ರೆ 5 ದಿನಗಳಾದ್ರೂ ಕೊರೊನಾ ವರದಿ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದೆ. ಹೋಟೆಲ್ ಕ್ವಾರಂಟೈನ್​ನಲ್ಲಿರುವುದಕ್ಕೆ ನಮಗೆ ಭಯವಾಗ್ತಿದೆ. ವಿದೇಶದಿಂದ ಬೆಂಗಳೂರಿಗೆ ವಾಪಸಾಗಿರುವ ಗರ್ಭಿಣಿ ಅಳಲು ತೋಡಿಕೊಂಡಿದ್ದಾರೆ.

Published On - 12:59 pm, Wed, 27 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us