AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್​; ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸರಕು ಸಾಗಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.ಕೃಷಿ, ಔಷಧ, ಆಟೋ ಬಿಡಿಭಾಗಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ರಫ್ತಾಗುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಆಗಿರುವ ಕೆಐಎಬಿ, ಬೆಂಗಳೂರಿನ ಜಾಗತಿಕ ಮಹತ್ವ ಹೆಚ್ಚಿಸಿದೆ. ಹೀಗೆ ಕಳೆದ ವರ್ಷ 5.2 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಸರಕು ಸಾಗಾಟ ಮಾಡುವ ಮೂಲಕ ಗಮನ ಸೆಳೆದಿದೆ.

ಜಾಗತಿಕ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್​; ಕೆಐಎಬಿಯಿಂದ ದಾಖಲೆಯ 5.2 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಾಟ!
ವಿಶ್ವಮಟ್ಟದ ಸಾಧನೆ ಮಾಡಿದ ಬೆಂಗಳೂರು ಏರ್​ಪೋರ್ಟ್
ನವೀನ್ ಕುಮಾರ್ ಟಿ
| Edited By: |

Updated on: Jan 16, 2026 | 12:32 PM

Share

ದೇವನಹಳ್ಳಿ, ಜನವರಿ 16: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಸರಕು ಸಾಗಾಟ ಕ್ಷೇತ್ರದಲ್ಲೂ ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಕೆಐಎಬಿಯಿಂದ ಒಟ್ಟು 5 ಲಕ್ಷ 20 ಸಾವಿರ 985 ಮೆಟ್ರಿಕ್ ಟನ್ ಸರಕು ಸಾಗಾಟವಾಗಿದ್ದು, ಇದು ವಿಮಾನ ನಿಲ್ದಾಣದ ಇತಿಹಾಸದಲ್ಲೇ ಮಹತ್ವದ ಸಾಧನೆಯಾಗಿದೆ. 2024ರ ಅವಧಿಗೆ ಹೋಲಿಸಿದರೆ 2025ರಲ್ಲಿ ಸರಕು ಸಾಗಾಟದಲ್ಲಿ ಶೇ5ರಷ್ಟು ಏರಿಕೆಯಾಗಿದೆ.

ಒಂದೇ ದಿನದಲ್ಲಿ ಸಾವಿರಾರು ಮೆಟ್ರಿಕ್ ಟನ್ ಸರಕು ಸಾಗಾಟ

ಆಗಸ್ಟ್ 7ರಂದು ಒಂದೇ ದಿನದಲ್ಲಿ 2,207 ಮೆಟ್ರಿಕ್ ಟನ್ ಸರಕು ಸಾಗಾಟ ಮಾಡುವ ಮೂಲಕ ಕೆಐಎಬಿ ಗರಿಷ್ಠ ದೈನಂದಿನ ಸರಕು ಸಾಗಾಟದ ದಾಖಲೆಯನ್ನೂ ತನ್ನ ಮುಡಿಗೆ ಏರಿಸಿಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶೀಯ ಹಾಗೂ ಅಂತಾರಾಷ್ಟ್ರೀಯವಾಗಿ ಒಟ್ಟು 37 ವಿಮಾನ ನಿಲ್ದಾಣಗಳಿಗೆ ಸರಕು ಸಾಗಾಟ ನಡೆಯುತ್ತಿದೆ. ಭಾರತದ ಅತಿದೊಡ್ಡ ದೇಶೀಯ ಸರಕು ಟರ್ಮಿನಲ್ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕೆಐಎಬಿ, 8.2 ಎಕರೆ ವಿಸ್ತೀರ್ಣದಲ್ಲಿ 3 ಲಕ್ಷ 70 ಸಾವಿರ ಚದರ ಅಡಿ ವಿಸ್ತಾರದ ಎ-ಗ್ರೇಡ್ ಗೋದಾಮು ಹೊಂದಿದೆ.

ಜಾಗತಿಕ ಮಹತ್ವ ಇನ್ನಷ್ಟು ಹೆಚ್ಚು

ಕೆಐಎಬಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನಗಳು, ಔಷಧಿಗಳು, ಆಟೋ ಭಾಗಗಳು ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಸಾಗಾಟ ನಡೆಯುತ್ತಿದೆ. ಚಿಕಾಗೋ, ಸಿಂಗಾಪುರ, ಲಂಡನ್, ಹೀಥ್ರೋ, ಫ್ರಾಂಕ್‌ಫರ್ಟ್ ಮತ್ತು ಲೀಪ್ಜಿಗ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ನಗರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ನಡೆಯುತ್ತಿದೆ. ಈ ಸಾಧನೆಯಿಂದ ಬೆಂಗಳೂರು ವಿಮಾನ ನಿಲ್ದಾಣದ ಜಾಗತಿಕ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಲಕ್ಷುರಿಯಾಗಿದೆ  ನೋಡಿ ಬೆಂಗಳೂರಿನ ಮಹೇಶ್ ಬಾಬು ಮಲ್ಟಿಪ್ಲೆಕ್ಸ್
ಲಕ್ಷುರಿಯಾಗಿದೆ  ನೋಡಿ ಬೆಂಗಳೂರಿನ ಮಹೇಶ್ ಬಾಬು ಮಲ್ಟಿಪ್ಲೆಕ್ಸ್
‘ಗಿಲ್ಲಿ ಹೀರೋ ಆಗೋದು ಪಕ್ಕಾ, ಜಗ್ಗೇಶ್ ಭವಿಷ್ಯ ನಿಜವಾಗುತ್ತೆ’
‘ಗಿಲ್ಲಿ ಹೀರೋ ಆಗೋದು ಪಕ್ಕಾ, ಜಗ್ಗೇಶ್ ಭವಿಷ್ಯ ನಿಜವಾಗುತ್ತೆ’
ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ರಹಸ್ಯ ಬಯಲು!
ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಚಡಚಣದಲ್ಲಿ ಪತ್ತೆ, ರಹಸ್ಯ ಬಯಲು!
ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯ ಕಾಶ್ಮೀರಿ ವ್ಯಕ್ತಿಯ ಉತ್ತರ
ನಾನೇನು ಪಾಕಿಸ್ತಾನಿನಾ ನಾನೂ ಭಾರತೀಯ ಕಾಶ್ಮೀರಿ ವ್ಯಕ್ತಿಯ ಉತ್ತರ
ಬಿಗ್​​ಬಾಸ್ ಮನೆಗೆ ಬಂದ ‘ಗಿಚ್ಚಿ ಗಿಲಿ ಗಿಲಿ’ ತಂಡ: ನಗುವೋ ನಗು
ಬಿಗ್​​ಬಾಸ್ ಮನೆಗೆ ಬಂದ ‘ಗಿಚ್ಚಿ ಗಿಲಿ ಗಿಲಿ’ ತಂಡ: ನಗುವೋ ನಗು
ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ?
ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ?
ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ
ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ
ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು
ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು
ಪೂಂಚ್​ನಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ವಾರದಲ್ಲಿ ಮೂರನೇ ಘಟನೆ
ಪೂಂಚ್​ನಲ್ಲಿ ಪಾಕಿಸ್ತಾನಿ ಡ್ರೋನ್ ಪತ್ತೆ, ವಾರದಲ್ಲಿ ಮೂರನೇ ಘಟನೆ
ಮಾದಪ್ಪನಲ್ಲಿಗೆ ಪಾದಯಾತ್ರೆ ಬರುವ ಭಕ್ತರೇ ಎಚ್ಚರ: ಶುರುವಾಗಿದೆ ಚಿರತೆ ಕಾಟ
ಮಾದಪ್ಪನಲ್ಲಿಗೆ ಪಾದಯಾತ್ರೆ ಬರುವ ಭಕ್ತರೇ ಎಚ್ಚರ: ಶುರುವಾಗಿದೆ ಚಿರತೆ ಕಾಟ