ಕೊರೊನಾ ಲಸಿಕೆಯನ್ನು ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ಸಂಗ್ರಹಣೆ ಮಾಡಲಾಗುವುದು.. ಯಾವುದದು?

ಕೊರೊನಾ ಲಸಿಕೆಯನ್ನು ಬೆಂಗಳೂರಿನ ಈ ಆಸ್ಪತ್ರೆಯಲ್ಲಿ ಸಂಗ್ರಹಣೆ ಮಾಡಲಾಗುವುದು.. ಯಾವುದದು?

ಬೆಂಗಳೂರು: ದೇಶದಲ್ಲಿ ಶೀಘ್ರದಲ್ಲೇ ಕೊರೊನಾ ಲಸಿಕೆ‌ ಲಭ್ಯವಾಗುವ ಹಿನ್ನೆಲೆಯಲ್ಲಿ ಮೊದಲ‌ ಹಂತದಲ್ಲಿ ಕೊರೊನಾ ಲಸಿಕೆ ಸಂಗ್ರಹಿಸಲು ಸಿದ್ಧತೆ ನಡೆಸಲಾಗುತ್ತದೆ. ಅದರಲ್ಲೂ ನಗರಕ್ಕೆ ಬರುವ ಮೊದಲ ಹಂತದ ಲಸಿಕೆ ಸಂಗ್ರಹಿಸಿಡಲಾಗುವ ಆಸ್ಪತ್ರೆಯ ಸುತ್ತಲೂ ಹದ್ದಿನ ಕಣ್ಣು ಇಡಲಾಗುತ್ತಿದೆ. ಹೌದು, ಕೊರೊನಾ ವ್ಯಾಕ್ಸಿನ್ ಸಂಗ್ರಹಿಸಲು ಬಿಬಿಎಂಪಿಯಿಂದ ಸಿದ್ಧತೆ ನಡೆಯುತ್ತಿದ್ದು ನಗರದ ಟೌನ್​​ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಬಿಬಿಎಂಪಿ ದಾಸಪ್ಪ ಆಸ್ಪತ್ರೆ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿದೆ. ಜೊತೆಗೆ, ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಿಸಲು ಅಗತ್ಯ […]

KUSHAL V

|

Nov 19, 2020 | 11:43 AM

ಬೆಂಗಳೂರು: ದೇಶದಲ್ಲಿ ಶೀಘ್ರದಲ್ಲೇ ಕೊರೊನಾ ಲಸಿಕೆ‌ ಲಭ್ಯವಾಗುವ ಹಿನ್ನೆಲೆಯಲ್ಲಿ ಮೊದಲ‌ ಹಂತದಲ್ಲಿ ಕೊರೊನಾ ಲಸಿಕೆ ಸಂಗ್ರಹಿಸಲು ಸಿದ್ಧತೆ ನಡೆಸಲಾಗುತ್ತದೆ. ಅದರಲ್ಲೂ ನಗರಕ್ಕೆ ಬರುವ ಮೊದಲ ಹಂತದ ಲಸಿಕೆ ಸಂಗ್ರಹಿಸಿಡಲಾಗುವ ಆಸ್ಪತ್ರೆಯ ಸುತ್ತಲೂ ಹದ್ದಿನ ಕಣ್ಣು ಇಡಲಾಗುತ್ತಿದೆ. ಹೌದು, ಕೊರೊನಾ ವ್ಯಾಕ್ಸಿನ್ ಸಂಗ್ರಹಿಸಲು ಬಿಬಿಎಂಪಿಯಿಂದ ಸಿದ್ಧತೆ ನಡೆಯುತ್ತಿದ್ದು ನಗರದ ಟೌನ್​​ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.

ಬಿಬಿಎಂಪಿ ದಾಸಪ್ಪ ಆಸ್ಪತ್ರೆ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿದೆ. ಜೊತೆಗೆ, ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಸಂಗ್ರಹಿಸಲು ಅಗತ್ಯ ಸಿದ್ಧತೆ ಮಾಡುತ್ತಿದೆ. ಇದರ ಅಂಗವಾಗಿ, ಕೋಲ್ಡ್ ಸ್ಟೋರೇಜ್ ಸೌಲಭ್ಯ ಕಲ್ಪಿಸುತ್ತಿದೆ.

ಜೊತೆಗೆ, ಕೋಲ್ಡ್ ಸ್ಟೋರೇಜ್ ಇರುವ ಆಸ್ಪತ್ರೆಗಳಲ್ಲಿಯೂ ಸಂಗ್ರಹ ಮಾಡಲು ವ್ಯವಸ್ಥೆ ನೀಡಲಾಗುತ್ತಿದೆ. ಕೊರೊನಾ ಲಸಿಕೆಯನ್ನ ಸಾಗಿಸಲು BBMP ಅಧಿಕಾರಿಗಳು ವ್ಯಾಕ್ಸಿನ್ ವ್ಯಾನ್ ವ್ಯವಸ್ಥೆ ಸಹ ಮಾಡಿದ್ದಾರೆ.

ಲಸಿಕೆ ಸ್ಟೋರೇಜ್ ಕೇಂದ್ರಕ್ಕೆ ಆಯುಕ್ತರು ಭೇಟಿ ಟೌನ್‌ಹಾಲ್‌ನ ದಾಸಪ್ಪ ಆಸ್ಪತ್ರೆಯಲ್ಲಿರುವ ಕೊರೊನಾ ಲಸಿಕೆ ಸ್ಟೋರೇಜ್ ಕೇಂದ್ರಕ್ಕೆ ಬಿಬಿಎಂಪಿ ಆಯುಕ್ತರು ಭೇಟಿ ಕೊಟ್ಟರು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ದಾಸ್ತಾನು ಕೇಂದ್ರದ ಲಸಿಕೆ ಸ್ಟೋರ್ ಮಾಡುವ ಬಾಕ್ಸ್‌ಗಳ ಪರಿಶೀಲನೆ ನಡೆಸಿದರು.

Follow us on

Related Stories

Most Read Stories

Click on your DTH Provider to Add TV9 Kannada