AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ಏರ್​​ಪೋರ್ಟ್​​ನಿಂದ ಮಹತ್ವದ ಸೂಚನೆ; ಮಾಹಿತಿ ಇಲ್ಲಿದೆ

ಗಣರಾಜ್ಯೋತ್ಸವ ಮತ್ತು ದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಬೆಂಗಳೂರು ಏರ್‌ಪೋರ್ಟ್  ಪ್ರಯಾಣಿಕರಿಗೆ ಪ್ರಮುಖ ಸೂಚನೆ ನೀಡಿದೆ. ಹೆಚ್ಚುವರಿ ಭದ್ರತಾ ಕ್ರಮಗಳು ಮತ್ತು ಪ್ರಯಾಣಿಕರ ದಟ್ಟಣೆ ನಿರೀಕ್ಷೆ ಹಿನ್ನೆಲೆ, ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸುವಂತೆ ಕೋರಲಾಗಿದೆ. ಚೆಕ್-ಇನ್ ಮತ್ತು ಭದ್ರತಾ ತಪಾಸಣೆಗಳಿಗೆ ಹೆಚ್ಚಿನ ಸಮಯ ಮೀಸಲಿಡಿ, ವಿಳಂಬ ತಪ್ಪಿಸಲು ಸಹಕರಿಸಿ ಎಂದು ಏರ್‌ಪೋರ್ಟ್ ಆಡಳಿತ ಮಂಡಳಿ ತಿಳಿಸಿದೆ.

ವಿಮಾನ ಪ್ರಯಾಣಿಕರೇ ಗಮನಿಸಿ: ಬೆಂಗಳೂರು ಏರ್​​ಪೋರ್ಟ್​​ನಿಂದ ಮಹತ್ವದ ಸೂಚನೆ; ಮಾಹಿತಿ ಇಲ್ಲಿದೆ
ಪ್ರಯಾಣಿಕರ ತಪಾಸಣೆ (ಸಾಂದರ್ಭಿಕ ಚಿತ್ರ)
ನವೀನ್ ಕುಮಾರ್ ಟಿ
| Edited By: |

Updated on:Jan 21, 2026 | 2:57 PM

Share

ದೇವನಹಳ್ಳಿ, ಜನವರಿ 21: ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಏರ್​​ಪೋರ್ಟ್​​ಗೆ ಬರುವ‌ ಪ್ರಯಾಣಿಕರ ಮೇಲೆ ಹದ್ದಿ‌ನ ಕಣ್ಣಿಡಲಾಗಿದ್ದು, ಸ್ಕ್ರೀನಿಂಗ್, ಲಗೇಜ್ ಚೆಕ್ಕಿಂಗ್​, ಚೆಕ್ ಇನ್​ನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಸಿಐಎಸ್ಎಫ್​ ಸಿಬ್ಬಂದಿ ಕೈಗೊಂಡಿದ್ದು, ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಬೇಗ ಬರುವಂತೆ ಏರ್​ಪೋರ್ಟ್ ಆಡಳಿತ ಮಂಡಳಿ ಸೂಚನೆ ನೀಡಿದೆ. ದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ಭಾರೀ ಆಗಮನ ನಿರೀಕ್ಷೆ ಹಿನ್ನೆಲೆ ಈ ಮನವಿ ಮಾಡುತ್ತಿರೋದಾಗಿ ತಿಳಿಸಿದೆ.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗುತ್ತಿರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳಲು, ಚೆಕ್-ಇನ್ ಹಾಗೂ ಭದ್ರತಾ ತಪಾಸಣೆಗೆ ಹೆಚ್ಚುವರಿ ಸಮಯವನ್ನು ಗಮನದಲ್ಲಿಟ್ಟುಕೊಂಡು ಆಗಮಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಹೆಚ್ಚುವರಿ ಭದ್ರತಾ ಕ್ರಮಗಳ ಕಾರಣ ಪ್ರವೇಶ ದ್ವಾರಗಳು ಹಾಗೂ ಭದ್ರತಾ ತಪಾಸಣೆಯಲ್ಲಿ ಸಮಯ ಹೆಚ್ಚು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೊನೆ ಕ್ಷಣದ ವಿಳಂಬ ಅಥವಾ ವಿಮಾನ ತಪ್ಪುವ ಪರಿಸ್ಥಿತಿಯಿಂದ ದೂರ ಉಳಿಯಲು ತುಸು ಮೊದಲೇ ಆಗಮಿಸುವಂತೆ ಪ್ರಯಾಣಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಚೆಕ್-ಇನ್ ಸಮಯ ಮತ್ತು ಬೋರ್ಡಿಂಗ್ ವಿವರಗಳು ಸೇರಿದಂತೆ ವಿಮಾನಕ್ಕೆ ಸಂಬಂಧಿಸಿದ ಮಾಹಿತಿಗಾಗಿ ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಸಂಪರ್ಕಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಜಾಗತಿಕ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್​; ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!

ಎಕ್ಸ್​​ ಪೋಸ್ಟ್​​ ಮೂಲಕ ಮನವಿ

ಗಣರಾಜ್ಯೋತ್ಸವದ ದೀರ್ಘ ವಾರಾಂತ್ಯದ ವೇಳೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಜೊತೆಗೆ, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿರುವುದರಿಂದ, ಎಲ್ಲ ಪ್ರಯಾಣಿಕರು ಚೆಕ್-ಇನ್ ಮತ್ತು ಭದ್ರತಾ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯವನ್ನು ಮೀಸಲಿಡುವಂತೆ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ವಿಮಾನಕ್ಕೆ ಸಂಬಂಧಿಸಿದ ಮಾಹಿತಿಗಾಗಿ ದಯವಿಟ್ಟು ನಿಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಎಕ್ಸ್​​ ಪೋಸ್ಟ್​​ ಮೂಲಕ ವಿಮಾನ ನಿಲ್ದಾನ ಆಡಳಿತ ಮಂಡಳಿ ಮನವಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:57 pm, Wed, 21 January 26