
ತುಮಕೂರು: ನಾಯಕರ ಅಬ್ಬರದ ಪ್ರಚಾರ. ಭರವಸೆಗಳ ಮಹಾಪೂರ. ಜಾತಿ ಲೆಕ್ಕಾಚಾರ, ಎಲ್ಲ ಮುಗಿದು ಶಿರಾ ಅಖಾಡ ಈಗ ಶಾಂತವಾಗಿದೆ. ನಾಯಕರ ಏಟು ಎದಿರೇಟನ್ನ ಕಣ್ಣಾರೆ ಕಂಡಿರೋ ಮತದಾರ ಇಂದು ತನ್ನ ತೀರ್ಪು ಬರೆಯಲಿದ್ದಾನೆ. ಬೈಎಲೆಕ್ಷನ್ ಅಭ್ಯರ್ಥಿಗಳ ಹಣೆಬರಹ ಇಂದು ಮತಯಂತ್ರ ಸೇರಲಿದೆ .
ನಾಯಕರ ಅಬ್ಬರ ಮುಗಿದಿದೆ. ಮಾತಿನ ಆರ್ಭಟ ಅಂತ್ಯವಾಗಿದೆ. ಕಳೆದ 15 ದಿನದಿಂದ ರಾಜಕೀಯ ಆಟ ನೋಡಿದ್ದ ಮತದಾರ, ಇಂದು ತನ್ನ ಆಟ ತೋರಿಸೋ ಜೊತೆಗೆ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾನೆ.
ಮೊದಲು ಸ್ಕ್ರೀನಿಂಗ್.. ಬಳಿಕ ವೋಟಿಂಗ್!
ಹಣೆಬರಹ ಸಂಗ್ರಹಿಸಲು ಇವಿಎಂಗಳು ರೆಡಿಯಾಗಿವೆ. ಮತದಾರರ ನಿರ್ಧಾರ ದಾಖಲಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಇಂದು ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಲಿದೆ. ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣರ ನಿಧನದಿಂದ ತೆರವಾಗಿರೋ ಶಿರಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಕೊರೊನಾ ನಡುವೆ ನಡೆಯುತ್ತಿರೋ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ .
ಶಿಕಾರಿಗೆ ‘ಶಿರಾ’ ಸಜ್ಜು!
ಇಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಶಿರಾ ಕ್ಷೇತ್ರದಲ್ಲಿ ವೋಟಿಂಗ್ ನಡೆಯಲಿದೆ. ಒಟ್ಟು 2 ಲಕ್ಷ15 ಸಾವಿರದ 725 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ 330 ಮತಗಟ್ಟೆ ಸ್ಥಾಪನೆ ಮಾಡಲಾಾಗಿದೆ. ಪ್ರತಿ ಮತಗಟ್ಟೆಯಲ್ಲಿ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿನ ಲಕ್ಷಣ ಇರೋರು ಕಂಡು ಬಂದ್ರೆ ಅಂಥವರಿಗೆ ಸಂಜೆ 5 ರಿಂದ ಮತದಾನಕ್ಕೆ ಅವಕಾಶ ಮಾಡಲಾಗುತ್ತೆ. ಈಗಾಗಲೇ 130 ಸೋಂಕಿತರು ಅಂಚೆಮತ ಹಾಕಿದ್ದು, 65 ಸೋಂಕಿತರು ಌಂಬುಲೆನ್ಸ್‌ನಲ್ಲಿ ಬಂದು ವೋಟ್ ಮಾಡಲಿದ್ದಾರೆ.
ಇನ್ನು ಕ್ಷೇತ್ರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, 10 ಕಡೆ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಭದ್ರತೆಗಾಗಿ ಒಟ್ಟು 866 ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ .
ಚುನಾವಣೆಗೆ ಜಿಲ್ಲಾಡಳಿ ಸಜ್ಜಾಗಿದ್ರೆ, ಇತ್ತ ಅಭ್ಯರ್ಥಿಗಳು ಕೊನೆ ಕ್ಷಣದ ಕಸರತ್ತು ನಡೆಸಿದ್ರು. ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ನಿನ್ನೆ ಮನೆ ಮನೆ ಪ್ರಚಾರ ನಡೆಸಿದ್ರು. ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಕೂಡಾ ಮನೆ ಮನೆ ಮತಬೇಟೆಯಲ್ಲಿ ತೊಡಗಿದ್ರು. ಒಟ್ನಲ್ಲಿ ಬೈಎಲೆಕ್ಷನ್ ಮತದಾನಕ್ಕೆ ಶಿರಾ ಸಜ್ಜಾಗಿದ್ದು, ಅಭ್ಯರ್ಥಿಗಳ ಹಣೆಬರಹ ಇಂದು ವೋಟಿಂಗ್ ಮಷಿನ್ನಲ್ಲಿ ಭದ್ರವಾಗಲಿದೆ.